
ಕರ್ನಾಟಕದಲ್ಲಿ HMP ವೈರಸ್ ಪತ್ತೆಯಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಆತಂಕ ಬೇಕಿಲ್ಲ, ಸೋಂಕು 2001ರಲ್ಲಿ ಬಂದಿದ್ದು, ಅಂದಿನಿಂದಲೂ ಈ HMP ವೈರಸ್ ಬರುತ್ತೆ ಹೋಗುತ್ತೆ. ಈಗ ಸೋಂಕಿಗೆ ಒಳಗಾಗಿರುವ ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ.. ಬೆಂಗಳೂರಿನ ಹೆಬ್ಬಾಳದ ಬ್ಯಾಪ್‌ಟಿಸ್ಟ್ ಆಸ್ಪತ್ರೆಯಲ್ಲಿ ಮಕ್ಕಳು ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದಾರೆ. ಡಿಸೆಂಬರ್‌ನಲ್ಲೇ ಒಂದು ಮಗು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದೆ.. ಇನ್ನುಳಿದ 8 ತಿಂಗಳ ಮಗು ಬಹುತೇಕ ಗುಣಮುಖವಾಗಿದ್ದು ಮಂಗಳವಾರ ಡಿಸ್ಚಾರ್ಜ್ ಆಗುತ್ತಿದೆ ಎಂದಿದ್ದಾರೆ.
HMP ವೈರಸ್ ಕೋವಿಡ್ ರೀತಿ ಜನರ ಪ್ರಾಣಕ್ಕೆ ಆಪತ್ತು ತರಲ್ಲ. ಆದ್ರೆ HMP ವೈರಸ್ ನ್ಯುಮೋನಿಯಾ, ಟೈಫಾಯಿಡ್ಗಿಂತಲೂ ಶಕ್ತಿಶಾಲಿ ಆಗಿದೆ. ಜ್ವರ, ನೆಗಡಿ, ಮೂಗು ಕಟ್ಟುವಿಕೆ, ಕೆಮ್ಮು HMP ವೈರಸ್ ಪ್ರಮುಖ ಲಕ್ಷಣ. ಒಂದು ವಾರ, 10 ದಿನ, ತಿಂಗಳಾದ್ರೂ ರೋಗಗಳು ವಾಸಿಯಾಗಲ್ಲ. ಒಬ್ಬರಿಂದ ಒಬ್ಬರಿಗೆ ಹರಡುತ್ತೆ-ಮಕ್ಕಳು, ವೃದ್ಧರನ್ನ ಕಾಡುತ್ತದೆ. ಶುಗರ್, ಬಿಪಿ, ಹೃದಯ ಸಮಸ್ಯೆ ಇದ್ರೆ ಬೇಗ ಹರಡುತ್ತದೆ.
HMP ವೈರಸ್ ಸೋಂಕನ್ನು ತಡೆಯಲು ಮುನ್ನೆಚ್ಚರಿಕೆಗಳು ಏನೇನು ಅನ್ನೋದನ್ನು ಸರ್ಕಾರದ ಕಡೆಯಿಂದ ತಿಳಿಸಲಾಗಿದ್ದು, ಸ್ಯಾನಿಟೈಸರ್ ಬಳಸಿ, ಶುಚಿತ್ವವನ್ನ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿಯಿದ್ರೆ ಜನರ ಮಧ್ಯೆ ಸೇರುವುದು ಸರಿಯಲ್ಲ. ಒಬ್ಬರು ಬಳಸುವ ಟವೆಲ್, ಕರ್ಚೀಫ್ ಬೇರೊಬ್ಬರು ಬಳಸಬಾರದು. ಕೈಗಳನ್ನ ಸ್ಯಾನಿಟೈಸ್ ಮಾಡಿ, ಸೋಪಿನಿಂದ ತೊಳೆಯುವುದು ಸೂಕ್ತ. ಅನಾರೋಗ್ಯ ಇದ್ದರೆ ಸಾರ್ವಜನಿಕ ಸ್ಥಳಗಳಿಂದ ದೂರ ಇರುವುದು ಸೂಕ್ತ. ಬಿಸಿನೀರು, ಕಷಾಯದ ಜೊತೆಗೆ ಬಿಸಿ ಊಟ ಸೇವನೆ ಅಗತ್ಯ. ಐಸ್‌ಕ್ರೀಂ, ಕೂಲ್‌ಡ್ರಿಂಕ್ಸ್, ಜಂಕ್‌ಫುಡ್‌ನಿಂದ ದೂರ ಇದ್ದಷ್ಟೂ ಉತ್ತಮ. ಅನಾರೋಗ್ಯಕ್ಕೆ ಒಳಗಾದರೆ ಮುಖ್ಯವಾಗಿ ವೈದ್ಯರನ್ನ ಸಂಪರ್ಕಿಸಿ, ಚಿಕಿತ್ಸೆ ಪಡೆದೆ ಆರೋಗ್ಯ ಮರಳಿ ಪಡೆಯಬಹುದು. ಆತಂಕ ಬೇಡ ಎನ್ನುವುದು ನಮ್ಮ ಕಳಕಳಿ.