ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ರಾಜೇಶ್ ನಟರಂಗ ರಾಯ ಫಿಲಂಸ್ ಬ್ಯಾನರ್ ನಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ “NH 66” ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಜೇಶ್ ನಟರಂಗ ಅವರ ಫಸ್ಟ್ ಲುಕ್ ಅನಾವರಣವಾಗಿದೆ.

ಡಿಫರೆಂಟ್ ಲುಕ್ ನಲ್ಲಿ ರಾಜೇಶ್ ನಟರಂಗ ಅವರು ಕಾಣಿಸಿಕೊಂಡಿದ್ದು, ಅವರ ಪಾತ್ರ ಏನಿರಬಹುದು ಎಂದು ಕುತೂಹಲ ಹುಟ್ಟಿಸಿದೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಈ ಚಿತ್ರದ ಪ್ರಮುಖಪಾತ್ರಧಾರಿಗಳು. ಮಂಗಳೂರಿನಿಂದ ಗೋವಾ ಮೂಲಕ ಮುಂಬೈಗೆ ಹೋಗುವ ಮಾರ್ಗದಲ್ಲಿ ನಡೆಯುವ ಕಥೆ ಇದು. ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಆಗಿ ಕಾಣಿಸಿಕೊಂಡರೆ, ಶೃತಿ ಹರಿಹರನ್ ಅವರದು ಪಯಣಿಗರ ಪಾತ್ರ. ರಾಜೇಶ್ ನಟರಂಗ ಅವರ ಪಾತ್ರ ಏನು ಎಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಒಟ್ಟಿನಲ್ಲಿ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಬಿಡುಗಡೆ ಹಂತಕ್ಕೆ ಹತ್ತಿರವಾಗುತ್ತಿದೆ.
ಮಂತ್ರಾಲಯ ಗುರುಸಾರ್ವಭೌಮರ ಪರಮಭಕ್ತರಾದ ನಿರ್ಮಾಪಕ ಟಿ.ಆರ್.ಮಂಜುನಾಥ್ ರಾಯರ ಸನ್ನಿಧಿಯಲ್ಲೇ ಈ ಚಿತ್ರ ಆರಂಭ ಮಾಡಿದ್ದರು. ಈಗ ಅಂದುಕೊಂಡ ಹಾಗೆ ಚಿತ್ರ ಪೂರ್ಣವಾಗಿರುವುದು ರಾಯರ ಕರುಣೆಯಿಂದಲೆ ಎನ್ನುತ್ತಾರೆ ನಿರ್ಮಾಪಕ ಹಾಗೂ ನಿರ್ದೇಶಕ ಟಿ.ಆರ್.ಮಂಜುನಾಥ್. ನಿರ್ದೇಶಕರೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುನೀತ್ ಹಲಗೇರಿ ಅವರ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ. “ONE HIGHWAY MANY SECRETS” ಎಂಬ ಅಡಿಬರಹ “NH 66” ಚಿತ್ರಕ್ಕಿದೆ.






