• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

ಪ್ರತಿಧ್ವನಿ by ಪ್ರತಿಧ್ವನಿ
January 23, 2026
in Top Story, ಕರ್ನಾಟಕ, ರಾಜಕೀಯ
0
ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು
Share on WhatsAppShare on FacebookShare on Telegram

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರನ್ನು ಅಡ್ಡಗಟ್ಟಿ ಬಿ.ಕೆ. ಹರಿಪ್ರಸಾದ್ ನಡೆಸಿದ ವರ್ತನೆ ಪ್ರತಿಯೊಬ್ಬ ಕನ್ನಡಿಗನೂ ತಲೆತಗ್ಗಿಸುವಂತೆ ಮಾಡಿದೆ. ಅಂದು ಕೊತ್ವಾಲ್ ಶಿಷ್ಯನಾಗಿ ಗುರುತಿಸಿಕೊಂಡಿದ್ದ ಹರಿಪ್ರಸಾದ್, ಇಂದು ಪ್ರಜಾಪ್ರಭುತ್ವದ ದೇಗುಲದೊಳಗೆ ಅದೇ ರೌಡಿಸಂ ಪ್ರವೃತ್ತಿಯನ್ನು ಪ್ರದರ್ಶಿಸಿರುವುದು ನಾಚಿಕೆಗೇಡು ಎನ್ನುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ( Janardhan Reddy) ಹೇಳಿಕೆಗೆ ಕಾಂಗ್ರೆಸ್‌ (Congess) ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್( BK Hariprasad) ತಿರುಗೇಟು ನೀಡಿದ್ದಾರೆ.

ADVERTISEMENT
Assembly session: ಭಾಷಣ ಓದದ ರಾಜ್ಯಪಾಲರ ವಿರುದ್ಧ ಸದನದಲ್ಲೇ ಕೈ ಶಾಸಕರ ಆಕ್ರೋಶ #pratidhvani

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿ.ಕೆ. ಹರಿಪ್ರಸಾದ್, ಜೈಲಲ್ಲಿ ತಟ್ಟೆ, ಲೋಟ, ಚಮಚಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿಗೆ ರಾಜಕೀಯ ಜೀವನದಲ್ಲಿ “ಚಮಚಾಗಿರಿ” ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರಿಗೆ ಬಿ.ಕೆ ಹರಿಪ್ರಸಾದ್ ಪ್ರತಿರೋಧ..ಇದು ರಾಜಕೀಯ ಘಟನೆಯಲ್ಲ, ಸಂವಿಧಾನಾತ್ಮಕ ಎಚ್ಚರಿಕೆ!

ತಲೆ ಮೇಲೆ ಕೈ ಇರಿಸಿಕೊಂಡಿದ್ದು ಸಾಲದೆಂಬಂತೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಪಾದ ಪೂಜೆಯ ನೀರು ನೆತ್ತಿಗೇರಿರಬೇಕು. ಅದಕ್ಕೆ ಅಮಿತ್ ಶಾ ತಲೆ ಮೇಲೆ ಕುಟ್ಟಿ ಬಿಜೆಪಿಗೂ ಈ ಜೈಲುವಾಸಿ ರೆಡ್ಡಿಗೂ ಸಂಬಂಧ ಇಲ್ಲ ಅಂತಾ ಬಹಿರಂಗವಾಗಿ ತುಪಕ್ ಅಂತಾ ಉಗ್ದಿದ್ದನ್ನು ಮರೆತಂತಿದೆ. ಒಮ್ಮೆ ಜೀವದ ಗೆಳೆಯ ಅನ್ನೋದು, ಇನ್ನೊಮ್ಮೆ ಶ್ರೀರಾಮುಲು ವಿರುದ್ದವೇ ಮಸಲತ್ತು ಮಾಡುವ ಜನಾರ್ಧನ ರೆಡ್ಡಿಯ ಊಸರವಳ್ಳಿ ಆಟ ರಾಜ್ಯದ ಜನ ಮರೆತಿಲ್ಲ. ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ಹೊರಟ ಜನಾರ್ಧನ ರೆಡ್ಡಿಯ ಮೂರು ಕಾಸಿಗೂ ಕಿಮ್ಮತ್ತಿಲ್ಲದ ತಂತ್ರಗಾರಿಕೆ ಬಗ್ಗೆ ಶ್ರೀರಾಮುಲು ಆಡಿರುವ ಒಂದೊಂದು ಆಣಿಮುತ್ತುಗಳೇ ಸಾಕು ಸಾಧ್ಯವಾದ್ರೆ ಎಣಿಸಿಕೊಳ್ಳಲಿ ಎಂದಿದ್ದಾರೆ.

Siddaramaiah on Governor : ಸಂಪೂರ್ಣ ಭಾಷಣ ಓದದೇ ಹೊರಟ ಗವರ್ನರ್​ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ರೆಡ್ಡಿಗಾರು ನಾನು ವಾರ್ಡ್ ಚುನಾವಣೆ ಗೆದ್ದಿಲ್ಲ ನಿಜಾ ಆದ್ರೆ ಹಿಂಬಾಗಿಲೋ ಮುಂಬಾಗಿಲೋ ನಾನಂತೂ ರಾಜಾರೋಷವಾಗಿ ಬಂದಿದಿನಿ. ಚುನಾವಣೆಯ ಎರಡು ದಿನದ ಹಿಂದಿನ ಕತ್ತಲೆ ರಾತ್ರಿಯ ರಹಸ್ಯವಾಗಿಯಂತೂ ಬಂದಿಲ್ಲ ಬರುವುದೂ ಇಲ್ಲ. ಆದ್ರೆ 224 ವಿಧಾನಸಭಾ ಕ್ಷೇತ್ರದಲ್ಲಿ ಜಾತಿ, ಹಣ, ಇಲ್ಲದೆ ಚುನಾವಣೆ ಎದುರಿಸೋದಕ್ಕೆ ರೆಡಿ. ಧೈರ್ಯ ತಾಕತ್ತು ಇದ್ರೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಕಿಂಚಿತ್ತಾದರೂ ಎದೆಗಾರಿಕೆ ಇದ್ರೆ ಮುಂದೆ ಬರಲಿ.

ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧ ಸುಳ್ಳು ಕೇಸ್ ಹಾಕಿರೋದಕ್ಕೆ ಹೈಕೋರ್ಟ್ ಕ್ಯಾಕರಿಸಿ ಮುಖಕ್ಕೆ ಉಗ್ದಿದ್ದು ಸಾಕಾಗಿಲ್ವಾ. ನ್ಯಾಯಾಧೀಶರನ್ನೇ ಹತ್ತು ಕೋಟಿ ಡೀಲ್ ಮಾಡಿ ಬೇಲ್ ತೆಗೆದುಕೊಂಡ ಹಾಗೇ ಅನ್ಕೊಂಡ್ರಾ? ನಮ್ಮ ನಾಯಕರು ಸುಳ್ಳು ಕೇಸ್ ಹಾಕಿಸಿಕೊಂಡು ಓಡಾಡ್ತಿರಬಹುದು ಆದ್ರೆ ಕೊಲೆ ಕೇಸ್‌ಗಳಲ್ಲಿ ಸುಪ್ರೀಂಕೋರ್ಟ್‌ನಿಂದ ಗಡಿಪಾರಂತೂ ಆಗಿಲ್ಲ. ಅವರಿವರ ಕೈ ಕಾಲು ಹಿಡಿದು ಬಿಜೆಪಿ ಸೇರಿ ನೆಲೆ ಇಲ್ಲದೆ ಬಿಲ ಹುಡುಕಾಡುವ ದಯನೀಯ ಸ್ಥಿತಿ ಜನಾರ್ಧನ ರೆಡ್ಡಿಗೆ ಬಂದಿದ್ರು, ಶೇಷ-ಅವಶೇಷಗಳ ಬಗ್ಗೆ ಮಾತಾಡೋದು ಹಾಸ್ಯಸ್ಪದ. ಇನ್ನೂ ಈಗಾಗಲೇ ಜೈಲು,ಡೀಲು,ಬೇಲುಗಳ ಬಗ್ಗೆ ಮಾತ್ರ ಮಾತಾಡಿದ್ದೆ, ಆದ್ರೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡೋದಕ್ಕೆ ನಾನಂತೂ ರೆಡಿ ಎಂದಿದ್ದಾರೆ.

Assembly session: ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ತಿರಸ್ಕರಿಸುವ ಹಕ್ಕು ರಾಜ್ಯಪಾಲರಿಗೆ ಇಲ್ಲ..!

ಜನಾರ್ದನ್‌ ರೆಡ್ಡಿ ಹೇಳಿದ್ದೇನು..?

ನಿನ್ನೆ ನಡೆದ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸಂಪೂರ್ಣ ಭಾಷಣ ಓದದೇ ಒಂದೇ ಸಾಲು ಭಾಷಣ ಓದಿ ಸದನದಿಂದ ನಿರ್ಗಮಿಸಿದರು. ಈ ವೇಳೆ ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್‌ ರಾಜ್ಯಪಾಲರನ್ನು ಅಡ್ಡಗಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ, ಕರ್ನಾಟಕದಲ್ಲಿರುವುದು ಸಂವಿಧಾನದ ಸರ್ಕಾರವೋ ಅಥವಾ ರೌಡಿಗಳ ದರ್ಬಾರೋ?

ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇಂದೊಂದು ಕರಾಳ ದಿನ. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರನ್ನು ಅಡ್ಡಗಟ್ಟಿ ಬಿ.ಕೆ. ಹರಿಪ್ರಸಾದ್ ನಡೆಸಿದ ವರ್ತನೆ ಪ್ರತಿಯೊಬ್ಬ ಕನ್ನಡಿಗನೂ ತಲೆತಗ್ಗಿಸುವಂತೆ ಮಾಡಿದೆ. ಅಂದು ಕೊತ್ವಾಲ್ ಶಿಷ್ಯನಾಗಿ ಗುರುತಿಸಿಕೊಂಡಿದ್ದ ಹರಿಪ್ರಸಾದ್, ಇಂದು ಪ್ರಜಾಪ್ರಭುತ್ವದ ದೇಗುಲದೊಳಗೆ ಅದೇ ರೌಡಿಸಂ ಪ್ರವೃತ್ತಿಯನ್ನು ಪ್ರದರ್ಶಿಸಿರುವುದು ನಾಚಿಕೆಗೇಡು. ಸಾಂವಿಧಾನಿಕ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿರುವುದು ಈ ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ.

Session: ಅಧ್ಯಕ್ಷರೇ ಬಿಜೆಪಿಯವರ ಕೈಗೆ ಕಬ್ಬಿಣ ಕೊಡಿ ಅಂದ ಪ್ರದೀಪ್ ಈಶ್ವರ್​ಗೆ ಸ್ಪೀಕರ್ ಟಾಂಗ್! #pratidhvani

ತನ್ನ ರಾಜಕೀಯ ಅಜೆಂಡಾವನ್ನು ರಾಜ್ಯಪಾಲರ ಮೇಲೆ ಹೇರಲು ಹೋಗಿ ಮುಖಭಂಗ ಅನುಭವಿಸಿದರೂ ಬುದ್ಧಿ ಕಲಿಯದ ಈ ಸರ್ಕಾರ, ಇಡೀ ರಾಜ್ಯದ ಘನತೆಯನ್ನು ಹರಾಜು ಹಾಕುತ್ತಿದೆ.ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬದಿಗೊತ್ತಿ, ಕೇವಲ ಹಠಮಾರಿ ಧೋರಣೆ ಮತ್ತು ಗೂಂಡಾಗಿರಿಯ ಮೂಲಕ ಆಡಳಿತ ನಡೆಸಲು ಹೊರಟಿರುವ ಈ ಸರ್ಕಾರಕ್ಕೆ ಮತ್ತು ಅಹಂಕಾರಿ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅದೇ ಸಂವಿಧಾನವನ್ನು ಹತ್ತಿಕ್ಕುತ್ತಿರುವ ಈ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದರು.

Tags: BJPBK HariprasadcongressGovernor Thawar Chand GehlotJanardhan reddyKannadakannada newsKarnatakaKarnataka PoliticsPolitics
Previous Post

BREAKING NEWS : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

Next Post

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
Next Post
BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada