ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇರುವ ಸ್ಥಳ ರಹಸ್ಯವಾಗಿದ್ದು ಈ ಕುರಿತು ಹಲವಾರು ಪತ್ರಿಕೆಗಳು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ದಾವೂದ್ ಹಡಗಿರುವ ಬಗ್ಗೆ ವರದಿ ಮಾಡಿದೆ. ದಾವೂದ್ ಪಾಕಿಸ್ತಾನದಲ್ಲಿದ್ದಾನೆ ಎಂದು ಆತನ ಸಹೋದರನೇ ಎನ್ಐಎಗೆ ಮಾಹಿತಿ ನೀಡಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ರನ್ನು ಜೂನ್ 2021 ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು, ಈಗ ಅವರು, ದಾವೂದ್, ಚೋಟಾ ಶಕೀಲ್ ಮತ್ತು ಅನೀಸ್ ಇಬ್ರಾಮಿ ಮೂವರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಾಂಬೆ ಬಾಂಬ್ ಸ್ಫೋಟದ ಆರೋಪಿ ಜಾವೇದ್ ಚಿಕ್ನಾ ಬಗ್ಗೆಯೂ ಇಕ್ಬಾಲ್ ಪ್ರಮುಖ ವಿಷಯದ ಬಗ್ಗೆ ಬಹಿರಂಗಪಡಿಸಿದ್ದಾರೆ. ಜಾವೇದ್ ಅವರು ಪಾಕಿಸ್ತಾನದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದು, ಅದಕ್ಕಾಗಿ ಜೈಲು ಸೇರಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ತಿಳಿಸಿದ್ದಾರೆ.
ದಾವೂದ್ ಸೋದರಳಿಯ ಅಲಿಶಾ ಪಾರ್ಕರ್ ಕೂಡ ಮೇ 23 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದು, ಆತನು ಕೂಡ ದಾವೂದ್ ಇರುವಿಕೆಯನ್ನು ಬಿಚ್ಚಿಟ್ಟಿದ್ದ. ದಾವೂದ್ ಕರಾಚಿಯಲ್ಲಿದ್ದಾನೆ ಎಂದು ಇಡಿಗೆ ತಿಳಿಸಿದ್ದಾರೆ. ಹಬ್ಬ ಹರಿದಿನಗಳಲ್ಲಿ ದಾವೂದ್‌ನ ಪತ್ನಿ ಮೆಹಜಾಬಿನ್ ಇಬ್ರಾಹಿಂ ತನ್ನ ಕುಟುಂಬದೊಂದಿಗೆ ಫೋನ್‌ನಲ್ಲಿ ಸಂಪರ್ಕ ಹೊಂದಿದ್ದಳು ಎಂದು ಅಲಿಶಾ ಇಡಿ ಮುಂದೆ ಬಹಿರಂಗಪಡಿಸಿದ್ದಾರೆ.

ಕಳೆದ ತಿಂಗಳು, ಆಗಸ್ಟ್ 4 ರಂದು, ಎನ್ಐಎ ಚೋಟಾ ಶಕೀಲ್ನ ನಿಕಟ ಸಹಚರ ಇಕ್ಬಾಲ್ ಖುರೇಷಿಯನ್ನು ಬಂಧಿಸಿತು.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಇತರ ನಟೋರಿಯಸ್ ಉಗ್ರರು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್, ಅಲ್ ಖೈದಾ ಜೊತೆ ಕೈಜೋಡಿಸುವ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು NIA ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ದಾವೂದ್ ಇಬ್ರಾಹಿಂ 1993ರಲ್ಲಿ ವಾಣಿಜ್ಯ ನಗರಿ ಮುಂಬೈನ ವಿವಿಧೆಡೆ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿದ್ದಾನೆ. ಅಂದು ಸಂಭವಿಸಿದ್ದ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆ ಬಳಿಕ ದಾವೂದ್ ಇಬ್ರಾಹಿಂನನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿತ್ತು.






