ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಶಾಸಕ ಯತ್ನಾಳ್ (Yatnal) ಹತ್ಯೆಗೆ ಪ್ರಚೋದನೆ ನೀಡಲಾಗುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯಪುರ (Vijayapura) ಪೊಲೀಸರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಎಸ್ಪಿ ಲಕ್ಷ್ಮಣ ನಿಂಬರಗಿ (Sp Lakshman nimbaragi) ,ಪ್ರಚೋದನಕಾರಿಯಾಗಿ ಮಾತನಾಡಿ ಆಡಿಯೋ, ವಿಡಿಯೋ ಹರಿಬಿಟ್ಟರೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಏಪ್ರಿಲ್ ,15 ರಂದು ರ್ಯಾಲಿ ನಡೆಸಿ, ಯತ್ನಾಳ್ ತಲೆ ಕತ್ತರಿಸುವ ಆಡಿಯೋ ಒಂದನ್ನು ಹರಿಬಿಡಲಾಗಿತ್ತು.
ಇನ್ನೊಂದೆಡೆ ಮತ್ತೊಬ್ಬ ಮುಸ್ಲಿಂ ಯುವಕ ಪ್ರಚೋದನಕಾರಿಯಾಗಿ ಮಾತನಾಡಿ ಸರ್ ತನ್ ಸೇ ಜುದಾ ಎಂದು ವಿಡಿಯೋ ಮಾಡಿದ್ದ. ಹೀಗಾಗಿ ಕೋಮು ಗಲಭೆ, ಗಲಾಟೆ, ಹತ್ಯೆಗೆ ಪ್ರಚೋದಿಸುವಂತೆ ಮಾತನಾಡುವವರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಆಡಿಯೋ, ಪೋಸ್ಟ್ಗಳನ್ನ ಹರಿ ಬಿಟ್ಟರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.ಯಾವುದೇ ಸಮುದಾಯದ ವ್ಯಕ್ತಿಗಳು ಅನಗತ್ಯ ಊಹಾಪೋಹ, ಸುಳ್ಳು ಸುದ್ದಿ, ವದಂತಿ, ಅವಹೇಳನಕಾರಿ ಹೇಳಿಕೆ, ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.