• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಇರಾನ್: ಹಿಜಾಬ್ ವಿರುದ್ಧದ ಪ್ರತಿಭಟನೆಗೆ 8 ಬಲಿ, ಇಂಟರ್ನೆಟ್ ನಿರ್ಬಂಧ!

ಫಾತಿಮಾ by ಫಾತಿಮಾ
September 23, 2022
in ಅಂಕಣ, ಅಭಿಮತ
0
ಇರಾನ್: ಹಿಜಾಬ್ ವಿರುದ್ಧದ ಪ್ರತಿಭಟನೆಗೆ 8 ಬಲಿ, ಇಂಟರ್ನೆಟ್  ನಿರ್ಬಂಧ!
Share on WhatsAppShare on FacebookShare on Telegram

ಇರಾನಿನಲ್ಲಿ ಬಲವಂತವಾಗಿ ಹಿಜಾಬ್ ಧರಿಸಲು ಒತ್ತಾಯಿಸುವುದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು ನೈತಿಕ ಪೊಲೀಸರಿಂದ ಬಂಧಿಸಲ್ಪಟ್ಟ ಮಹಿಳೆಯ ಸಾವು ಪ್ರತಿಭಟನಾಕಾರರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ ಎಂದು ಕುರ್ದಿಶ್ ಜನರ ಹಕ್ಕಿಗಾಗಿ ಹೋರಾಡುತ್ತಿರುವವರ ಗುಂಪು ತಿಳಿಸಿದೆ. ಈ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು ಸೋಶಿಯಲ್ ಮೀಡಿಯಾಗಳಿಗೂ ನಿರ್ಬಂಧ ವಿಧಿಸಲಾಗಿದೆ.

ADVERTISEMENT

ಇರಾನಿಯನ್ ಮಾಧ್ಯಮ ಮತ್ತು ಸ್ಥಳೀಯ ಪ್ರಾಸಿಕ್ಯೂಟರ್ ಪ್ರಕಾರ ಕಳೆದೆರಡು ದಿನಗಳಲ್ಲಿ ನಾಲ್ಕು ಜನರು ಈ ಪ್ರತಿಭಟನೆಗಳಲ್ಲಿ ಬಲಿಯಾಗಿದ್ದಾರೆ. ಅಧಿಕೃತ ಮೂಲಗಳು ಒಬ್ಬ ಪೊಲೀಸ್ ಮತ್ತು ಸರ್ಕಾರದ ಪರ ಇರುವ ಸೇನಾ ಸದಸ್ಯನೊಬ್ಬನನ್ನು ಸೇರಿಸಿ ಒಟ್ಟು ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿವೆ.  ಇರಾನಿನ ಕುರ್ದಿಸ್ತಾನಿ ಮಷಾ ಅಮೀನಿ ಎಂಬ 22 ವರ್ಷದ ಯುವತಿಯನ್ನು ‘ಅಸಮಂಜ ಉಡುಗೆ’ ಧರಿಸಿರುವುದಕ್ಕಾಗಿ ಟೆಹ್ರಾನಿನಲ್ಲಿ ಬಂಧಿಸಲಾಗಿತ್ತು. ಆಕೆ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ‌ ಸಾವನ್ನಪ್ಪಿದ್ದು ಪ್ರತಿಭಟನಾಕಾರರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತ್ತು.

ಇರಾನ್‌ನ ಕುರ್ದಿಶ್-ಜನರೇ ಹೆಚ್ಚು ವಾಸವಾಗಿರುವ ವಾಯುವ್ಯ ಪ್ರದೇಶಗಳಲ್ಲಿ ಮೊದಲು ಕೇಂದ್ರೀಕೃತವಾಗಿದ್ದ ಪ್ರತಿಭಟನೆಗಳು ಈಗ ರಾಷ್ಟ್ರವ್ಯಾಪಿ ಹರಡಿದ್ದು ಕನಿಷ್ಠ 50 ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದು 2019 ರಲ್ಲಿ ಗ್ಯಾಸೋಲಿನ್ ಬೆಲೆ ಏರಿಕೆಯ ಬಗೆಗಿನ ಪ್ರತಿಭಟನೆಯ ನಂತರ  ಅತಿ ದೊಡ್ಡ ಪ್ರತಿಭಟನೆಯಾಗಿದೆ.

ಕುರ್ದಿಶ್ ಹಕ್ಕುಗಳ ಹೋರಾಟಗಾರರ ಪ್ರಕಾರ  ಭದ್ರತಾ ಪಡೆಗಳಿಂದ, 10 ಪ್ರತಿಭಟನಾಕಾರರು ಕೊಲ್ಲಲ್ಪಟ್ಟಿದ್ದಾರೆ.  ಈ ಸುದ್ದಿಯನ್ನು ಇರಾನಿನ ಅಧಿಕಾರಿಗಳು ನಿರಾಕರಿಸಿದ್ದಾರೆ.    ಆದರೆ ಪ್ರತಿಭಟನೆಗಳು ತಣ್ಣಗಾಗುವ ಯಾವುದೇ ಸೂಚನೆ ಕಾಣದೇ ಇದ್ದಾಗ ಇರಾನ್ ಸರ್ಕಾರ ಇಂಟರ್ನೆಟ್ ಬಳಕೆಯನ್ನು ನಿರ್ಬಂಧಿಸಿದೆ.

ಇಂಟರ್ನೆಟ್ ನಿರ್ಬಂಧಗಳು

2019 ರ ಇಂಧನ ಬೆಲೆ ಪ್ರತಿಭಟನೆಗಳನ್ನು ದಮನ ಮಾಡುವಾಗಲೇ ಇರಾನ್ ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ರಾಯಿಟರ್ಸ್‌‌‌  ಪ್ರಕಾರ ಆ ಪ್ರತಿಭಟನೆಯಲ್ಲಿ ಸುಮಾರು 1500 ಜನರನ್ನು ಕೊಲ್ಲಲಾಗಿತ್ತು. ಇದೀಗ ಮತ್ತೆ ಸರ್ಕಾರ ಇಂಟರ್ನೆಟ್‌ ಬಳಕೆಗೆ ನಿರ್ಬಂಧ ಹೇರಿದ್ದು ಲಕ್ಷಾಂತರ ಬಳಕೆದಾರರಿರುವ ಮತ್ತು ಇರಾನಿನ ಏಕೈಕ ಸಾಮಾಜಿಕ ಮಾಧ್ಯಮವಾದ ಇನ್ಸ್‌ಟಾಗ್ರಾಂ ಅನ್ನು ನಿರ್ಬಂಧಿಸಿದೆ. ಅಲ್ಲಿನ ಸ್ಥಳೀಯ ಮಾಧ್ಯಮವಾಗಿರುವ ‘ನೆಟ್‌ಬ್ಲಾಕ್ಸ್’  “2019 ರ ನವೆಂಬರ್ ಹತ್ಯಾಕಾಂಡದ ನಂತರ ಇರಾನ್ ಈಗ ಅತ್ಯಂತ ತೀವ್ರವಾದ ಇಂಟರ್ನೆಟ್ ನಿರ್ಬಂಧಗಳಿಗೆ ಒಳಪಟ್ಟಿದೆ” ಎಂದು  ಹೇಳಿದೆ.

WhatsApp ಬಳಕೆದಾರರು ತಾವು ಟೆಕ್ಸ್ಟ್ ‌ಗಳನ್ನು ಮಾತ್ರ ಕಳುಹಿಸಬಹುದಾಗಿದ್ದು ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಕಳಿಸಲಾಗುವುದಿಲ್ಲ ಎಂದಿದ್ದಾರೆ. ಕುರ್ದಿಷ್ ಅಲ್ಪಸಂಖ್ಯಾತರ ಪ್ರಾಬಲ್ಯವರಿರುವ ಪ್ರದೇಶಗಳಲ್ಲಿ ಇಂಟರ್ನೆಟ್‌ ಅನ್ನು ಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಮೂಲಕ ಅಧಿಕಾರಿಗಳ ದೌರ್ಜನ್ಯವನ್ನು ತೋರಿಸುವ ವಿಡಿಯೋಗಳನ್ನು ಹಂಚಿಕೊಳ್ಳದಂತೆ ನೋಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ಆದರೆ Instagram ಮತ್ತು WhatsApp ಮಾಲೀಕರಾದ meta ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇರಾನಿನಲ್ಲಿ ಎದ್ದಿರುವ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಆದರೆ ಈ ಪ್ರತಿಭಟನೆಗಳು ದಿಢೀರನೆ ಎದ್ದಿರುವುದಲ್ಲ. ಹಿಮ್ಮುಖವಾಗಿ ಚಲಿಸುತ್ತಿರುವ ಇರಾನಿನ ಆರ್ಥಿಕತೆ, ವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರವಾಗಿ‌ ನಡೆಯುತ್ತಿದ್ದ ಹಲ್ಲೆಗಳು ಸ್ವಭಾವತಃ ಬಂಡಾಯ ಮನೋಭಾವದವರಾದ ಇರಾನಿಯರನ್ನು‌ ವ್ಯಗ್ರವಾಗುವಂತೆ ಮಾಡಿತ್ತು. ಮಷಾ  ಅಮಿನಿಯ ಸಾವು ಈ ಎಲ್ಲಾ ಹತಾಶೆಯನ್ನು ಹೊರಹಾಕಲು ಒಂದು ವೇದಿಕೆ ಒದಗಿಸಿತು.  ಪ್ರತಿಭಟನೆಗಳಲ್ಲಿ  ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್ ಬೀಸುತ್ತಿದ್ದಾರೆ ಮತ್ತು ಸುಡುತ್ತಿದ್ದಾರೆ. ಕೆಲವರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಕತ್ತರಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇರಾನ್‌ನ ಹಿಜಾಬ್ ಕಡ್ಡಾಯ ಕಾನೂನುಗಳು

1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಅಧಿಕಾರಿಗಳು ಕಡ್ಡಾಯವಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಿದರು. ಆ ಡ್ರೆಸ್ ಕೋಡ್ ಪ್ರಕಾರ ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ  ತಲೆ ಮರೆಮಾಚುವ ಸ್ಕಾರ್ಫ್ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಅಲ್ಲಿನ ನೈತಿಕ‌ಪೊಲೀಸರು ಅಥವಾ ‘ಗಷ್ತ್-ಇ- ಇರ್ಶಾದ್’ ಅಧಿಕಾರಿಗಳು ಮಹಿಳೆಯರು ಸಮಂಜಸವಾದ ಬಟ್ಟೆ ಧರಿಸಿದ್ದಾರೆಯೇ ಇಲ್ಲವೇ ಎಂಬುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.

ಪ್ರಸ್ತುತ ಸಾವನ್ನಲ್ಪಟ್ಟಿರುವ ಮಷಾ ಅಮೀನಿಯವರನ್ನು ಟೆಹ್ರಾನ್‌ನಲ್ಲಿ ಆಕೆಯ ಸಹೋದರನೊಂದಿಗೆ ಇದ್ದಾಗ ಬಂಧಿಸಲಾಗಿದೆ.  ಮಹಿಳೆಯರು ತಮ್ಮ ಕೂದಲನ್ನು ಹಿಜಾಬ್  ಮತ್ತು ದೇಹವನ್ನು ಸಡಿಲವಾದ ಬಟ್ಟೆಯಿಂದ ಮುಚ್ಚಿಕೊಳ್ಳಬೇಕೆಂಬ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.  ಬಂಧನ ಕೇಂದ್ರದಲ್ಲಿ ಕುಸಿದು ಬಿದ್ದ ಸ್ವಲ್ಪ ಸಮಯದ ನಂತರ ಅವರು ಕೋಮಾಕ್ಕೆ ಹೋಗಿದ್ದರು. ಪೊಲೀಸರು  ಅಮಿನಿಯ ತಲೆಗೆ ಲಾಠಿಯಿಂದ ಹೊಡೆದರು ಮತ್ತು ಅವರ ವಾಹನವೊಂದಕ್ಕೆ ಆಕೆಯ ತಲೆಯನ್ನು ಜಜ್ಹಿದರು ಎಂದು ವರದಿಗಳಿವೆ ಎಂದು ಮಾನವ ಹಕ್ಕುಗಳ ವಿಶ್ವಸಂಸ್ಥೆಯ ಹಂಗಾಮಿ ಹೈ ಕಮಿಷನರ್ ನಡಾ ಅಲ್-ನಾಶಿಫ್ ಹೇಳಿದ್ದಾರೆ.

ಆದರೆ ಆಕೆಗೆ ಅನ್ಯಾಯವಾಗಿದೆ ಎಂಬುವುದನ್ನು ನಿರಾಕರಿಸಿರುವ ಪೊಲೀಸರು ಆವರು ಹಠಾತ್ ಹೃದಯ ವೈಫಲ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.  ಆದರೆ ಆಕೆ ಫಿಟ್ ಆಗಿದ್ದಳು ಮತ್ತು ಆರೋಗ್ಯವಾಗಿದ್ದಳು ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.‌  ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಮತ್ತು ಬಂಧನದ ನಂತರ ಆಕೆಯ ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿವೆ, ಆದ್ದರಿಂದ  ಆಕೆಯ ಸಾವಿಗೆ ಪೊಲೀಸರೇ ಹೊಣೆಯಾಗುತ್ತಾರೆ ಎನ್ನುತ್ತಾರೆ ಅವರ ತಂದೆ.  ಇರಾನಿನ ಪರಮೋನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಈ ವಾರ ಅಮಿನಿಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಮತ್ತು ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಆದರೆ ಅವರ ಭರವಸೆಯ ಬಗ್ಗೆ ನಂಬಿಕೆ ವ್ಯಕ್ತಪಡಿಸದ ಹೋರಾಟಗಾರರು ದಬ್ಬಾಳಿಕೆ ಉಲ್ಬಣಗೊಳ್ಳುವ ಆತಂಕವಿದೆ ಎಂದು ಹೇಳುತ್ತಿದ್ದಾರೆ. “ಆಡಳಿತವು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ ತಕ್ಷಣ ಜಗತ್ತು ಇರಾನ್ ಅನ್ನು ಮರೆತುಬಿಡುತ್ತದೆ ಎಂದು ನಮಗೆ ಅನಿಸುತ್ತದೆ” ಎಂದು  ಒಬ್ಬ ಹೋರಾಟಗಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ. “ಪ್ರತಿಭಟನೆಗಳನ್ನು ಕೊನೆಗೊಳಿಸಲು ಅಥವಾ ಜೈಲು ಶಿಕ್ಷೆಯನ್ನು ಎದುರಿಸುವಂತೆ ನಾವು ಭದ್ರತಾ ಸಂಸ್ಥೆಗಳಿಂದ ಎಚ್ಚರಿಕೆಗಳನ್ನು ಪಡೆಯುತ್ತಿದ್ದೇವೆ” ಎಂದು ವಾಯುವ್ಯ ಕುರ್ದಿಸ್ತಾನ್ ಪ್ರಾಂತ್ಯದ ಹೋರಾಟಗಾರರೊಬ್ಬರು ಹೇಳಿದ್ದಾರೆ.

Tags: IranPratidhvani
Previous Post

ಟಿ-20ಯಲ್ಲಿ ವಿಶ್ವದಾಖಲೆ ಬರೆದ ಪಾಕಿಸ್ತಾನದ ಬಾಬರ್-ರಿಜ್ವಾನ್!

Next Post

ಪೌರಕಾರ್ಮಿಕ ರೊಂದಿಗೆ ಉಪಾಹಾರ ಸೇವಿಸಿದ ಸಿಎಂ ಬೊಮ್ಮಾಯಿ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
Next Post
ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಲು ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಪೌರಕಾರ್ಮಿಕ ರೊಂದಿಗೆ ಉಪಾಹಾರ ಸೇವಿಸಿದ ಸಿಎಂ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada