ಗುರುವಾರ ದೆಹಲಿ ವಿಧಾನಸಬೆಯಲ್ಲಿ ನಡೆದ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಗೆದ್ದು ಬದ್ದ ವೈರಿ ಬಿಜೆಪಿಗೆ ತಮ್ಮ ಒಗ್ಟ್ಟನ್ನು ಒಡೆಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಕಾರಣದ ಪರ್ಯಾಯ ನಾಯಕ ಎಂಬ ಸಂದೇಶವನ್ನ ರವಾನಿಸಿದ್ದಾರೆ.
ಇತ್ತ ವಿಶ್ವಾಸಮತ ಸಾಬೀತು ಪಡಿಸಿದ ನಂತರ ಮಾತನಾಡಿದ ಕೇಜ್ರಿವಾಲ್ ನಮ್ಮ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿಯಾದ ನಂತರ ಗುಜರಾತ್ನಲ್ಲಿ ನಮ್ಮ ಮತ ಪ್ರಮಾಣವು ಶೇ4 ರಿಂದ 6ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.
ಒಂದು ವೇಳೆ ಅವರ ಬಂಧನವಾದರೆ ಇದರ ಪ್ರಮಾಣವು 6ಕ್ಕೆ ಏರಿಕೆಯಾಗುತ್ತದೆ. ಯಾಕೆಂದರೆ ಸಿಬಿಐ ಅವರ ಮನೆ, ಗ್ರಾಮ ಹಾಗೂ ಬ್ಯಾಂಕ್ ಲಾಕರ್ಗಳನ್ನು ಪರಿಶೀಲಿಸಿದೆ ಆದರೆ ಏನು ಸಹ ದೊರೆತಿಲ್ಲ. ಕಡೇ ಪಕ್ಷ ಅಧಿಕಾರಿಗಳಿಗಾಗಿ ಖರ್ಚು ಮಾಡಿದ ಹಣವು ಸಹ ಅವರಿಗೆ ದೊರೆತ್ತಿಲ್ಲ. ಆದರು ಸಹ ಸಿಸೋಡಿಯಾರನ್ನು ಬಂಧಿಸುವಂತೆ ಒತ್ತಡವಿದೆ ಎಂದು ಆರೋಪಿಸಿದ್ದಾರೆ.

ಕೇಸರಿ ಪಕ್ಷದ ನಾಯಕರು ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಇಲ್ಲಿನ ಸರ್ಕಾರ ಕೆಡವಲು ಮುಂದಾದರು ಆದರೆ. ನಮ್ಮ ಶಾಸಕರು ಯಾವುದಕ್ಕೂ ಒಪ್ಪದೆ ಅವರ ಆಮಿಷಗಳಿಗೆ ಸೆಡ್ಡು ಹೊಡೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ಭ್ರಷ್ಟ ಪಕ್ಷವಾದ ಬಿಜೆಪಿಯಲ್ಲಿ ವಿದ್ಯಾವಂತರ ಕೊರತೆಯಿದೆ. ಆದರೆ, ನಮ್ಮ ಪಕ್ಷದಲ್ಲಿ ಉತ್ತಮ ಶಿಕ್ಷಣ ಹಾಗೂ ಐಐಟ ಇ ಪದವಿ ಹೊಂದಿರುವವರಿದ್ದಾರೆ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.
ಅವರು ಪ್ರತಿಯೊಬ್ಬ ಶಾಸಕನನ್ನು ಖರೀದಿಸಲು 20-50 ಕೋಟಿ ರೂಪಾಯಿ ಖರ್ಚು ಮಾಡುತ್ತಾ ಇದ್ದಾರೆ. ನಾನು ಶಾಲೆ ಹಾಗೂ ಆಸ್ಪತ್ರೆ ಕಟ್ಟಿಸುವುದರಿಂದ ಎನಾದರು ತಪ್ಪನ್ನು ಮಾಡುತ್ತಾ ಇದ್ದೇನಾ ಎಂದು ಪ್ರಶ್ನಿಸಿದ್ದಾರೆ.






