ವಿಶೇಷ ಲೇಖನ : ನಾ ದಿವಾಕರ
( ಸಂವಾದ ಮಾಸಪತ್ರಿಕೆಯ ಏಪ್ರಿಲ್ 2026 ರ ಅಂಬೇಡ್ಕರ್ ವಿಶೇಷ ಸಂಚಿಕೆಗೆ ಬರೆದ ಲೇಖನ )
ಭಾಗ 2
ಹಕ್ಕು ಬಾಧ್ಯತೆ ಮತ್ತು ಆದ್ಯತೆಗಳು ಇಂದು ದೇಶದ, ವಿಶೇಷವಾಗಿ ರ‍್ನಾಟಕದ, ದಲಿತ ಚಳುವಳಿಗಳಿಗೆ ಸವಾಲಾಗಿ ನಿಂತಿರುವುದು ಉದ್ಯೋಗ-ಶಿಕ್ಷಣದಲ್ಲಿ ಮೀಸಲಾತಿ ನೀತಿಗಳ ಪರಿಷ್ಕರಣೆ ಮತ್ತು ಸುಧಾರಣೆ. ಶತಮಾನಗಳ ಕಾಲ ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಗಳು ಪಡೆದ ಸಾಮಾಜಿಕ-ರಾಜಕೀಯ ಸ್ಥಾನಮಾನ, ರ‍್ಥಿಕ ಅವಕಾಶಗಳ ಪ್ರಯೋಜನಗಳನ್ನು ಚಾರಿತ್ರಿಕ ಮೀಸಲಾತಿ ಎಂದು ಬಣ್ಣಿಸುವ ಅಂಬೇಡ್ಕರ್ ಸೈಮನ್ ಆಯೋಗದ ಮುಂದೆ ಮಂಡಿಸಿದ ಹಕ್ಕುಗಳ ಪೈಕಿ ಶೋಷಿತ-ದಮನಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಅಧಿಕಾರ ವಲಯದಲ್ಲಿ ಸೂಕ್ತ ಮೀಸಲಾತಿ ಸೌಲಭ್ಯ ಮುಖ್ಯವಾದುದು. ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆಗಳನ್ನು ಸರಿಪಡಿಸದೆ ಹೋದರೆ ಶಿಕ್ಷಣ ವ್ಯವಸ್ಥೆಯೂ ಸಹ ಅಸಮಾನತೆಯನ್ನೇ ಪೋಷಿಸುತ್ತದೆ ಎಂಬ ಅಂಬೇಡ್ಕರ್ ಅವರ ವಾದ, ಇಂದಿಗೂ ಕಾಣಬಹುದಾದ ಕಟುವಾಸ್ತವ.

ಜಾತಿ ಪೀಡಿದ ಪರ‍್ವಗ್ರಹಗಳು ಮತ್ತು ಯಥಾಸ್ಥಿತಿವಾದಗಳು ಸೃಷ್ಟಿಸಿರುವ ಬಹಿಷ್ಕಾರದ ವಿವಿಧ ಆಯಾಮಗಳ ಒಂದು ಸಂರಚನೆಯನ್ನು , ಮೇಲ್ಜಾತಿ/ರ‍್ಗಗಳು ನರ‍್ವಚಿಸುವ ʼ ಪ್ರತಿಭೆ-ದಕ್ಷತೆ-ರ‍್ಹತೆ ʼ ಎಂಬ ಕಲ್ಪನೆಗಳಲ್ಲಿ ಗುರುತಿಸಿದ್ದ ಅಂಬೇಡ್ಕರ್ , ಈ ಸಾಂಸ್ಕೃತಿಕ ಕಲ್ಪನೆಯೇ ಭಾರತದ ಜಾತಿ ವ್ಯವಸ್ಥೆಯ ಬೇರುಗಳನ್ನು ಆಳಕ್ಕಿಳಿಸುವ ಅಸ್ತ್ರಗಳು ಎಂದೂ ಪ್ರತಿಪಾದಿಸಿದ್ದರು. ಈ ದೃಷ್ಟಿಯಿಂದಲೇ ಭವಿಷ್ಯದ ಭಾರತೀಯ ಸಂವಿಧಾನದಲ್ಲಿ ಶೋಷಿತ-ದಮನಿತ ಸಮದಾಯಗಳಿಗೆ ಸರ‍್ವಜನಿಕ ಕಚೇರಿಗಳಲ್ಲಿ, ಸೇವಾ ವಲಯದಲ್ಲಿ, ಶಿಕ್ಷಣದಲ್ಲಿ ಪ್ರತ್ಯೇಕ ಮೀಸಲಾತಿ ಸೌಲಭ್ಯವನ್ನು ಖಚಿತಪಡಿಸುವಂತೆ ಬ್ರಿಟೀಷ್ ರ‍್ಕಾರವನ್ನು ಪ್ರತಿ ಹಂತದಲ್ಲೂ ಎಚ್ಚರಿಸುತ್ತಲೇ ಬಂದಿದ್ದರು.
ಪೂನಾ ಒಪ್ಪಂದದ ಪರಿಣಾಮ, ಅಂಬೇಡ್ಕರ್ ಅವರ ಮೂಲ ಆಶಯಗಳು ಈಡೇರಲಿಲ್ಲವಾದರೂ, ಸಾಂವಿಧಾನಿಕವಾಗಿ ಮೀಸಲಾತಿ ಕಲ್ಪಿಸುವ ಕನಸು ಭಗ್ನವಾಗಲಿಲ್ಲ.
ಸ್ವತಂತ್ರ ಭಾರತದ ಸಂವಿಧಾನಕ್ಕೆ ಮೂಲ ಅಡಿಪಾಯವಾಗಿದ್ದುದು 1935 ರ ಭಾರತ ಸರ್ಕಾರದ ಕಾಯ್ದೆ. ಈ ಕಾಯ್ದೆಯನ್ನು ರೂಪಿಸಲು ಪ್ರಭಾವಿಯಾಗಿ ನಡೆದ ಮೂರು ದುಂಡು ಮೇಜಿನ ಸಭೆಗಳಲ್ಲೂ ಅಂಬೇಡ್ಕರ್ ಮಹತ್ವದ ಪಾತ್ರ ನಿರ್ವಹಿಸಿದ. ಪ್ರಥಮ ಸಭೆಯಲ್ಲಿ ಹಿಂದುಳಿದ ರ‍್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಇರುವ ಸ್ವರಾಜ್ ಸಂವಿಧಾನ ಮಾತ್ರವೇ ಒಂದು ದಕ್ಷ ಆಡಳಿತವನ್ನು ನೀಡಲು ಸಾಧ್ಯ ಎಂದು ವಾದಿಸಿದ್ದ ಅಂಬೇಡ್ಕರ್, ದಮನಿತ ಸಮುದಾಯಗಳಿಗೆ ಘನತೆಯ ಬದುಕು ಸಾಗಿಸಲು ನೆರವಾಗುವ ರೀತಿಯಲ್ಲಿ ರಾಜಕೀಯ ಅಧಿಕಾರದ ಪ್ರಾತಿನಿಧ್ಯವನ್ನು ನೀಡುವುದೇ ನಿಜವಾದ ಸ್ವರಾಜ್ ಎಂದು ಬಲವಾಗಿ ವಾದಿಸಿದ್ದರು. ಈ ಹಂತದಲ್ಲೇ ಅಂಬೇಡ್ಕರ್, ದಮನಿತ ರ‍್ಗಗಳ ರಕ್ಷಣೆಗಾಗಿ ರಾಜಕೀಯ ರಕ್ಷಣಾ ಸಾಧನಗಳ ಯೋಜನೆಯನ್ನೂ ರೂಪಿಸಿ ಇದರಲ್ಲಿ ಬಹುಮುಖ್ಯವಾಗಿ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸಿದ್ದರು. ಈ ಹಕ್ಕೊತ್ತಾಯಗಳ ಪರಿಣಾಮವೇ ಸಂವಿಧಾನಾತ್ಮಕವಾಗಿ ಲಭ್ಯವಾಗುತ್ತಿರುವ ರಾಜಕೀಯ ಮೀಸಲಾತಿ.
ಇದನ್ನೂ ಓದಿ : ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
ಸುಧಾರಣೆ-ಅಭಿವೃದ್ಧಿಯ ಕಲ್ಪನೆ
ಸಾಮಾಜಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳದೆ ರಾಜಕೀಯ ಸುಧಾರಣೆಗಳು ಸಾಧ್ಯವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದ ಅಂಬೇಡ್ಕರ್, ಸಾಮಾಜಿಕ ವಿಷಯಗಳನ್ನು ನರ‍್ಲಕ್ಷಿಸಿ ರಾಜಕೀಯ ಸಂವಿಧಾನವನ್ನು ರಚಿಸುವುದು ಸರಿಯಲ್ಲ ಎಂದು ವಾದಿಸಿದ್ದರು. ಸಾಮಾಜಿಕ ತಾರತಮ್ಯಗಳನ್ನು ಮತ್ತು ವ್ಯತ್ಯಯಗಳನ್ನು ಸರಿಪಡಿಸುವ ನಿಯಮಗಳನ್ನು ಒಳಗೊಳ್ಳದೆ ಸಂವಿಧಾನ ರಚನೆ ಮಾಡಿದರೆ ಅಂತಹ ಸಂವಿಧಾನವು ಕರ‍್ಯಸಾಧುವಾಗುವುದಿಲ್ಲ ಎಂದು ಬ್ರಿಟೀಷರನ್ನು ಎಚ್ಚರಿಸಿದ್ದರು. ಜಾತಿ ರಹಿತ ಎಂಬ ಸ್ವಯಂ ಘೋಷಣೆ ರ‍್ಥಹೀನ ಎಂದು ಬಲವಾಗಿ ಪ್ರತಿಪಾದಿಸಿದ್ದ ಅಂಬೇಡ್ಕರ್, ರ‍್ಥಿಕ ಸಮಾನತೆಯ ಪ್ರತಿಪಾದಕರು ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕುವ ಸಂಕಲ್ಪ ಮಾಡುವುದು ಅನಿವರ‍್ಯ ಎಂದೇ ಒತ್ತಾಯಿಸಿದ್ದರು. ಭಾರತದಲ್ಲಿ ನೀವು ಯಾವ ದಿಕ್ಕಿಗೆ ತಿರುಗಿದರೂ ಅಲ್ಲಿ ಜಾತಿ ಎಂಬ ಭೂತ ಅಡ್ಡ ಹಾಕುತ್ತದೆ ಎಂಬ ಅವರ ಹೇಳಿಕೆ, ಭಾರತದ ಸಂವಿಧಾನದಲ್ಲಿ ಜಾತಿ ವ್ಯವಸ್ಥೆಯನ್ನು ನಿವಾರಿಸುವ ನಿಯಮಗಳಿಗೆ ಆಧಾರವಾಗಿ ಕಾಣಬಹುದು.
ಸ್ವತಂತ್ರ ಭಾರತದ ಸಂವಿಧಾನವನ್ನು ಭಾರತೀಯರೇ, ಭಾರತೀಯರಿಗಾಗಿ , ಸಮಸ್ತ ಭಾರತದ ಜನತೆಯ ಸಮ್ಮತಿಯೊಂದಿಗೆ ರಚಿಸಿದಾಗ ಮಾತ್ರ ಅದು ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ರಕ್ಷಿಸಲು ಸಾಧ್ಯ ಎಂಬ ಅಂಬೇಡ್ಕರ್ ಅವರ ಪ್ರತಿಪಾದನೆಯೇ, ಪ್ರಸ್ತುತ ಸಂವಿಧಾನಕ್ಕೆ ತಾತ್ವಿಕ ಬುನಾದಿಯನ್ನು ಒದಗಿಸಿತ್ತು. ಅಲ್ಪಸಂಖ್ಯಾತರು ಎಂದರೆ ನರ‍್ದಿಷ್ಟ ಜನಸಂಖ್ಯೆ ಅಥವಾ ಧರ‍್ಮಿಕ ಅಲ್ಪಸಂಖ್ಯಾತರು ಮಾತ್ರವೇ ಅಲ್ಲ, ಬಹು ಸಂಖ್ಯೆಯಲ್ಲಿದ್ದರೂ ಸಾಮಾಜಿಕವಾಗಿ ಬಹಿಷ್ಕೃತರಾಗಿರುವ ಎಲ್ಲ ಸಮಾಜಗಳನ್ನೂ ಒಳಗೊಳ್ಳುವಂತಿರಬೇಕು ಎನ್ನುವುದು ಅಂಬೇಡ್ಕರ್ ಅವರ ವಾದವಾಗಿತ್ತು. ಸಾಮುದಾಯಿಕ ಬಹುಸಂಖ್ಯಾತರು ಆಡಳಿತ ವಹಿಸಿಕೊಂಡು, ಅಲ್ಪಸಂಖ್ಯಾತರ ಅವಶ್ಯಕತೆಗಳನ್ನು, ಆದ್ಯತೆಗಳನ್ನು ತಾವೇ ನರ‍್ಧರಿಸುವುದಾದರೆ, ಅದನ್ನು ಪ್ರಜಾಪ್ರಭುತ್ವ ಎನ್ನಲಾಗುವುದಿಲ್ಲ, ಸಾಮ್ರಾಜ್ಯಶಾಹಿ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಅಂಬೇಡ್ಕರ್ ದಮನಿತ ಸಮುದಾಯಗಳನ್ನೂ ಅಲ್ಪಸಂಖ್ಯಾತರೆಂದೇ ಪರಿಭಾವಿಸಿದ್ದರು.
ಈ ಮೇಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದಾಗ, ಕಳೆದ ಮೂರು ದಶಕಗಲ್ಲಿ ಅವರ ಚಿಂತನೆಯ ಮೂಸೆಯಲ್ಲಿ ಸ್ಥಾಪಿತವಾಗಿದ್ದ ಹಲವಾರು ಪ್ರಜಾಸತ್ತಾತ್ಮಕ ಆಲೋಚನೆಗಳು ಅವರನ್ನು ಪ್ರಭಾವಿಸಿರುವುದು ಸ್ಪಷ್ಟವಾಗುತ್ತದೆ. ಜಾಗತಿಕ ಚಿಂತನಾ ಕ್ರಮಗಳನ್ನು ಭಾರತೀಯ ಸಂರ‍್ಭಗಳಿಗನುಸಾರವಾಗಿ ಮರುನರ‍್ವಚಿಸುವ ಮೂಲಕ ಅಂಬೇಡ್ಕರ್ ಇತರ ದೇಶಗಳ ಚಾರಿತ್ರಿಕ ಅಭ್ಯುದಯದಿಂದಲೂ ಸಹ ಭಿನ್ನ ಚಿಂತನಾಧಾರೆಗಳನ್ನು ಅಳವಡಿಸಿಕೊಳ್ಳುತ್ತಾರೆ. ದುಂಡು ಮೇಜಿನ ಪರಿಷತ್ತಿನಲ್ಲೇ ಅಂಬೇಡ್ಕರ್, ಭಾರತೀಯ ಸಂವಿಧಾನವು ನಾಗರಿಕ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ , ನೀಗ್ರೋಗಳ ರಕ್ಷಣೆಗಾಗಿ ಜಾರಿಗೊಳಿಸಲಾಗಿದ್ದ 1868 ಮತ್ತು 1875 ರ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆಗಳನ್ನು ಅನುಕರಿಸಬೇಕು ಎಂದು ಒತ್ತಾಯಿಸಿದ್ದರು.
ಸ್ವಾತಂತ್ರ‍್ಯ-ಸಮಾನತೆಯ ಆಶಯ
ಮೂಲತಃ ಪ್ರಜಾತಂತ್ರ ವಿರೋಧಿ ಲಕ್ಷಣಗಳನ್ನೇ ಹೊಂದಿರುವ ಭಾರತದ ನೆಲದಲ್ಲಿ ಪ್ರಜಾಪ್ರಭುತ್ವ ಒಂದು ಅಲಂಕಾರಿಕ ಮೇಲು ಹೊದಿಕೆ ಮಾತ್ರ ಎಂದು ವ್ಯಾಖ್ಯಾನಿಸುವ ಮೂಲಕ ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಈ ಮೌಲ್ಯಗಳನ್ನು ರಕ್ಷಿಸಬೇಕಾದರೆ ಸಾಂವಿಧಾನಿಕ ನೈತಿಕತೆಯನ್ನೂ ಕಾಪಾಡಿಕೊಳ್ಳುವಂತೆ ಎಚ್ಚರಿಸಿದ್ದರು. ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ನೈತಿಕತೆಯನ್ನು ಕಾಪಾಡಲು ಅಗತ್ಯವಾದ ನಿಯಮಗಳನ್ನು, ಕಟ್ಟಳೆಗಳನ್ನು ಮತ್ತು ಉತ್ತರದಾಯಿತ್ವದ ನೀತಿಗಳನ್ನು ಅಳವಡಿಸುವುದು ಸಾಂವಿಧಾನಿಕ ನೈತಿಕತೆಯ (ಅoಟಿsಣiಣuಣioಟಿಚಿಟ ಒoಡಿಚಿಟiಣಥಿ) ಲಕ್ಷಣ ಎಂದು ಅಂಬೇಡ್ಕರ್ ಭಾವಿಸಿದ್ದರು.
ಘೋಷಣೆಗಳನ್ನು ಬಿಟ್ಟುಬಿಡೋಣ, ಜನರನ್ನು ಹೆದರಿಸುವ ಭಾಷೆಯನ್ನು ಕೈಬಿಡೋಣ, ನಮ್ಮ ವಿರೋಧಿಗಳ ಪರ‍್ವಗ್ರಹಗಳಿಗೂ ಸಹ ರಿಯಾಯಿತಿ ನೀಡಿ ಅವರನ್ನೂ ಒಳಗೊಳ್ಳೋಣ ಆಗ ಭವಿಷ್ಯದ ನಮ್ಮ ದರ‍್ಘ ಪಯಣದಲ್ಲಿ ಅವರೂ ಒಂದಾಗುತ್ತಾರೆ, ಈ ಪಯಣ ದರ‍್ಘವಾದಷ್ಟೂ ನಾವು ಏಕತೆಯತ್ತ ಸಾಗುತ್ತೇವೆ,,,, ”ಇದು ಸಂವಿಧಾನ ರಚನಾ ಸಭೆಯಲ್ಲಿ ಡಾ. ಜಯಕರ್ ಅವರ ಪ್ರಸ್ತಾವನೆಗೆ ಅಂಬೇಡ್ಕರ್ ಅವರು ನೀಡಿದ ಪ್ರತಿಕ್ರಿಯೆಯ ಕೆಲವು ಸಾಲುಗಳು. ಈ ಔದಾತ್ಯ, ಉದಾರವಾದಿ ಚಿಂತನಾಧಾರೆ ಮತ್ತು ಎಲ್ಲರನ್ನೂ ಒಳಗೊಳ್ಳುವ (Iಟಿಛಿಟusive) ಸೈದ್ದಾಂತಿಕ ಕಲ್ಪನೆಯೇ ಭಾರತೀಯ ಸಂವಿಧಾನದ ಬುನಾದಿ ಎನ್ನುವುದನ್ನು ಅಂಬೇಡ್ಕರ್ ತಮ್ಮ ಭಾಷಣ, ಬರಹಗಳಲ್ಲಿ, ವಿಭಿನ್ನ ಆಯಾಮಗಳಲ್ಲಿ ಸ್ಟಷ್ಟಪಡಿಸಿದ್ದಾರೆ.
ಕನಸುಗಳನ್ನು ಸಾಕಾರಗೊಳಿಸುವ ಹಾದಿ !!!
ಸಂವಿಧಾನ ರಚನೆಯ ಸಂರ‍್ಭದಲ್ಲಿ ಅಂಬೇಡ್ಕರ್ ಅವರನ್ನು ಕಾಡಿದ ವೈಯುಕ್ತಿಕ ಆರೋಗ್ಯ ಸಮಸ್ಯೆಗಳು, ರಾಜಕೀಯ ಒತ್ತಡಗಳು, ವಿಭಿನ್ನ ಸೈದ್ಧಾಂತಿಕ ಸೆಳೆತಗಳು ಹಾಗೂ ಜಾತಿ ವ್ಯವಸ್ಥೆಯ ಕರಾಳ ಚರಿತ್ರೆ ಇವೆಲ್ಲವನ್ನೂ ಒಂದು ಆವರಣದಲ್ಲಿಟ್ಟು ನೋಡುವಾಗ, ಭಾವನಾತ್ಮಕ ನೆಲೆಯಲ್ಲಿ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ನರ‍್ವಾತದಲ್ಲಿ ಉದಯಿಸಿದ ವ್ಯಕ್ತಿಯಲ್ಲ, ಅವರ ಚಿಂತನೆಗಳು ಶೂನ್ಯದಲ್ಲಿ ಉದ್ಭವಿಸಿದ ಆಲೋಚನೆಗಳಲ್ಲ. ಸ್ವಾತಂತ್ರ‍್ಯ ಸಂಗ್ರಾಮದ ಸಂರ‍್ಭದಲ್ಲಿ ಭಾರತೀಯ ಸಮಾಜ ಎದುರಿಸುತ್ತಿದ್ದ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳ ನಡುವೆ, ದೇಶದ ಸ್ವಾತಂತ್ರ‍್ಯ ಮತ್ತು ಶೋಷಿತರ ವಿಮೋಚನೆಯ ಉದಾತ್ತ ಆಲೋಚನೆಗಳು ಅವರನ್ನು ಸಂವಿಧಾನ ರ‍್ತೃ ಅಂಬೇಡ್ಕರ್ ಆಗಿ ರೂಪಿಸಿದೆ. ಈ ಆಲೋಚನೆಗಳೂ ಸಹ ಏಕಾಏಕಿ ಆವರ‍್ಭವಿಸಿದ್ದಲ್ಲ. ಇದರ ಹಿಂದೆ ಶತಮಾನಗಳ ಚಾರಿತ್ರಿಕ ಅರಿವು, ಅಧ್ಯಯನ ಮತ್ತು ಸಾಮಾಜಿಕ ಪ್ರಜ್ಞೆ ಅಡಗಿದೆ.
77 ವರ್ಷಗಳ ಆಳ್ವಿಕೆಯ ನಂತರ ಸಂವಿಧಾನ ಅಪಾಯದಲ್ಲಿದೆ, ಸಾಂವಿಧಾನಿಕ ಮೌಲ್ಯಗಳು ನಾಶವಾಗುತ್ತಿವೆ, ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ”ಎಂಬ ಆತಂಕದ ಕೂಗು ರ‍್ತಮಾನದ ಭಾರತವನ್ನು ಆವರಿಸಿದೆ. ಈ ಆತಂಕಗಳ ನಡುವೆಯೇ ಸಂವಿಧಾನವನ್ನು ಬರೆದವರು ಯಾರು ? ಅಂಬೇಡ್ಕರ್ ಏಕಾಂಗಿಯಾಗಿ ಬರೆದರೇ ? ಈ ಪ್ರಶ್ನೆಗಳು ನಮ್ಮ ನಡುವೆ ಕೇಳಿಬರುತ್ತಿವೆ. ಈ ಸರ‍್ವಜನಿಕ ಪ್ರಶ್ನೆಗಳಿಗೆ ಸರ‍್ವತ್ರಿಕ ಮನ್ನಣೆ ನೀಡದೆ ಹೋದರೂ, ತಾತ್ವಿಕ ನೆಲೆಯಲ್ಲಿ ನೋಡಿದಾಗ, ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯ ಸಂವಿಧಾನದ ಅಂತಿಮ ಕರಡು ಸಿದ್ಧಪಡಿಸಿದಾಗ, ಅದರಲ್ಲಿ ಅಂರ‍್ಗತವಾಗಿದ್ದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ನಿಯಮಗಳು, ಅವರ ಹೋರಾಟದ ಮೂರು ದಶಕಗಳಲ್ಲಿ ಮೂಡಿದ ಚಿಂತನೆಗಳು ಎನ್ನುವುದು ಸ್ಪಷ್ಟವಾಗುತ್ತದೆ.
ಹಾಗಾದರೆ ನಮ್ಮನ್ನು ಕಾಡಬೇಕಿರುವ ಪ್ರಶ್ನೆ ಏನು ? ಕುಸಿಯುತ್ತಿರುವ ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾಪ್ರಭುತ್ವೀಯ ಮೌಲ್ಯಗಳು. ಡಾ. ಅಂಬೇಡ್ಕರ್ ಅವರ ಸಮ್ಮುಖದಲ್ಲಿ ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡಾಗ ನಾವು ಗುರುತಿಸಬೇಕಿರುವುದೇನು ?
೧. ಪ್ರಾತಿನಿಧಿಕ ವ್ಯವಸ್ಥೆಯಲ್ಲಿ ಎಲ್ಲ ಸಂಘ, ಸಂಸ್ಥೆ, ಗುಂಪು ಮತ್ತು ಪಕ್ಷಗಳು ಸಂವಿಧಾನದ ಆಶಯದಂತೆ ಮಹಿಳಾ ಪ್ರಾತಿನಿಧ್ಯ, ತಳಸಮುದಾಯಗಳ ಪ್ರತಿನಿಧಿತ್ವವನ್ನು ಕಲ್ಪಿಸಲು ಸಾಧ್ಯವಾಗಿದೆಯೇ ?
೨. ಸಮಾನತೆ ಎಂಬ ಉದಾತ್ತ ಕಲ್ಪನೆಯನ್ನು ನರ‍್ವಚಿಸುವಾಗ, ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ-ರ‍್ಥಿಕ ಹಾಗೂ ಸಾಮುದಾಯಿಕ ಸಮಾನತೆಯನ್ನು, ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಯಿಂದ ನರ‍್ವಚಿಸಲಾಗುತ್ತಿದೆಯೇ ?
೩. ತಳಸಮಾಜಗಳಲ್ಲಿ ಅಸಮಾನತೆಯನ್ನು ಹೆಚ್ಚಿಸುತ್ತಲೇ ಇರುವ ರ‍್ಥಿಕ ನೀತಿ ಮತ್ತು ರಾಜಕೀಯ ಸಂಸ್ಕೃತಿಯನ್ನು ಪರಾಭವಗೊಳಿಸಲು, ತೊಡೆದುಹಾಕಲು, ಸಂಘಟಿತ ಪ್ರಯತ್ನ ಮಾಡುತ್ತಿದ್ದೇವೆಯೇ ?
೪. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕೂಗಿನ ನಡುವೆ, ಈ ಅಪಾಯಕ್ಕೆ ಕಾರಣವಾದ ಅಸಾಂವಿಧಾನಿಕ ಎನ್ನಬಹುದಾದ ಕರಾಳ ಶಾಸನಗಳು ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಶಾಸನ/ಕಾಯ್ದೆ/ನಿಯಮಗಳನ್ನು ವಿರೋಧಿಸುವ ಸಂಘಟಿತ ಹಾದಿಗಳನ್ನು ಶೋಧಿಸಿದ್ದೇವೆಯೇ ?
೫. ಹೆಚ್ಚಾಗುತ್ತಲೇ ಇರುವ ಮಹಿಳಾ ದರ‍್ಜನ್ಯಗಳು ಮತ್ತು ಜಾತಿ ತಾರತಮ್ಯಗಳಿಗೆ ಮೂಲ ಕಾರಣವಾದ ಪಿತೃಪ್ರಧಾನತೆ ಮತ್ತು ಜಾತಿ ಶ್ರೇಷ್ಠತೆಯ ಚೌಕಟ್ಟುಗಳನ್ನು , ಸಾಮುದಾಯಿಕ ನೆಲೆಯಲ್ಲಿ ಹೋಗಲಾಡಿಸುವ ಪ್ರಯತ್ನಗಳನ್ನು ಮಾಡಿದ್ದೇವೆಯೇ ?
![]()
ಭವಿಷ್ಯದ ಮುಂಗಾಣ್ಕೆ
ಈ ಪ್ರಶ್ನೆಗಳಿಗೆ ಉತ್ತರಿಸುವಾಗ ಡಾ. ಬಿ.ಆರ್. ಅಂಬೇಡ್ಕರ್ ನಮಗೆ ವ್ಯಕ್ತಿಯಾಗಿ ಕಾಣುವುದಕ್ಕಿಂತಲೂ, ಸಮ ಸಮಾಜದ ಪ್ರರ‍್ತಕ ಶಕ್ತಿಯಾಗಿ ಕಾಣಬೇಕಲ್ಲವೇ ? ಅವರ ಎರಡೂ ಬದಿಗಳಲ್ಲಿ ಇನ್ನೂ ಹಲವು ದರ‍್ಶನಿಕ ವ್ಯಕ್ತಿಗಳು ಕಾಣಬೇಕಲ್ಲವೇ ? ಸಂವಿಧಾನ ಬರೆದವರು ಯಾರು ಎನ್ನುವ ಶುಷ್ಕ ಪ್ರಶ್ನೆಗಿಂತಲೂ ಅಂಬೇಡ್ಕರ್ ಮತ್ತು ಅವರ ಸಂಗಾತಿಗಳು ಕಂಡ ಕನಸುಗಳು, ಆಶಯಗಳು, ಭವಿಷ್ಯದ ಆಕಾಂಕ್ಷೆ ಮತ್ತು ನಿರೀಕ್ಷೆಗಳು ನಮ್ಮನ್ನು ಕಾಡಬೇಕಲ್ಲವೇ ? ಈ ಜಟಿಲ ಪ್ರಶ್ನೆಗಳೊಂದಿಗೆ ಡಾ. ಅಂಬೇಡ್ಕರ್ ಅವರನ್ನು ಅಮರ‍್ತ ನೆಲೆಯಲ್ಲಿಟ್ಟು ನೋಡಿದಾಗ ನಮ್ಮ ದೃಷ್ಟಿ, ನಮ್ಮೊಳಗಿನ ಕೊರತೆಗಳತ್ತ ವಾಲುತ್ತದೆ. ಮರ‍್ತ ರೂಪದ ಅಂಬೇಡ್ಕರರನ್ನು ಪ್ರತಿಮೆಗಳಲ್ಲಿ ಬಂಧಿಸಿ ಆರಾಧಿಸುವ ಪ್ರತಿಯೊಂದು ಮನಸ್ಸಿಗೂ ತನ್ನೊಳಗಿನ ಈ ತಾಕಲಾಟಗಳು ರ‍್ಥವಾದರೆ, ದಲಿತ ಚಳುವಳಿಗೆ ಹೊಸ ದಿಕ್ಕು ಕಾಣಿಸುತ್ತದೆ.
ಒಳಮೀಸಲಾತಿ ವಿವಾದವು ದಲಿತ ಚಳುವಳಿಗಳನ್ನು ವಿಘಟನೆಯ ಹಂತದಿಂದ ವಿಭಜನೆಯ ಹಂತಕ್ಕೆ ಕೊಂಡೊಯ್ಯುತ್ತಿರುವ ಹೊತ್ತಿನಲ್ಲಿ ನಮಗೆ ಕಾಣಬೇಕಿರುವುದು ಸಂವಿಧಾನದ ಮೂಲಕ ಅಂಬೇಡ್ಕರ್ ಕಂಡ ಭವಿಷ್ಯದ ಕನಸುಗಳೇ ಹೊರತು, ಗ್ರಾಂಥಿಕ ರ‍್ತೃತ್ವ ಅಲ್ಲ. ಈ ಕನಸುಗಳು ಇಂದು ಭಗ್ನವಾಗುತ್ತಿವೆ. ಅದು ಆಡಳಿತ ವ್ಯವಸ್ಥೆಯಿಂದ ಆಗುತ್ತಿರುವಷ್ಟೇ ಪ್ರಮಾಣದಲ್ಲಿ ಸಂಘಟನಾತ್ಮಕ, ವೈಯುಕ್ತಿಕ, ಸಾಮುದಾಯಿಕ ಹಾಗೂ ರಾಜಕೀಯ ನೆಲೆಗಳಲ್ಲಿ ಆಗುತ್ತಿದೆ. ಸಂವಿಧಾನದ ರ‍್ತೃ ಎಂದು ವೈಭವೀಕರಿಸಿ, ಮರ‍್ತೀಕರಿಸಿ ಆರಾಧಿಸುವುದಕ್ಕಿಂತಲೂ, ಆ ರ‍್ತೃವಿನ ಆಶಯಗಳನ್ನು ಸಾಕಾರಗೊಳಿಸುವ ದಾರಿಗಳನ್ನು ಶೋಧಿಸಿದರೆ , ನಾವು ಅಂಬೇಡ್ರ‍್ವಾದಿಗಳು ಎಂದು ಎದೆಮುಟ್ಟಿ ಹೇಳಬಹುದು.
(ವಿ ಸೂ : ಈ ಲೇಖನದಲ್ಲಿರುವ ಮಾಹಿತಿಗಳು, ಅಂಬೇಡ್ಕರ್ ಅವರ ಉಲ್ಲೇಖಗಳು ಮತ್ತು ಚಾರಿತ್ರಿಕ ಘಟನೆಗಳನ್ನು – The Foresighted Ambedkar ̲- Anurag Bhaskar ಪುಸ್ತಕದಿಂದ ಪಡೆದುಕೊಳ್ಳಲಾಗಿದೆ )
-೦-೦-೦-೦-೦





