• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಕೀಯ ಪಗಡೆ ಆಟದ ಬಗ್ಗೆ ಕಾಂಗ್ರೆಸ್​ಗೆ ಭಯ ಶುರು ಆಗಿದ್ಯಾ..?

ಕೃಷ್ಣ ಮಣಿ by ಕೃಷ್ಣ ಮಣಿ
February 28, 2025
in ಕರ್ನಾಟಕ, ದೇಶ, ರಾಜಕೀಯ
0
ರಾಜಕೀಯ ಪಗಡೆ ಆಟದ ಬಗ್ಗೆ ಕಾಂಗ್ರೆಸ್​ಗೆ ಭಯ ಶುರು ಆಗಿದ್ಯಾ..?
Share on WhatsAppShare on FacebookShare on Telegram

ತಮಿಳುನಾಡಿನ ಕೊಯಮತ್ತೂರಲ್ಲಿ ಬುಧವಾರ ರಾತ್ರಿ ಶಿವರಾತ್ರಿ ಸಂಭ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ ಸಂದೇಶ ರವಾನೆ..? ಮಾಡಿದ್ರಾ ಅನ್ನೋ ಚರ್ಚೆ ಶುರುವಾಗಿದೆ. ಒಂದೇ ವೇದಿಕೆಯಲ್ಲಿ ಶಿವಕುಮಾರ್​ ಹಾಗು ಕೇಂದ್ರ ಗೃಹ ಸಚಿವ ಅಮಿತ್​ ಷಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದು, ಕಾಂಗ್ರೆಸ್​ ಕಾರ್ಯಕರ್ತರು ಹಾಗು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ರು ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ADVERTISEMENT

ಅಮಿತ್‌ ಷಾ ಜೊತೆಗೆ ವೇದಿಕೆ ಹಂಚಿಕೊಂಡ ಡಿ.ಕೆ ಶಿವಕುಮಾರ್ ನಡೆಯನ್ನು AICC ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್​ ಬಹಿರಂಗವಾಗಿ ಟೀಕಿಸಿದ್ದಾರೆ. ಅಮಿತ್‌ ಷಾ ಜೊತೆಗೆ ವೇದಿಕೆ ಏರಿದ್ದು ಸರಿಯಲ್ಲ, ಜಾತ್ಯತೀತ ಪಕ್ಷದ ಅಧ್ಯಕ್ಷರಾಗಿ ಇದ್ದುಕೊಂಡು ಡಿ.ಕೆ ಶಿವಕುಮಾರ್​ ಮಾಡಿದ್ದು ತಪ್ಪು ಎಂದಿದ್ದಾರೆ. ಇನ್ನು ಸದ್ಗುರು ಜಗ್ಗಿ ವಾಸುದೇವ್​​ ವಿಚಾರಗಳು RSS ಸಿದ್ಧಾಂತಕ್ಕೆ ಹತ್ತಿರವಾಗಿದ್ದು, ಇತ್ತೀಚಿಗೆ ರಾಹುಲ್​ ಗಾಂಧಿ ಅವರನ್ನೇ ಜಗ್ಗಿವಾಸುದೇವ್​ ಗೇಲಿ ಮಾಡಿದ್ದರು. ಅವರ ಆಮಂತ್ರಣ ಒಪ್ಪಿ ಕಾರ್ಯಕ್ರಮಕ್ಕೆ ಹೋಗಿದ್ರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.

ಅಮಿತ್ ಷಾ ಜೊತೆ ಡಿ.ಕೆ ಶಿವಕುಮಾರ್​ ವೇದಿಕೆ ಹಂಚಿಕೆ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯಲಿದೆ. ಇದೆಲ್ಲವೂ ಕ್ಷಿಪ್ರ ರಾಜಕೀಯಯ ಬೆಳವಣಿಗೆ ಮುನ್ಸೂಚನೆ ಎನ್ನುವ ಮೂಲಕ ವಿಜಯೇಂದ್ರ ಸ್ಫೋಟಕ ತಿರುವು ನೀಡಿದ್ದಾರೆ. ಇಶಾ ಫೌಂಡೇಷನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರಕ್ಕೆ ಡಿ.ಕೆ. ಶಿವಕುಮಾರ್‌ ಅವರೇ ಉತ್ತರ ಕೊಡಬೇಕು. ಆದರೆ ಕಾಂಗ್ರೆಸ್‌ನಲ್ಲಿ ಒಳಜಗಳ ಜಾಸ್ತಿ ಆಗ್ತಿದೆ ಎಂದಿದ್ದಾರೆ. ಆದರೆ ಅಮಿತ್ ಷಾ ಜೊತೆಗೆ ವೇದಿಕೆ ಹಂಚಿಕೊಂಡ ಡಿಸಿಎಂ ಡಿಕೆಶಿ ವಿಚಾರದಲ್ಲಿ ನಾನು ಚರ್ಚೆ ಮಾಡೋಕೆ ಹೋಗಲ್ಲ ಎಂದಿದ್ದಾರೆ ಬಿ.ಎಸ್‌ ಯಡಿಯೂರಪ್ಪ.

ಪಕ್ಷದ ಒಳಜಗಳ ಬಿಟ್ಟು ಒಟ್ಟುಗೂಡಿಸುವ ವಿಚಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಅದೆಲ್ಲಾ ಹಿರಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ . ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ‌ ಮಾತನಾಡಿ, ಸಾಮಾನ್ಯವಾಗಿ ಅವ್ರು ನಮ್ಮ ಮನೆಗೆ ಬರ್ತಿರ್ತಾರೆ. ಈ ಭೇಟಿ ಏನು ಹೊಸದೇನಲ್ಲ. ಎಲ್ಲರು ಬರ್ತಾರೆ ಅದೇ ರೀತಿ ಸುರೇಶ್ ಬಂದಿದ್ದಾರೆ. ಅವರು ಪದೇ ಪದೇ ಬರ್ತಿರ್ತಾರೆ. ಈ ಬಾರಿ ಕೂಡಾ ಸಾಮಾನ್ಯವಾಗಿ ಭೇಟಿ ನೀಡಿದ್ದಾರೆ ಎಂದಿದ್ದಾರೆ.

ಪಕ್ಷದ ಒಳಜಗಳ, ಒಟ್ಟುಗೂಡಿಸುವ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿ, ನಾವು ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಕೆಲಸ ಕೊಟ್ಟಾಗ ಒಟ್ಟಾಗಿಯೇ ಮಾಡ್ತೇವೆ ಎಂದು ತೇಪೆ ಸಾರಿಸುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್​ನಲ್ಲಿ ಮಿಂಚಿನ ಸಂಚಾರ ಆಗ್ತಿದೆ ಅನ್ನೋದು ಮಾತ್ರ ರಾಜಕಾರಣ ಬಲ್ಲವರಿಗೆ ಗೊತ್ತಾಗುತ್ತಿದೆ. ಆದರೆ ಏನು ಆ ಮಿಂಚಿನ ಸಂಚಾರ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗ ಆಗಬೇಕಿದೆ.

Tags: Amit Shaamit shah dk shivakumar face to faceAmith Shaamith sha and dk shivakumar in one stageamith sha vs dk shivakumarD K ShivakumarDK Shivakumardk shivakumar amith shadk shivakumar and amith shadk shivakumar congressdk shivakumar isha foudationdk shivakumar latest newsdk shivakumar newsdk shivakumar news todaydk shivakumar raiddk shivakumar today newssanthosh lad on dk shivakumar and amith sha
Previous Post

ಸಾಹುಕಾರ್​ ಮನೆಗೆ ಡಿ.ಕೆ ಸುರೇಶ್​ ಓಡೋಡಿ ಬಂದಿದ್ಯಾಕೆ..?

Next Post

ನೀವು ಬಿಜೆಪಿಗೆ ಹೋಗ್ತೀರಾ..? ಡಿ.ಕೆ ಶಿವಕುಮಾರ್​ಗೆ ನೇರ ಪ್ರಶ್ನೆ..

Related Posts

ಚನ್ನಮ್ಮ ಬಡ ಜನ, ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ : ರಮೇಶಗೌಡ ಭಾವುಕ..!
Top Story

ಚನ್ನಮ್ಮ ಬಡ ಜನ, ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ : ರಮೇಶಗೌಡ ಭಾವುಕ..!

by ಪ್ರತಿಧ್ವನಿ
July 27, 2026
0

ಬೆಂಗಳೂರು :  ಶ್ರೀಮತಿ ಚನ್ನಮ್ಮ ದೇವೇಗೌಡರು ಬಡ ಜನರು ಮತ್ತು ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ. ಕಷ್ಟಗಳನ್ನು ಹೊತ್ತು ಮನೆಗೆ ಬರುತ್ತಿದ್ದವರಿಗೆ ನೆರವು ನೀಡುವ ಆಸರೆಯಾಗಿದ್ದರು ಎಂದು...

Read moreDetails
ಆಸ್ಪತ್ರೆಯಿಂದ ಸೋನಮ್ ಡಿಸ್ಟಾರ್ಜ್‌‌: ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ನಮನ

ಆಸ್ಪತ್ರೆಯಿಂದ ಸೋನಮ್ ಡಿಸ್ಟಾರ್ಜ್‌‌: ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ನಮನ

July 27, 2026
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬಡಿದಾಡಿಕೊಂಡ ಕಾರ್ಯಕರ್ತರು

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬಡಿದಾಡಿಕೊಂಡ ಕಾರ್ಯಕರ್ತರು

July 27, 2026
ಕೆಪಿಎಸ್‌ಸಿಯಲ್ಲಿ 400 ಹುದ್ದೆಗಳಿಗೆ 800 ಕೋಟಿ ಡೀಲ್‌: ಆರ್‌.ಅಶೋಕ್‌ ಆರೋಪ

ಕೆಪಿಎಸ್‌ಸಿಯಲ್ಲಿ 400 ಹುದ್ದೆಗಳಿಗೆ 800 ಕೋಟಿ ಡೀಲ್‌: ಆರ್‌.ಅಶೋಕ್‌ ಆರೋಪ

July 27, 2026
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

July 27, 2026
Next Post
ನೀವು ಬಿಜೆಪಿಗೆ ಹೋಗ್ತೀರಾ..? ಡಿ.ಕೆ ಶಿವಕುಮಾರ್​ಗೆ ನೇರ ಪ್ರಶ್ನೆ..

ನೀವು ಬಿಜೆಪಿಗೆ ಹೋಗ್ತೀರಾ..? ಡಿ.ಕೆ ಶಿವಕುಮಾರ್​ಗೆ ನೇರ ಪ್ರಶ್ನೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada