ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡೋದೇ ತಪ್ಪಾ..? ತಪ್ಪುಗಳನ್ನು..ಲೋಪಗಳನ್ನು ಪ್ರಶ್ನಿಸೋದೇ ತಪ್ಪಾ..? ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ, ರಾಜಕಾರಣಿಗಳಾಗಿ ಆಡಳಿತದಲ್ಲಿರುವವರನ್ನು ಪ್ರಶ್ನಿಸುವುದೇ ಅಪರಾಧವಾ..? ಈ ಪ್ರಶ್ನೆ ಉದ್ಭವಿಸಲು ಕಾರಣ ರಾಜ್ಯ ಬಿಜೆಪಿ ನಾಯಕರ ನಡೆ.

ಹೌದು ಸದ್ಯ ರಾಜ್ಯ ಬಿಜೆಪಿ ನಾಯಕರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಟಾರ್ಗೆಟ್ ಮಾಡಿಕೊಂಡಂತಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಡವಟ್ಟುಗಳನ್ನು, ಆಡಳಿತ ವೈಫಲ್ಯಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡುವ ಕೆಲವೇ ಕೆಲವು ನಾಯಕರಲ್ಲಿ ಸಂತೋಷ್ ಲಾಡ್ ಕೂಡ ಒಬ್ಬರು. ಇದೇ ಕಾರಣಕ್ಕೆ ಇದೀಗ ಬಿಜೆಪಿ ಲಾಡ್ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲು ಮುಂದಾಗಿದೆ.
ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಲೋಪಗಳ ಬಗ್ಗೆ ಮಾತಾದ್ರೆ ರಾಜ್ಯದ ಬಿಜೆಪಿ ನಾಯಕರಿಗೆ ಮೈಯೆಲ್ಲ ಉರಿ ಎಂಬುದು ಎದ್ದು ಕಾಣುತ್ತಿದೆ. ದಿನ ನಿತ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತು ಆಡಿಲ್ಲ ಅಂದ್ರೆ ಬಿಜೆಪಿ ನಾಯಕರಿಗೆ ಹುಂಡಿದ್ದು ಜೀರ್ಣ ಆಗಲ್ಲ. ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾತಾದ್ರೆ ರಾಜ್ಯ ಬಿಜೆಪಿ ನಾಯಕರಿಗೆ ಸಹಿಸೋಕೆ ಆಗಲ್ಲ.

ಯಾಕೆ ಅಂದ್ರೆ ‘ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಲಾಗಿದೆ, ನರೇಂದ್ರ ಮೋದಿ ಅಕ್ರಮ ಮಾಡಿ ಚುನಾವಣೆ ಗೆದ್ದಿದ್ದಾರೆ, ಕರ್ನಾಟಕದ ಜೆಎಸ್ಟಿ ಪಾಲು ಬಿಡುಗಡೆ ಮಾಡಿಲ್ಲ, ಮೋದಿಗೆ 75 ವರ್ಷ ಮತ್ತೆ ಯಾವಾಗ ರಾಜೀನಾಮೆ ಕೊಡ್ತಾರೆ ಎಂದು ಪ್ರಶ್ನೆ ಮಾಡಲಿ ಬಿಜೆಪಿ ನಾಯಕರಿಗೆ ಕೇಳುವಷ್ಟು ಧಮ್ ತಾಕತ್ ಇಲ್ಲದ ಬಿಜೆಪಿ ನಾಯಕರು ಸಚಿವ ಸಂತೋಷ್ ಲಾಡ್ ಅವರು ಮೇಲೆ ಇಲ್ಲಸಲ್ಲದ ಅರೋಪ ಮಾಡಿ ಬೊಬ್ಬೆ ಹೊಡೆಯುತ್ತಿದ್ದಾರೆ.

ಬಿಜೆಪಿ ಅಧಿಕಾರದ ಅವದಿಯಲ್ಲಿ ಮಾಡಿದ ಹರಗಣ ಒಂದಲ್ಲ ಎರಡಲ್ಲ ಕೋವಿಡ್ ಸಂಧರ್ಭದಲ್ಲಿ ಹೆಣದ ಮೇಲೆ ಕೋಟಿ ಕೋಟಿ ಹಣ ಮಾಡಿ ನಿಮ್ಮ ಶಾಸಕರ ದುರಾಡಳಿತದ ಬಗ್ಗೆ ಜನರಿಗೆ ಗೊತ್ತಿದೆ ಬಿಜೆಗರೇ..
ಕೋವಿಡ್ -19 ಸಾಂಕ್ರಾಮಿಕ ರೋಗ ಸಮಯದಲ್ಲಿ ಸಲಕರಣೆಗಳ ಖರೀದಿಯಲ್ಲಿನ ಅವ್ಯವಹಾರಗಳ, ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯಲ್ಲಿ ಭಾರಿ ಮೊತ್ತದ ಭ್ರಷ್ಟಾಚಾರ ಆಗಿದೆ. ಪಿಪಿಇ ಕಿಟ್, ಸಿ.ಟಿ. ಸ್ಕ್ಯಾನರ್, ವೆಂಟಿಲೆಟರ್ ಖರೀದಿಯಲ್ಲಿ ಭಾರಿ ಮೊತ್ತದ ಅವ್ಯವಹಾರವಾಗಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಇಂತಹ ಕೀಳು ಹೇಳಿಕೆಯನ್ನು ರಾಜ್ಯ ಬಿಜೆಪಿಯವರು ಹೇಳುತ್ತಿರುವುದು ನೋಡಿದರೆ ಇದನ್ನು ಕೀಳು ರಾಜಕಾರಣ ಎಂದೇ ಹೇಳಬೇಕು.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾರ್ಮಿಕ ಕಲ್ಯಾಣ ಇಲಾಖೆಯಡಿ ನಡೆಯುವ ವಿವಾಹ ನೆರವು ಯೋಜನೆಯಲ್ಲಿಯೂ ಗೋಲ್ ಮಾಲ್ ನಡೆಸಿದೆ ಎಂದು ಕಾರ್ಮಿಕ ಸಚಿವರ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಆದ್ರೆ ಈ ಅಕ್ರಮ ನಡೆದಿರುವುದು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ.

ಈ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರ ಬದಲು ಕೃಷಿ, ವ್ಯಾಪಾರ ಹಾಗೂ ಖಾಸಗಿ ವಲಯದ ಉದ್ಯೋಗಗಳಿಗೂ ಸಹಾಯಧನ ಮಂಜೂರು ಮಾಡಿದ ಕುರಿತು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಬಿಜೆಪಿ ಪೋಸ್ಟ್ ಮಾಡಿ ಸಚಿವ ಸಂತೋಷ್ ಲಾಡ್ ವಿರುದ್ಧ ಆರೋಪ ಮಾಡಿದೆ.ಆ ಮೂಲಕ ತನ್ನ ಸರ್ಕಾರದ ಅವಧಿಯಲ್ಲಿ ನಡೆದ ಗೋಲ್ ಮಾಲ್ ಗೆ ಸಂತೋಷ್ ಲಾಡ್ ರನ್ನು ಹೊಣೆಗಾರರನ್ನಾಗಿ ಮಾಡುವ ಹುನ್ನಾರ ಮಾಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪೋಸ್ಟ್ ಹಾಕಿರುವ ಬಿಜೆಪಿ, ದಿನ ಬೆಳಗೆದ್ದು ಮಾಧ್ಯಮಗಳ ಮೈಕ್ ಮುಂದೆ ಹಸಿ ಹಸಿ ಸುಳ್ಳು ಹೇಳುತ್ತಾ, ಬಿಲ್ಡಪ್ ಕೊಡುವ ಲಾಡ್ ಅವರೇ, ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಡಿ, ತಮ್ಮ ಇಲಾಖೆಯಲ್ಲಿ ನಡೆದ ಈ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಮಾತನಾಡಿ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಆದ್ರೆ ಸತ್ಯ ಸಂಗತಿ ಬೇರೆಯೇ ಇದೆ.

ನೋಂದಾಯಿತ ಕಾರ್ಮಿಕರ ಬದಲು ಕೃಷಿ, ವ್ಯಾಪಾರ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ 18 ಮಂದಿ ಫಲಾನುಭವಿಗಳ ಮಕ್ಕಳ ಮದುವೆಗೆ ತಲಾ 50 ಸಾವಿರ ರೂ. ಸಹಾಯಧನ ಮಂಜೂರು ಮಾಡಲಾಗಿದೆ. ಈ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ
ನಿಯಮ ಉಲ್ಲಂಘಿಸಿರುವುದು ಬಯಲಾಗಿದೆ.
2020ರಲ್ಲಿ ಈ ಷರತ್ತನ್ನು ಪರಿಷ್ಕರಣೆಗೆ ಒಳಪಡಿಸಿ ಸಂಪೂರ್ಣ ಮೊತ್ತವನ್ನು ವಧುವಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. 624 ಬಾಂಡ್‌ಗಳು ಕಚೇರಿಯಲ್ಲೇ ಬಾಕಿಯಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2018-20ನೇ ಸಾಲಿನಲ್ಲಿ ವಿವಾಹ ನೆರವು ಯೋಜನೆಯಡಿ 1,013 ವಿವಾಹ ಬಾಂಡ್ ವಿತರಿಸಿದೆ. ಈ 3 ಪೈಕಿ 624 ಪ್ರಕರಣಗಳಲ್ಲಿ ವಿವಾಹ ಬಾಂಡ್‌ಗಳು ಮೂರು ವರ್ಷಗಳ ಲಾಕ್ ಇನ್ ಅವಧಿಯಲ್ಲಿ ಇದ್ದರೂ ಕಾರ್ಮಿಕರ ಕಚೇರಿಯಲ್ಲೇ ಇರಿಸಿಕೊಂಡಿರುವುದು ಮಹಾಲೆಕ್ಕಪರಿಶೋಧನೆ ವೇಳೆ ಗಮನಕ್ಕೆ ಬಂದಿದೆ. ಈ ವೇಳೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದವರು ಬಿಜೆಪಿ ನಾಯಕರು ಎಂಬುದು ಸ್ಪಷ್ಟವಾಗಿದೆ.

ಹೀಗೆ 45 ಪ್ರಕರಣಗಳಲ್ಲಿ ಮೂರು ವರ್ಷ ಪೂರ್ಣಗೊಂಡಿರುವ ಬಾಂಡ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದೆ ಕಾರ್ಮಿಕ ಕಚೇರಿಗಳಲ್ಲಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಇದರಿಂದ ಫಲಾನುಭವಿಗಳು ಆರ್ಥಿಕ ಬೆಂಬಲದಿಂದ ವಂಚಿತರಾಗಿದ್ದಾರೆ ಎಂದು ಸಿಎಜಿ ವರದಿ ಉಲ್ಲೇಖಿಸಲಾಗಿದೆ.





