ಬೆಂಗಳೂರು: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ತಿಂಗಳ ಬಳಿಕ ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ರಾಜ್ಯ ಸಚಿವ ಸಂಪುಟದ ಒಟ್ಟು ಸದಸ್ಯರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ನಿನ್ನೆಯಷ್ಟೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಈ ಬಾರಿ ಹೊಸ ನಾಯಕರಿಗೂ ಮಣೆ ಹಾಕಲಾಗಿದೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗಬಹುದು ಎನ್ನುವ ಕುತೂಹಲ ಜೋರಾಗಿದ್ದು, ಇದೀಗ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ವೈರಲ್ ಆಗತ್ತಿರುವ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ.
*ಪಿ.ಎಂ ನರೇಂದ್ರಸ್ವಾಮಿ- ಸಮಾಜ ಕಲ್ಯಾಣ ಇಲಾಖೆ
*ಬಸವರಾಜ ರಾಯರೆಡ್ಡಿ-ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ
*ಎಸ್.ಎಸ್ ಮಲ್ಲಿಕಾರ್ಜುನ್- ತೋಟಗಾರಿಕೆ ಮತ್ತು ಗಣಿ- ಭೂವಿಜ್ಞಾನ ಇಲಾಖೆ
*ಎನ್. ಚಲುವರಾಯಸ್ವಾಮಿ- ಕೃಷಿ ಇಲಾಖೆ
*ಕೆ.ಎಂ ಶಿವಲಿಂಗೇಗೌಡ- ವಸತಿ ಇಲಾಖೆ
*ಲಕ್ಷ್ಮಣ್ ಸವದಿ -ಸಹಕಾರ ಹಾಗೂ ಸಕ್ಕರೆ ಇಲಾಖೆ
*ಮಧು ಬಂಗಾರಪ್ಪ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
*ಜಮೀರ್ ಅಹ್ಮದ್ ಖಾನ್-ವಕ್ಫ್ ,ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
*ಕೆ.ಎನ್ ಬಸವಂತಪ್ಪ- ಪೌರಾಡಳಿತ ಇಲಾಖೆ
*ವಿಜಯಾನಂದ ಕಾಶಪ್ಪನವರ್-ಕೈಮಗ್ಗ,ಜವಳಿ ಇಲಾಖೆ,ಕೃಷಿ ಮಾರುಕಟ್ಟೆ ಇಲಾಖೆ
*ಅಜಯ್ ಸಿಂಗ್-ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು ಇಲಾಖೆ
*ರುದ್ರಪ್ಪ ಲಮಾಣಿ-ಅಬಕಾರಿ ಇಲಾಖೆ
*ಹೆಚ್.ಸಿ ಬಾಲಕೃಷ್ಣ-ಅರಣ್ಯ, ಜೀವಿಶಾಸ್ತ್ರ, ಮತ್ತು ಪರಿಸರ ಇಲಾಖೆ
*ರಿಜ್ವಾನ್ ಅರ್ಷದ್- ಉನ್ನತ ಶಿಕ್ಷಣ ಇಲಾಖೆ
*ಪುಟ್ಟರಂಗಶೆಟ್ಟಿ-ಪಶುಸಂಗೋಪನೆ ಹಾಗೂ ರೇಷ್ಮೆಇಲಾಖೆ
*ಬಿ.ನಾಗೇಂದ್ರ -ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಇಲಾಖೆ
*ಸಂತೋಷ್ ಲಾಡ್- ಕಾರ್ಮಿಕ ಇಲಾಖೆ
*ಶಿವರಾಜ ತಂಗಡಗಿ- ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ
*ಟಿ.ರಘುಮೂರ್ತಿ-ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ







