• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭ್ರೂಣ ಹತ್ಯೆ.. ಖಾಕಿ ಕಮಾಲ್‌

ಕೃಷ್ಣ ಮಣಿ by ಕೃಷ್ಣ ಮಣಿ
September 5, 2024
in Top Story, ಕರ್ನಾಟಕ, ಶೋಧ
0
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭ್ರೂಣ ಹತ್ಯೆ.. ಖಾಕಿ ಕಮಾಲ್‌
Share on WhatsAppShare on FacebookShare on Telegram

ಮಂಡ್ಯ ಜಿಲ್ಲೆ ಪಾಂಡವಪುರ ಪೊಲೀಸ್ ಠಾಣೆ ಸೇರಿದಂತೆ ಮೇ 6ರಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ ದೂರು ನೀಡಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಗ್ರೂಪ್-ಡಿ ಸಿಬ್ಬಂದಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಎಂಬುವರಿಗೆ ಸೇರಿದ ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 19 ಜನ ಆರೋಪಿಗಳಿದ್ದು, ಅದರಲ್ಲಿ 12 ಜನರನ್ನು ಅರೆಸ್ಟ್‌ ಮಾಡಲಾಗಿತ್ತು. ಇನ್ನುಳಿದ 7 ಜನ ತಲೆ ಮರೆಸಿಕೊಂಡಿದ್ದರು.

ADVERTISEMENT

ಮೇಲುಕೋಟೆ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿ ಒಟ್ಟು 7 ಜನ ಆರೋಪಿಗಳಿದ್ದು, ಅದರಲ್ಲಿ ಮೂವರ ಬಂಧನ ಆಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಉಳಿದ ನಾಲ್ವರು ತಲೆಮರೆಸಿಕೊಂಡಿದ್ದರು. ಇನ್ನು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಹೆಣ್ಣು ಭ್ರೂಣ ತಪಾಸಣೆ ಮಾಡಲು ತೆರಳುತ್ತಿದ್ದಾಗ ದಾಳಿ ಮಾಡಿದಾಗ ನಾಲ್ವರು ಆರೋಪಿಗಳಿದ್ದು, ಮೂವರ ಬಂಧನ ಮಾಡಲಾಗಿತ್ತು. ಓರ್ವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದನು. ಮೈಸೂರಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ಹಾಗೂ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.

ಹೆಣ್ಣು ಭ್ರೂಣವನ್ನು ಆಕ್ರಮವಾಗಿ ಸ್ಕ್ಯಾನ್ ಮಾಡಿ ಪತ್ತೆ ಮಾಡಲಾಗ್ತಿತ್ತು. ಏಜೆಂಟ್‌ಗಳಾದ ಆಶಾ ಕಾರ್ಯಕರ್ತರು, ಖಾಸಗಿ ಲ್ಯಾಬ್ ಟೆಕ್ನಿಷಿಯನ್ಸ್‌ಗಳ ಮೂಲಕ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಮಾಡುತ್ತಿದ್ದವರ ಮೇಲೆ ಹಾಗೂ ಈ ದುಷ್ಕೃತ್ಯಕ್ಕೆ ಸಹಕರಿಸುತ್ತಿದ್ದವರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಆ ಆರೋಪಿಗಳ ಪತ್ತೆ ಮಾಡುವುದಕ್ಕಾಗಿ ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

ಆರೋಪಿಗಳಾದ ಅಭಿಷೇಕ್ ಮತ್ತು ವಿರೇಶ್‌ ಅವರನ್ನು ದಿನಾಂಕ: 3-09-2024 ರಂದು ಅರೆಸ್ಟ್‌ ಮಾಡಿ, ಕೂಲಂಕಷವಾಗಿ ವಿಚಾರಣೆ ಮಾಡಿ, ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಅವರು ಕೊಟ್ಟ ಮಾಹಿತಿ ಮೇರೆಗೆ 10 ಜನ ಆರೋಪಿಗಳಾದ ಪುಟ್ಟರಾಜು, ಕುಮಾರ್, ಶಾರದಮ್ಮ, ದಾಸೇಗೌಡ, ಲ್ಯಾಬ್ ಸತ್ಯ, ಮೀನಾ, ಮಲ್ಲಿಕಾರ್ಜುನ್, ಸೋಮಶೇಖರ್, ರತ್ನಮ್ಮ, ಪ್ರೇಮ ಅಲಿಯಾಸ್‌ ಪಾರ್ವತಿ ಅವರನ್ನು ಪತ್ತೆ ಹಚ್ಚಿ ಅರೆಸ್ಟ್‌ ಮಾಡಲಾಗಿದೆ. ಒಟ್ಟು 12 ಜನ ಆರೋಪಿಗಳಿಂದ ಅಕ್ರಮವಾಗಿ ಕೃತ್ಯಕ್ಕೆ ಉಪಯೋಗಿಸಿದ ಎರಡು ಸ್ಕ್ಯಾನಿಂಗ್ ಉಪಕರಣಗಳು ಹಾಗೂ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮೂರು ಮೊಬೈಲ್‌ ಸೇರಿದಂತೆ 23 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ.ಸಿ.ಇ ಮತ್ತು ಶ್ರೀ.ಗಂಗಾಧರಸ್ವಾಮಿ, ಡಿಎಸ್‌ಪಿ ಎಲ್.ಕೆ.ರಮೇಶ್, ಶ್ರೀ.ಮುರುಳಿ, ಡಾ.ಸುಮೀತ್‌ ಮಾರ್ಗದರ್ಶನದಲ್ಲಿ ಪಾಂಡವಪುರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಆರ್ ವಿವೇಕಾನಂದ, ಕೆರಗೋಡು ವೃತ್ತ ನಿರೀಕ್ಷಕ ಎನ್.ವಿ ಮಹೇಶ್, ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಮತ್ತು ಪಿಎಸ್‌ಐಗಳಾದ ಉಮೇಶ್, ವೈ.ಎನ್ ರವಿಕುಮಾರ್, ಶೇಷಾದ್ರಿ, ರಾಘವೇಂದ್ರ ಕಠಾರಿ, ರಸೂಲ್ ಸಾಬ್ ಗೌಂಡಿ, ಮಂಜುನಾಥ್, ರವಿಕುಮಾರ್.ಡಿ ಮತ್ತು ಅಪರಾಧ ಪತ್ತೆ ದಳ ತಂಡದ ಸಿಬ್ಬಂದಿ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ವಿಶೇಷ ತನಿಖಾ ತಂಡದಲ್ಲಿ ಲಿಂಗರಾಜು, ಚಿಕ್ಕಯ್ಯ, ಅನಿಲ್, ಪ್ರಸನ್ನ, ಮಹೇಶ್, ಮಂಜುನಾಥ್, ಲೋಕೇಶ್, ಚಿರಂಜೀವಿ, ಪ್ರಭುಸ್ವಾಮಿ, ಗುರುಪ್ರಸಾದ್, ರಿಯಾಜ್, ಪ್ರಶಾಂತ್, ಇಂದ್ರ ಕುಮಾರ್, ಕಿರಣ್, ಆನಂದ, ರಾಜೀವ್, ಪ್ರಶಾಂತ್ ಕುಮಾರ್, ಪ್ರವೀಣ, ನಾಗೇಂದ್ರ, ತಾಂತ್ರಿಕ ವಿಭಾಗದ ಲೋಕೇಶ್ ಮತ್ತು ರವಿಕಿರಣ್ ಕಾರ್ಯವನ್ನು ಗೃಹ ಇಲಾಖಡೆ ಶ್ಲಾಘಿಸಿದ್ದು ತಂಡಕ್ಕೆ ಗೃಹ ಇಲಾಖೆಯಿಂದ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ಘೋಷಣೆ ಮಾಡಲಾಗಿದೆ.

Tags: abortionsfeticide casegang involved in abortion racket arrestedgender determination and abortion gang arrestedillegal abortion caseillegal abortion in mandyaillegal abortion racket caught in mandya |Mandyamandya abortion case cidmandya ayurveda day care center abortion casemandya casemandya feticide casemandya illegal abortionmandya illegal abortion racketmandya illegal abortion racket case
Previous Post

ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್.ಆಕ್ಸಿಜನ್ ಇಲ್ಲದೆ ರೋಗಿಗಳ ಪರದಾಟ

Next Post

ಶೈಕ್ಷಣಿಕ ಸವಾಲುಗಳ ನಡುವೆ ಶಿಕ್ಷಕ ದಿನಾಚರಣೆ

Related Posts

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!
ಕರ್ನಾಟಕ

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

by ಪ್ರತಿಧ್ವನಿ
September 1, 2026
0

ಹೊಸ ನಿರ್ದೇಶಕ ಶಿವಚಿರಂತನ ಅವರು ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರ, ಶಬ್ದ...

Read moreDetails
ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

September 1, 2026
“MR” ಜಾಕ್ ಟೀಸರ್‌ ಬಂತು

“MR” ಜಾಕ್ ಟೀಸರ್‌ ಬಂತು

September 1, 2026
ಜಾತಿ ದೌರ್ಜನ್ಯ ಅಸ್ಪೃಶ್ಯತೆ ಮತ್ತು ರಾಜಕೀಯ

ಜಾತಿ ದೌರ್ಜನ್ಯ ಅಸ್ಪೃಶ್ಯತೆ ಮತ್ತು ರಾಜಕೀಯ

September 1, 2026
ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

September 1, 2026
Next Post
ಶೈಕ್ಷಣಿಕ ಸವಾಲುಗಳ ನಡುವೆ ಶಿಕ್ಷಕ ದಿನಾಚರಣೆ

ಶೈಕ್ಷಣಿಕ ಸವಾಲುಗಳ ನಡುವೆ ಶಿಕ್ಷಕ ದಿನಾಚರಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada