• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

“MR” ಜಾಕ್ ಟೀಸರ್‌ ಬಂತು

ಇದು ಫಸ್ಟ್ Rank ರಾಜು" ಖ್ಯಾತಿಯ ಗುರುನಂದನ್ ಚಿತ್ರ: ಅಕ್ಟೋಬರ್‌ಗೆ ಬಿಡುಗಡೆ

ಪ್ರತಿಧ್ವನಿ by ಪ್ರತಿಧ್ವನಿ
September 1, 2026
in ಕರ್ನಾಟಕ, ಸಿನಿಮಾ
0
“MR” ಜಾಕ್ ಟೀಸರ್‌ ಬಂತು
Share on WhatsAppShare on FacebookShare on Telegram

“ಫಸ್ಟ್ rank ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “MR. ಜಾಕ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಗೌಡ ನಿರ್ದೇಶನದ ಈ ಚಿತ್ರವನ್ನು ಮಂಡಿಮನೆ ಟಾಕೀಸ್ ಬ್ಯಾನರ್‌ನಲ್ಲಿ ಗುರುನಂದನ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ನಿರ್ಮಿಸಿದ್ದಾರೆ.

ADVERTISEMENT

“MR ಜಾಕ್” ನಮ್ಮ ಸುತ್ತಮುತ್ತಲಿನಲ್ಲೇ ನಡೆಯುವ ಕಥೆ‌. ಈ ಚಿತ್ರದಲ್ಲಿ ಹಾಸ್ಯವೇ ಪ್ರಧಾನ. ಎಮೋಷನ್ ಸಹ ಇದೆ. ಅಷ್ಟೇ ಅಲ್ಲ ಈಗಿನ ಜನರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಗುರುನಂದನ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ತೇಜಸ್ವಿನಿ ಪೂಣಚ್ಛ. ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಶಿವಸೇನ ಛಾಯಾಗ್ರಾಹಕರಾಗಿ, ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶಕರಾಗಿ ಹಾಗೂ ವಿಜಯ್ ರಾಜ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣವಾಗಿದ್ದು, ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಇಂದು ಟೀಸರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಅನಾವರಣವಾಗಲಿದೆ ಎಂದು ನಿರ್ದೇಶಕ ಸುಮಂತ್ ಗೌಡ ತಿಳಿಸಿದ್ದಾರೆ.

ನಿರ್ದೇಶಕರು ಬಂದು ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಈ ಕಥೆಯನ್ನು ಮೂರುನಾಲ್ಕು ಜನ ನಿರ್ಮಪಕರಿಗೂ ಹೇಳಲಾಯಿತು. ಅವರು ಒಪ್ಪಿ ಆರಂಭವಾಗುವುದು ತಡವಾಗಬಹುದು ಎಂದೆನಿಸಿ, ನಾನೇ ಮಂಡಿಮನೆ ಟಾಕೀಸ್ ಎಂಬ ಸಂಸ್ಥೆಯ ಮೂಲಕ ನಿರ್ಮಾಣಕ್ಕೆ ಮುಂದಾದೆ. ಕೆಲವು ಸ್ನೇಹಿತರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ‌

“MR ಜಾಕ್” ಅಲಿಯಾಸ್ ಜಾನಕಿರಾಮ ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು. ಇದೊಂದು ಪರಿಶುದ್ಧ ಹಾಸ್ಯಮಯ ಮನೋರಂಜನೆಯ ಚಿತ್ರ. ಮದುವೆ ಆದ ನಂತರ ಕೆಲವರ ಜೀವನ ಸುಖವಾಗಿರುತ್ತದೆ. ಕೆಲವರ ಜೀವನ ಸುಖಕರವಾಗಿರದೆ ವಿಚ್ಚೇದನದ ತನಕ ಹೋಗುತ್ತದೆ ಇದೇ ಕಥೆಯ ಪ್ರಮುಖ ಅಂಶ. ಟೀಸರ್ ಬಿಡುಗಡೆ ಮಾಡುವ ಮೂಲಕ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಟ್ರೈಲರ್ ನಲ್ಲಿ ಚಿತ್ರದ ಕುರಿತು ಇನ್ನಷ್ಟು ತಿಳಿಸುತ್ತೇವೆ. ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಾಯಕ ಗುರುನಂದನ್.

ಈ ಚಿತ್ರದಲ್ಲಿ ನನ್ನ ಪಾತ್ರದ ಹಸರು ನಂದಿನಿ. ಮುಗ್ದ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ತೇಜಸ್ವಿನಿ ಪೂಣಚ್ಛ ಹೇಳಿದರು.

ಚಿತ್ರದಲ್ಲಿ ನಟಸಿರುವ ಮಿತ್ರ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ, ಅನಂತ ಪದ್ಮನಾಭ, ಛಾಯಾಗ್ರಾಹಕ ಶಿವಸೇನ, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಸಂಕಲನಕಾರ ವಿಜಯ್ ರಾಜ್ ಹಾಗೂ ನೃತ್ಯ ನಿರ್ದೇಶಕ ಅಭಿಷೇಕ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಹ ನಿರ್ಮಾಪಕರಾದ ಸಂತೋಷ್, ಮಹೇಶ್ ಹಾಗೂ ಸುಜಿತ್ ಇದ್ದರು.

Previous Post

ಜಾತಿ ದೌರ್ಜನ್ಯ ಅಸ್ಪೃಶ್ಯತೆ ಮತ್ತು ರಾಜಕೀಯ

Next Post

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

Related Posts

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!
ಕರ್ನಾಟಕ

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

by ಪ್ರತಿಧ್ವನಿ
September 1, 2026
0

ಹೊಸ ನಿರ್ದೇಶಕ ಶಿವಚಿರಂತನ ಅವರು ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರ, ಶಬ್ದ...

Read moreDetails
ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

September 1, 2026
ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

September 1, 2026
ಶಿವಣ್ಣನ ‘ಕೂರ್ಮಾವತಾರ’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್:ಸಿನಿಮಾ ಬಗ್ಗೆ ಹೆಚ್ಚಿದ ನಿರೀಕ್ಷೆ

ಶಿವಣ್ಣನ ‘ಕೂರ್ಮಾವತಾರ’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್:ಸಿನಿಮಾ ಬಗ್ಗೆ ಹೆಚ್ಚಿದ ನಿರೀಕ್ಷೆ

September 1, 2026
ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

August 31, 2026
Next Post
ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

ರಾಜೇಶ್ ನಟರಂಗ ಹೊಸ ಅವತಾರ! "NH 66" ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada