• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಸಿಸಿಬಿ, ಸಿಐಡಿ ಈಗ ಎಸ್ ಐ ಟಿ ತನಿಖೆ ಜಾರಿಯಲ್ಲಿದೆ. ಶ್ರೀಕಿಯನ್ನ ಅರೆಸ್ಟ್ ಮಾಡಿ ಸಿಸಿಬಿ ಕೋಕಾ ಕಾಯ್ದೆಯನ್ನೂ ಜಾರಿಗೊಳಿಸಿದ್ದ ಇಡಿ..

ಪ್ರತಿಧ್ವನಿ by ಪ್ರತಿಧ್ವನಿ
April 20, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?
Share on WhatsAppShare on FacebookShare on Telegram

ಬೆಂಗಳೂರು :  ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (Enforcement Directorate) ದಾಳಿ ನಡೆಸಿದೆ. ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಹಾಗೂ ಮೊಹಮ್ಮದ್ ನಲಪಾಡ್ ಮನೆಯ ಮೇಲೆ ದಾಳಿ ನಡೆದಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ADVERTISEMENT
Siddaramaiah : ಮಸೂದೆ ಸೋಲುತ್ತೆ ಅಂತ ಗೊತ್ತಿದ್ರೂ ಮಂಡಿಸಿದ್ದೇ ರಾಜಕೀಯ ಎಂದ ಸಿಎಂ #pratidhvani

ಸಿಆರ್‌ಪಿಎಫ್ ಪೊಲೀಸರ ಭದ್ರತೆಯಲ್ಲಿ ಅಶೋಕನಗರದ ಶಾಸಕ ಹ್ಯಾರೀಸ್ ನಿವಾಸದಲ್ಲಿ ತಪಾಸಣೆ‌ ನಡೆಸುತ್ತಿರುವ ಅಧಿಕಾರಿಗಳು, ಹ್ಯಾಕರ್ ಶ್ರೀಕಿ ಜೊತೆಗೆ ಹ್ಯಾರೀಸ್ ಪುತ್ರ ನಲಪಾಡ್ ಆರ್ಥಿಕ ವ್ಯವಹಾರದ ನಂಟಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಪ್ರಮುಖವಾಗಿ ಶ್ರೀಕಿ ಶ್ರೀಕೃಷ್ಣ ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಆಗಿದ್ದಾನೆ. ಕೋಟಿ ಕೋಟಿ ಮೌಲ್ಯದ ಕ್ರಿಪ್ಟೋಕರೆನ್ಸಿ ಕಳ್ಳತನ ಮತ್ತು ಹ್ಯಾಕಿಂಗ್ ಮಾಡಿದ್ದ ಶ್ರೀಕಿ ಅಂತಾರಾಷ್ಟ್ರೀಯ ಹ್ಯಾಕರ್‌ ಆಗಿದ್ದಾನೆ. ಖ್ಯಾತ ಬಿಟ್‌ಫೈನೆಕ್ಸ್ (Bitfinex) ಹಾಗೂ ಯುನೋಕಾಯಿನ್ (Unocoin) ತರಹದ ಎಕ್ಸ್‌ಚೇಂಜ್‌ಗಳನ್ನು ಹ್ಯಾಕ್ ಮಾಡಿದ್ದನು ಎಂಬ ಆರೋಪವೂ ಇದೆ. ಇನ್ನೂ ಈತನು ನೂರಾರು ಬಿಟ್‌ಕಾಯಿನ್‌ಗಳನ್ನು ಕದ್ದು, ಪ್ರಭಾವಿಗಳಿಗೆ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಕಳೆದ 2017 ರಲ್ಲಿ ಯುನೋಕಾಯಿನ್ (Unocoin) ಹ್ಯಾಕಿಂಗ್ ಮೂಲಕ ಸುಮಾರು 60.6 ಬಿಟ್‌ಕಾಯಿನ್‌ಗಳ ಕಳ್ಳತನ ಮಾಡಿದ್ದ. ಅಲ್ಲದೆ ಬಿಟ್‌ ಫೈನೆಕ್ಸ್‌ ( Bitfinex )ಎಂಬ ಅಂತರರಾಷ್ಟ್ರೀಯ ಎಕ್ಸ್‌ಚೇಂಜ್‌ನಿಂದ 400 ಬಿಟ್‌ಕಾಯಿನ್‌ಗಳನ್ನು ಕದ್ದಿರುವುದಾಗಿಈ ಹಿಂದೆ ಶ್ರೀಕಿ ಒಪ್ಪಿಕೊಂಡಿದ್ದನು.

ಇದನ್ನೂ ಓದಿ : ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

ಶ್ರೀಕಿ ಬಂಧಿಸಿದ್ದ ಸಿಸಿಬಿ..

ಅಲ್ಲದೆ ತಾನು ಕದ್ದ ಬಿಟ್‌ಕಾಯಿನ್‌ಗಳನ್ನು ‘ಘೋಸ್ಟ್ ಪ್ರೊಟೊಕಾಲ್’ ಮೂಲಕ ಅಡಗಿಸಿಟ್ಟಿದ್ದ ಶ್ರೀಕಿ, ಆ ಬಳಿಕ ವರ್ಗಾವಣೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಿಸಿಬಿ, ಸಿಐಡಿ ಈಗ ಎಸ್ ಐ ಟಿ ತನಿಖೆ ಜಾರಿಯಲ್ಲಿದೆ. ಶ್ರೀಕಿಯನ್ನ ಅರೆಸ್ಟ್ ಮಾಡಿ ಸಿಸಿಬಿ ಕೋಕಾ ಕಾಯ್ದೆಯನ್ನೂ ಜಾರಿಗೊಳಿಸಿತ್ತು.

ಈ ಪ್ರಕರಣದ ತನಿಖೆ ಕರ್ನಾಟಕ ಪೊಲೀಸರು ದಾಖಲಿಸಿದ ಅನೇಕ ಎಫ್‌ಐಆರ್‌ಗಳು ಮತ್ತು ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ನಡೆಯುತ್ತಿದೆ. ಮುಖ್ಯವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳ ಹ್ಯಾಕಿಂಗ್, ಬಿಟ್‌ಕಾಯಿನ್ ಕಳವು, ದಬ್ಬಾಳಿಕೆ (extortion) ಹಾಗೂ Narcotic Drugs and Psychotropic Substances Act, 1985 ಉಲ್ಲಂಘನೆಗಳಿಗೆ ಸಂಬಂಧಿಸಿದೆ ಆರೋಪಗಳು ಈತನ ಹೆಚ್ಚಾಗಿವೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆ..?

ಈತನ ವಿಚಾರದಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕಾಗುತ್ತದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿಯೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. (Prevention of Money Laundering Act) 2002ರ ಕಾಯ್ದೆಯ ಅಡಿಯಲ್ಲಿ ನಡೆದ ತನಿಖೆಯ ವಿಧಾನವನ್ನು ನೋಡಿದಾಗ ಹಂತ ಹಂತದಲ್ಲೂ ಆರೋಪಿಯ ಚಲನವಲನಗಳ ಮೇಲೆ ನಿಗಾ ಇಟ್ಟಿರುತ್ತದೆ ಅಧಿಕಾರಿಗಳ ತಂಡ (modus operandi) . ಹೀಗಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ತನಿಖಾ ಪ್ರಕ್ರಿಯೆ ಹೇಗಿರುತ್ತದೆ ಎಂದು ಅರಿತುಕೊಂಡಾಗ.

N A Harris house ED raid: ಶಾಸಕ ಹ್ಯಾರಿಸ್ ಮತ್ತು ಮಗ ನಲಪಾಡ್ ಮನೆ ಮೇಲೆ ಇಡಿ ದಾಳಿ #pratidhvani
  • ವೆಬ್‌ಸೈಟ್‌ಗಳು/ವಾಲೆಟ್‌ಗಳನ್ನು ಹ್ಯಾಕ್ ಮಾಡಿ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು (VDAs) ಕಳವು ಮಾಡುವುದು (ಅಪರಾಧದ ಆದಾಯ). ಇದರ ಬಗ್ಗೆಯೂ ಕೂಲಂಕುಷ ತನಿಖೆಯಾಗುತ್ತದೆ.
  • ಅಲ್ಲದೆ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಡೇಟಾ/ಹಣ ಕಳವು ಮಾಡುವುದು (ಅಪರಾಧದ ಆದಾಯ), ಕಳುವಾದ VDAs ಅನ್ನು ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುವುದು (Routing). ಇದರ ಕುರಿತೂ ಅಧಿಕಾರಿಗಳಿಂದ ತೀವ್ರ ಮಾಹಿತಿ ಕಲೆ ಹಾಕಲಾಕಲಾಗುತ್ತದೆ.
  • ಇನ್ನೂ ಮಾರಾಟದಿಂದ ಬಂದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುವುದು (Layering), ಆ ಹಣವನ್ನು ಶ್ರೀಕೃಷ್ಣ ಮತ್ತು ಅವರ ಸಹಚರರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ಸೇರಿದಂತೆ ನಾನಾ ಆಯಾಮಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಯುತ್ತಿದೆ.

ಕೇಸ್‌ ಇರೋದು ಶ್ರೀಕಿ ಮೇಲೆ ಹ್ಯಾರಿಸ್‌ ಮನೆ ಮೇಲ್ಯಾಕೆ ದಾಳಿ..?

ಇಂದು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ಬೆಂಗಳೂರಿನ ಶಾಂತಿ ನಗರದ ಶಾಸಕ ಎನ್.ಎ.ಹ್ಯಾರಿಸ್‌ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಅಲ್ಲದೆ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪ್ಪಾಡ್‌ ಮನೆ ಮೇಲೂ ದಾಳಿಯಾಗಿದೆ. ಆದರೆ ಇಡಿ ದಾಳಿಗೂ ನಲಪ್ಪಾಡ್‌ಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಅಸಲಿಗೆ ನಲಪ್ಪಾಡ್‌ ಹ್ಯಾಕರ್‌ ಶ್ರೀಕಿ ಜೊತೆಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಂಬೆಳಿಗ್ಗೆ ಹ್ಯಾರಿಸ್‌ ಮನೆ ಬಾಗಿಲು ತಟ್ಟಿದ್ದಾರೆ. ದಾಳಿಯ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಿದೆ.

ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲಾ..

ಇನ್ನೂ ಹ್ಯಾರಿಸ್‌ ಮನೆ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.

Tags: Bitcoin CaseBJPCM Siddaramaiahcongress karnatakaCongress MLADK ShivakumarED raidEnforcement DirectorateGovernment of IndiaHacker Shree KrishnaHacker ShreekiMohammed Haris NalappadN A HarisPML ActPratidhvaniYouth Congress Leadr
Previous Post

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

Next Post

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

May 17, 2026
ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

May 17, 2026
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
Next Post
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada