ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾದ ಜನಿವಾರ ಜಟಾಪಟಿ ಬಿಸಿ ಇನ್ನು ತಣ್ಣಗಾಗಿಲ್ಲ. ಬೀದರ್ (Bidar) ಹಾಗೂ ಶಿವಮೊಗ್ಗದಲ್ಲಿ (Shimoga) ಸಿಇಟಿ (CET) ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿ ಅವಮಾನ ಮಾಡಿದ್ದಕ್ಕೆ ಮಂತ್ರಾಲಯ ಪೀಠಾಧೀಶ ಶ್ರೀ ಸುಬುಧೇಂದ್ರ ತೀರ್ಥರು (Subudendra theertaru) ಆಕ್ರೋಶ ಹೊರ ಹಾಕಿದ್ದಾರೆ.

ಈ ಜನಿವಾರ ಅನ್ನೋದು ಧರ್ಮದ ಹಾಗೂ ಸಂಪ್ರದಾಯದ ಸಂಕೇತ.ಅದನ್ನು ಕತ್ತರಿಸಿ ಡಸ್ಟ್ ಬಿನ್‌ನಲ್ಲಿ ಹಾಕಿರುವ ಘಟನೆ ನಾವು ಖಂಡಿಸುತ್ತೇವೆ. ಭಾರತದ ಸಂವಿಧಾನದಲ್ಲಿ ಅವರವರ ಧರ್ಮವನ್ನು ಆಚರಿಸುವುದಕ್ಕೆ ಅವಕಾಶ ಇದೆ ಎಂದಿದ್ದಾರೆ.
ಈ ಕಾಂಗ್ರೆಸ್ ನವರು ಒಂದೆಡೆ ಸದಾ ಸಂವಿಧಾನದ ಬಗ್ಗೆ ಮಾತಾಡುವುದು,ಮತ್ತೊಂದೆಡೆ ಸಂವಿಧಾನದಲ್ಲಿ ಹೇಳಿದ ಧರ್ಮ ಸ್ವಾತಂತ್ರ್ಯ ಹರಣ ಮಾಡುವುದು.ಈ ದ್ವಂದ್ವ ನಿಲುವು ಅತ್ಯಂತ ಖಂಡನೀಯ ಅಂತ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.






