ಜೂನ್ 2 ರ ಬುಧವಾರ ಗೋವಾದ ಬಾಂಬೆ ಹೈಕೋರ್ಟ್, ತರುಣ್ ತೇಜ್ಪಾಲ್ ಅವರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಖಂಡಿಸಿದ್ದು “ಅತ್ಯಾಚಾರ ಸಂತ್ರಸ್ತರಿಗೆ ಕೈಪಿಡಿ” ಇರುವಂತೆ ತೋರುತ್ತಿದೆ .ಆರೋಪಿಗಳ ಅಪರಾಧವನ್ನು ಕಂಡುಹಿಡಿಯುವುದಕ್ಕಿಂತ. ಅತ್ಯಾಚಾರದ ಸಮಯದಲ್ಲಿ ಮತ್ತು ನಂತರ ಸಂತ್ರಸ್ತೆ ಹೇಗೆ ವರ್ತಿಸಬೇಕು ಎಂದು ಪಟ್ಟಿ ಮಾಡಿದಂತಾಗುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯವು ಗೋವಾ ಸರ್ಕಾರದ ಮನವಿಯನ್ನು ಒಪ್ಪಿಕೊಂಡು ತೇಜ್ಪಾಲ್ಗೆ ನೋಟಿಸ್ ನೀಡಿತು. ಜೂನ್ 24 ರಂದು ವಿಚಾರಣೆ ನಡೆಯಲಿದೆ.
ಮೇ 21 ರಂದು ತೇಜ್ಪಾಲ್ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ ನಂತರ, ಗೋವಾ ಸರ್ಕಾರವು ಮೇ 25 ರಂದು ಹೈಕೋರ್ಟ್ಗೆ ಮೊರೆ ಹೋಗಿ, ಇದು ಮರುವಿಚಾರಣೆಗೆ ಅರ್ಹವಾದ ಪ್ರಕರಣ ಎಂದು ತಿಳಿಸಿತ್ತು. ಏಕೆಂದರೆ ತೀರ್ಪನ್ನು ಪೂರ್ವಾಗ್ರಹದಿಂದ ಮತ್ತು ಪಿತೃಪ್ರಧಾನ ವ್ಯವಸ್ಥೆಯಂತೆ ತೀರ್ಪು ನೀಡಲಾಗಿದ್ದು ವಿಚಾರಣಾ ನ್ಯಾಯಾಲಯವು ಸಂತ್ರಸ್ತೆಯ ಆಘಾತದ ನಂತರದ ನಡವಳಿಕೆಯ ಬಗ್ಗೆ ತಿಳುವಳಿಕೆಯನ್ನು ಹೊಂದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಕಳೆದ ವಾರ ಹೈಕೋರ್ಟ್ನ ಗೋವಾ ಪೀಠದ ಮುಂದೆ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ವಾರ ತಿದ್ದುಪಡಿ ಮಾಡಲಾಗಿದ್ದು, ತೀರ್ಪನ್ನು ದಾಖಲಿಸಲು ಮತ್ತು ತೇಜ್ಪಾಲ್ ಅವರನ್ನು ಖುಲಾಸೆಗೊಳಿಸುವುದರ ವಿರುದ್ಧ ಹೆಚ್ಚಿನ ಸಾಕ್ಷ್ಯಗಳನ್ನು ಒಳಗೊಂಡಿದೆ.
ಪ್ರಕರಣವನ್ನು ಒಪ್ಪಿಕೊಂಡ ನ್ಯಾಯಮೂರ್ತಿ ಎಸ್.ಸಿ.ಗುಪ್ಟೆ ಅವರ ಏಕ-ನ್ಯಾಯಾಧೀಶರ ನ್ಯಾಯಪೀಠವು ಬುಧವಾರ, “ಇದು ಅತ್ಯಾಚಾರ ಸಂತ್ರಸ್ತೆಯರಿಗದ ತಮ್ಮ ವರ್ತನೆಯ ಬಗ್ಗೆ ಒಂದು ರೀತಿಯ ಕೈಪಿಡಿಯನ್ನು ನಿಗದಿಪಡಿಸಿದಂತಾಗಿದೆ” ಎಂದು ಹೇಳಿದೆ. ವಿಚಾರಣಾ ನ್ಯಾಯಾಲಯವು ಮೇ 21 ರಂದು ನೀಡಿದ ತೀರ್ಪು, ಸಿಸಿಟಿವಿ ದೃಶ್ಯಾವಳಿಗಳಂತಹ ಸಾಕ್ಷ್ಯಗಳು ಪ್ರಾಸಿಕ್ಯೂಷನ್ ಪ್ರಕರಣವನ್ನು ಸಾಬೀತುಪಡಿಸುವುದಿಲ್ಲ ಎಂದು ಹೇಳಿತ್ತು. ಅಲ್ಲದೆ ಸಂತ್ರಸ್ತೆಯ ನಡವಳಿಕೆಯನ್ನು ಪ್ರಶ್ನಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಸೆಷನ್ಸ್ ನ್ಯಾಯಾಧೀಶ ಕ್ಷಮಾ ಜೋಶಿ “ಸತತ ಎರಡು ದಿನಗಳ ಕಾಲ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಪ್ರತಿಪಾದಿಸುವ ಸಂತ್ರಸ್ತೆ ಆ ಆಘಾತದ ನಂತರ ಸಾಮಾನ್ಯವಾಗಿ ತೋರುವ ಯಾವ ನಡವಳಿಕೆಯನ್ನೂ ತೋರುವುದಿಲ್ಲ ” ಎಂದು ತೀರ್ಪು ಕೊಟ್ಟಿದ್ದಾರೆ.
ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು 2013 ರ ನವೆಂಬರ್ 19 ರಂದು ತೇಜ್ಪಾಲ್ ಸಂತ್ರಸ್ತೆಗೆ ಕಳುಹಿಸಿದ “ಔಪಚಾರಿಕ ಕ್ಷಮೆಯಾಚನೆ ಇ-ಮೇಲ್”ನ್ನು ಸಾಕ್ಷಿಯಾಗಿ ಪರಿಗಣಿಸುವಂತಿಲ್ಲ ಎಂಬ ವಿಚಾರಣ ನ್ಯಾಯಾಲಯದ ನಿರ್ಧಾರವನ್ನು ಸರ್ಕಾರವು ಪ್ರಶ್ನಿಸಿದ್ದು “ಆರೋಪಿಯು ಪಾಪಪ್ರಜ್ಞೆಯಿಂದ ಕಳುಹಿಸಿದ ಈ ಮೇಲ್ ಅವರ ಅಪರಾಧವನ್ನು ಸಂಶಯಕ್ಕೆಡೆಯಿಲ್ಲದಂತೆ ಸಾಬೀತು ಪಡಿಸುತ್ತದೆ” ಎಂದಿದೆ.
ವಿಚಾರಣಾ ನ್ಯಾಯಾಲಯವು ಇಮೇಲ್ ಸಾಕ್ಷಿಯನ್ನು ಅಪರಾಧವನ್ನು ಒಪ್ಪಿಕೊಂಡತಲ್ಲ ಎಂದು ಪರಿಗಣಿಸಿ “ಆಪಾದಿತ ವೈಯಕ್ತಿಕ ಕ್ಷಮೆಯಾಚನೆಯಲ್ಲಿ ತಪ್ಪೊಪ್ಪಿಗೆಯು ಸೂಕ್ಷ್ಮವಾಗಿ ಅಥವಾ ಸೂಚ್ಯವಾಗಿ ವ್ಯಕ್ತವಾಗಿಲ್ಲ. ಆರೋಪಿಯ ಮೇಲೆ ಹೊರಿಸಲಾದ ಯಾವುದೇ ಆರೋಪಗಳ ಮೇಲೆ ಸಂಬಂಧವಿರುವಂತೆ ತೋರುವುದಿಲ್ಲ. ಆದ್ದರಿಂದ ಈಮೇಲ್ ಕ್ಷಮೆಯಾಚನೆಯಲ್ಲ ಆದರೆ (ದೂರುದಾರರ) ಯಾವುದೋ ಅನ್ಕಂಫರ್ಟ್ ಅನ್ನು ಕಡಿಮೆ ಮಾಡುವ ಪ್ರಯತ್ನ…” ಎಂದು ಹೇಳಿದೆ.
ಮಹಿಳೆ ಅತ್ಯಾಚಾರದ ನಂತರ ಸಾಮಾನ್ಯವಾಗಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ವಿಚಾರಣಾ ನ್ಯಾಯಾಲಯದ ಆವಿಷ್ಕಾರವು “ಕಾನೂನಿನಲ್ಲಿ ಸಮರ್ಥನೀಯವಲ್ಲ ಮತ್ತು ಪೂರ್ವಾಗ್ರಹ ಮತ್ತು ಪಿತೃಪ್ರಧಾನ ಸಮಾಜದ ಬಣ್ಣದಿಂದ ಕೂಡಿದೆ” ಎಂದು ಮೇಲ್ಮನವಿ ಹೇಳುತ್ತದೆ. ತೀರ್ಪಿನ ಹಲವಾರು ಭಾಗಗಳನ್ನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಹೈಕೋರ್ಟನ್ನು ಕೇಳಿಕೊಂಡಿದೆ.
ಸಂತ್ರಸ್ತೆಯ ಮೇಲೆ ಹಲ್ಲೆಯಾದಾಗಿನ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೊಟೋಗಳಲ್ಲಿ ಸಂತ್ರಸ್ತೆಯು ಹರ್ಷಚಿತ್ತದಿಂದ ಮತ್ತು ನಗುತ್ತಿರುವಂತೆ ತೋರಿಸುತ್ತವೆ ಎಂದು ಕೋರ್ಟ್ ಹೇಳಿದೆ. ಆದರೆ “ಕೋರ್ಟ್ಗೆ ಆಘಾತದ ನಂತರದ ನಡವಳಿಕೆಯ ಬಗ್ಗೆ ತಿಳುವಳಿಕೆಯ ಕೊರತೆ ಇದೆ” ಎಂದು ಸರ್ಕಾರ ತನ್ನ ಮನವಿಯಲ್ಲಿ ತಿಳಿಸಿದೆ.
“ವಿಚಾರಣಾ ನ್ಯಾಯಾಲಯವು ತನ್ನ 527 ಪುಟಗಳ ತೀರ್ಪಿನಲ್ಲಿ ಬಾಹ್ಯ ಮತ್ತು ಅನುಮತಿಸಲಾಗದ ವಸ್ತುಗಳು ಮತ್ತು ಸಾಕ್ಷ್ಯಗಳು, ಕಾನೂನಿನಿಂದ ನಿಷೇಧಿಸಲ್ಪಟ್ಟ ಸಂತ್ರಸ್ತೆಯ ಲೈಂಗಿಕ ಇತಿಹಾಸದ ಗ್ರಾಫಿಕ್ ವಿವರಗಳನ್ನು ಬಳಸಿಕೊಂಡು ಸಂತ್ರಸ್ತೆಯ ಚಾರಿತ್ರ್ಯ ಹರಣ ಮಾಡಿದೆ” ಎಂದು ಮೇಲ್ಮನವಿ ಹೇಳಿದೆ.
ತೇಜ್ಪಾಲ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 342 (ತಪ್ಪಾದ ಬಂಧನ), 354, 354 ಎ (ಲೈಂಗಿಕ ಕಿರುಕುಳ), 354 ಬಿ (ಮಹಿಳೆಯ ಮೇಲೆ ಕ್ರಿಮಿನಲ್ ಬಲವನ್ನು ಬಳಸುವುದು) 376 (2) (ಎಫ್) (ಮಹಿಳೆಯರ ಮೇಲೆ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿ, ಅತ್ಯಾಚಾರ ಎಸಗುವುದು) ಮತ್ತು 376 (2) (ಕೆ) (ನಿಯಂತ್ರಣದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಸೆಕ್ಷನ್ ಅಡಿಯಲ್ಲಿ ಹಾಕಲಾದ ಕೇಸ್ ಗಳಲ್ಲಿ ಆರೋಪ ಮುಕ್ತಗೊಳಿಸಲಾಗಿದೆ.