ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ (Bjp Jana Keisha yatre) ಆರಂಭಿಸಿದ್ದು ಈಗಾಗಲೇ ಮೊದಲ ಹಂತ ಯಶಸ್ವಿಯಾಗಿದೆ.ಈ ಬೆನ್ನಲ್ಲೇ ಎರಡನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ ನಾಳೆಯಿಂದ ಆರಂಭವಾಗಬೇಕಿದೆ.

ರಾಜ್ಯದ ಜನರಿಗೆ ಸರ್ಕಾರ ಬೆಲೆ ಏರಿಕೆಯ ಬರೆ (Price hike) ಹಾಕಿರುವ ಹಿನ್ನಲೆ ಬಿಜೆಪಿಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆದಿದ್ದು, ಈಗಾಗ್ಲೆ ಮೊದಲ ಹಂತದ ಯಾತ್ರೆ ಮುಕ್ತಾಯವಾಗಿದೆ.
ಇನ್ನು ನಾಳೆಯಿಂದ ಪ್ರಬಲ ವೀರಶೈವ-ಲಿಂಗಾಯತ (Veerashaiva Lingayat) ಸಮುದಾಯದ ಮತಗಳೇ ನಿರ್ಣಾಯವಾಗಿರುವ ಕಿತ್ತೂರು ಕರ್ನಾಟಕ (Kittur Karnataka) ಭಾಗದಲ್ಲಿ 2ನೇ ಹಂತದ ಜನಾಕ್ರೋಶ ಯಾತ್ರೆ ನಡೆಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.ಈ ಮೂಲಕ ವಿಜಯೇಂದ್ರ ಸಂಘಟನೆ ಜೊತೆಗೆ ವೋಟ್ ಬ್ಯಾಂಕ್ (Bjp vote bank) ಭದ್ರಗೊಳಿಸಿಕೊಳ್ಳಲು ಮುಂದಾಗಿದ್ದಾರೆ.

ಇದರ ಜೊತೆಗೆ ಯತ್ನಾಳ್ (Yatnal) ರನ್ನು ಬಿಜೆಪಿ ಯಿಂದ ಉಚ್ಚಾಟನೆ ಮಾಡಿದ ನಂತರದಲ್ಲಿ ಈ ಭಾಗಕ್ಕೆ ವಿಜಯೇಂದ್ರ ಮೊದಲ ಬಾರಿಗೆ ಆಗಮಿಸುತ್ತಿದ್ದು, ಯಾರು ಯಾರಿಗೆ ಸೆಡ್ಡು ಹೊಡೆಯಲಿದ್ದಾರೆ..?ಕಾರ್ಯಕರ್ತರು ಯಾರ ಪರವಾಗಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.