ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರತೆ ಜಾಸ್ತಿಯಾಗಿದೆ. ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್ ಹಾಗೂ ಅಮೆರಿಕದ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ. ಇದರಿಂದ ಕೆರಳಿರುವ ಇರಾನ್‌ಗೆ ಮಾಡು ಇಲ್ಲವೇ ಮಡಿ ಎಂಬ ಸನ್ನಿವೇಶ ನಿರ್ಮಾಣವಾಗಿದೆ.

ಹೀಗಾಗಿ ಇರಾನ್ ಅಮೆರಿಕದ ವಾಯು ನೆಲೆಗಳು ಹಾಗೂ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಪ್ರತೀಕಾರದ ದಾಳಿ ಮುಂದುವರೆಸಿದೆ. ಪ್ರಮುಖ ವಿಮಾನ ನಿಲ್ದಾಣಗಳು, ನಾಗರಿಕ ಪ್ರದೇಶಗಳ ಮೇಲೆ ಇರಾನ್ ಸರಣಿ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ಭಾರತದ ಬೆಂಬಲಕ್ಕೆ ಮೋದಿ ಶ್ಲಾಘನೆ…
ಇನ್ನೂ ಈ ವಿಚಾರದಲ್ಲಿ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಗೆ ಬೆಂಬಲ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ದುಬೈ ಸೇರಿದಂತೆ ಯುಎಇಯ ಇತರ ಪ್ರದೇಶಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಶಾಂತಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ದುಬೈ ಸೇರಿದಂತೆ ಮಧ್ಯಪ್ರಾಚ್ಚದ ಭಾರತೀಯರ ರಕ್ಷಣೆಗೆ ಕೋರಿದ್ದಾರೆ.
ಇದನ್ನೂ ಓದಿ : ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ
ಈ ಸಂಕಷ್ಟದ ಸಮಯದಲ್ಲಿ, ಭಾರತವು ಯುಎಇಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಯುಎಇಯಲ್ಲಿ ವಾಸಿಸುವ ಭಾರತೀಯರನ್ನು ಸುರಕ್ಷಿತವಾಗಿರಿಸುವಲ್ಲಿ ಭಾರತ ಮತ್ತು ದುಬೈ ನಡುವಿನ ವರ್ಷಗಳ ಬಾಂಧವ್ಯಕ್ಕೆ ಅಧ್ಯಕ್ಷ ನಹ್ಯಾನ್ ಅವರನ್ನು ಶ್ಲಾಘಿಸಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತಿಹಾಸದ ಅತ್ಯಂತ ದೊಡ್ಡ ದಾಳಿ…





