ಬೆಂಗಳೂರು : ರಾಜ್ಯದ ಇಂಧನ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲಾ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಮೀಟರ್ ರೀಡರ್, ಲೈನ್ ಮ್ಯಾನ್‌ಗಳು ಕರ್ತವ್ಯದ ಸಮಯದಲ್ಲಿ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳು ಮೂಡುತ್ತಿದ್ದವು. ಹೀಗಾಗಿ ಕಡ್ಡಾಯವಾಗಿ ಸಮವಸ್ತ್ರ ಮತ್ತು ಸರ್ಕಾರದ ಗುರುತಿನ ಚೀಟಿಯನ್ನು ಧರಿಸುವಂತೆ ಹಾಗೂ ನಕಲಿ ಸಿಬ್ಬಂದಿಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರ ಇಂಧನ ಸಚಿವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸರ್ಕಾರದಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ.

ಇತ್ತಿಚ್ಚೆಗೆ ಹುಬ್ಬಳ್ಳಿಯ ಆನಂದನಗರದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಸಮವಸ್ತ್ರ ಧರಿಸಿ ಇಂಧನ ಇಲಾಖೆಯ ಬಿಲ್ ಕಲೆಕ್ಟರ್ ಎಂದು ಸಾರ್ವಜನಿಕರ ಮನೆಗಳಿಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದ. ಆ ವ್ಯಕ್ತಿಯನ್ನು ಸಾರ್ವಜನಿಕರು ಪತ್ತೆಹಚ್ಚಿ ಪೊಲೀಸ್‌ರ ವಶಕ್ಕೆ ನೀಡಿದ ಘಟನೆಯೊಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಪತ್ರಿಕೆಯಲ್ಲಿ ವರದಿಯಾಗಿತ್ತು.
ಈ ಕಾರಣಕ್ಕಾಗಿ ರಾಜ್ಯದ ಇಂಧನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆಳಸಿಬ್ಬಂದಿ ಮೀಟರ್ ರೀಡರ್, ಬಿಲ್ ಕಲೆಕ್ಟರ್, ಲೈನ್ ಮ್ಯಾನ್‌ಗಳನ್ನೂ ಕಂಡು ಭಯಭೀತರಾದ ಜನ ಅಧಿಕೃತ ಸಿಬ್ಬಂದಿಗಳನ್ನು ಕಂಡರು ಅನುಮಾನ ಪಡುವಸ್ಥಿತಿ ಎದುರಾಗಿದೆ. ಇದನ್ನು ದೂರವಾಗಿಸಲು ಇಂಧನ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂಗಳಲ್ಲಿ ಸೇರಿದಂತೆ ಎಲ್ಲಾ ನಿಗಮ/ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಶಿಸ್ತು ಪಾಲಿಸಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದರು.
ಇದನ್ನೂ ಓದಿ : ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಬೆಂಬಲ : ಮೋದಿ ಹೇಳಿಕೆಯಿಂದ ಹೊಸ ರಾಜತಾಂತ್ರಿಕ ಸಂದೇಶ
ಅಲ್ಲದೆ ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಗ್ರಾಹಕರ/ಸಾರ್ವಜನಿಕರ ಮನೆಗೆ ಕಾರ್ಯನಿಮಿತ್ಯ ತೆರಳುವಾಗ ಶುಭ್ರವಾಗಿ ತಲೆ ಕೂದಲು ಮತ್ತು ಗಡ್ಡಗಳನ್ನು ಚೊಕ್ಕವಾಗಿ ಮಾಡಿಸಿಕೊಂಡು ಇಲಾಖೆಯ ಸಮವಸ್ತ್ರಗಳನ್ನು ಹಾಗೂ ಇಲಾಖೆ ನೀಡಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಅಲ್ಲದೆ ನಕಲಿ ಬಿಲ್ ಕಲೆಕ್ಟರ್,ಮೀಟರ್ ರೀಡರ್, ಲೈನ್ ಮ್ಯಾನ್ ಗಳ ಹಾವಳಿಯಿಂದ ಬೇಸತ್ತು ಭಯಬೀತರಾದ ಸಾರ್ವಜನಿಕರಿಗೆ/ಗ್ರಾಹಕರ ಆತಂಕ ದೂರವಾಗಿಸಬೇಕು ಎಂದು ಮನವಿ ಮಾಡಿದ್ದರು.
ಈ ಆಂತಕದಿಂದ ಸಾರ್ವಜನಿಕರನ್ನು ಹೊರತರಲು ಆಯಾ ನಿಗಮದ ಪ್ರತಿ ಕಛೇರಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಎಫ್ ಎಂ, ರೇಡಿಯೋ, ಸ್ಥಳೀಯ ಹಾಗೂ ಇತರೆ ಟಿವಿ ಮಾಧ್ಯಮಗಳಲ್ಲಿ, ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಿ ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಿದೆ. ಇದಕ್ಕಾಗಿ ಎಲ್ಲಾ ನಿಗಮ/ಸಂಸ್ಥೆಗಳಿಗೆ ಸೂಕ್ತ ಆದೇಶ ನೀಡುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಇಂಧನ ಸಚಿವರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ!






