ಹೆಚ್ಚು ಜನಕ್ಕೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀಯನ್ನು ಕುಡಿಯುವಂತಹ ಅಭ್ಯಾಸವಿರುತ್ತದೆ. ಇನ್ನು ಕೆಲವರು ಕಾಫಿ ಟೀ ಜೊತೆಗೆ ಬಿಸ್ಕೆಟ್ ಅನ್ನು ಕೂಡ ಸೇವಿಸ್ತಾರೆ ತಾವು ಮಾಡುವುದಲ್ಲದೆ ಮಕ್ಕಳಿಗೂ ಕೂಡ ಇದೇ ಅಭ್ಯಾಸವನ್ನು ಮಾಡಿಸುತ್ತಾರೆ. ಇನ್ನು ಬೆಳಿಗ್ಗೆ ಎದ್ದಾಗ ಕಾಫಿ ಟೀ ಜೊತೆಗೆ ಬಿಸ್ಕೆಟ್ ಅನ್ನು ಸೇವಿಸುವುದು ಆರೋಗ್ಯಕ್ಕೆ ಪೋಸಿಟಿವ್ ಹಾಗೂ ನೆಗೆಟಿವ್ ಎರಡು ಎಫೆಕ್ಟ್ ಕೂಡ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಪಾಸಿಟಿವ್ ಪರಿಣಾಮಗಳು
ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ
ಕಾಫಿ ಜೊತೆಗೆ ಬಿಸ್ಕೆಟ್ ನ ಸೇವಿಸುವುದರಿಂದ ಆರೋಗ್ಯಕ್ಕೆ ಎನರ್ಜಿಯನ್ನು ಹೆಚ್ಚುಮಾಡುತ್ತದೆ. ಹಾಗೂ ಇಡೀ ರಾತ್ರಿ ಕಾಲಿ ಹೊಟ್ಟೆಯಲ್ಲಿ ಇರುವುದರಿಂದ ನಿಮಗೆ ಸ್ಟ್ರೆಂತ್ ನೀಡುತ್ತದೆ.
ಬಿಸಿ ಇರುವಾಗ ಬೆಳಗಿನ ತಿಂಡಿ ಅನ್ನ ತಿನ್ನಲು ಸಾಧ್ಯವಾಗದೇ ಇರುವಾಗ ಬಿಸ್ಕೆಟ್ ಹಾಗೂ ಕಾಫಿಯನ್ನು ಸೇವಿಸುವುದರಿಂದ ಹೊಟ್ಟೆ ತುಂಬುತ್ತದೆ.

ನೆಗೆಟಿವ್ ಪರಿಣಾಮಗಳು
ಕ್ಯಾಲೊರಿ ಹೆಚ್ಚಿರುತ್ತದೆ
ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಿದ ಬಿಸ್ಕೆಟ್ ನಲ್ಲಿ ಕ್ಯಾಲೊರಿ ಹೆಚ್ಚಿರುತ್ತದೆ .ಹಾಗೂ ಅವುಗಳನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಬೊಜ್ಜಿಗೂ ಕಾರಣವಾಗಬಹುದು.
ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್
ಬಿಸ್ಕೆಟ್ ನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ ಮತ್ತು ಇವು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ, ಹಾಗಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ..ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಹೆಚ್ಚು ಮಾಡುತ್ತದೆ.






