• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ನಾಯಕರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಕಾಂಗ್ರೆಸ್‌‌..!

ಪ್ರತಿಧ್ವನಿ by ಪ್ರತಿಧ್ವನಿ
November 11, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಜಸ್ಟೀಸ್ ಮೈಕಲ್‌‌ ಡಿ. ಕುನ್ಹಾ ವಿರುದ್ದ ಬಿಜೆಪಿ ನಾಯಕರು ‌ಟೀಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ ಕಾಂಗ್ರೆಸ್ ನಾಯಕರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣಭೈರೆಗೌಡ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಅನ್ನೋ ವಿಚಾರದ ಬಗ್ಗೆ ಮಾತನಾಡುವಾಗ ಪೊಲಿಟಿಕಲ್‌ ಏಜೆಂಟ್‌‌ ಎಂದಿದ್ದಾರೆ ಎನ್ನುವುದು ಕಾಂಗ್ರೆಸ್‌ ನಾಯಕರ ಆರೋಪ.

ADVERTISEMENT

ರಾಜ್ಯಪಾಲರಿಗೆ ದೂರು ಸಲ್ಲಿಕೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದೇವೆ. ನ್ಯಾಯಾಂಗ ತನಿಖಾ ಆಯೋಗದ‌ ಬಗ್ಗೆ , ಕುನ್ಹಾ ಬಗ್ಗೆ ನಿಂದಿಸಿ ಕೆಟ್ಟದಾಗಿ ಮಾತನಾಡಿದ್ದಾರೆ. ಕುನ್ಹಾ ನ್ಯಾಯಾಧೀಶರಲ್ಲ, ಪೊಲಿಟಿಕಲ್ ಏಜೆಂಟ್ ಅಂದಿದ್ಧಾರೆ. ದುರುದ್ದೇಶದಿಂದ, ಚುನಾವಣಾ ದೃಷ್ಟಿಯಿಂದ ವರದಿ ನೀಡಿದ್ದಾರೆ ಎಂಬುದು ಘೋರ ಅಪರಾಧ. ಅದರಲ್ಲೂ ಜೋಷಿ ಸಾಮಾನ್ಯ ವ್ಯಕ್ತಿಯಲ್ಲ, ಕೇಂದ್ರ ಸಚಿವರು ಎಂದಿದ್ದಾರೆ.

ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು, ಆಯೋಗಗಳ‌ ಬಗ್ಗೆ ವೈಯುಕ್ತಿಕ ಟೀಕೆ ಸರಿಯಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ದ, ಕಾನೂನು ಬಾಹಿರ ಎಂದಿರುವ ದಿನೇಶ್‌ ಗುಂಡೂರಾವ್‌, ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಮೂಡಿಸುವಂತಿಲ್ಲ. ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿ ಆದರೆ ನ್ಯಾಯಾಧೀಶರ ಬಗ್ಗೆ ಟೀಕಿಸಬಾರದು. ಆಗಸ್ಟ್‌ನಲ್ಲಿ ಮಧ್ಯಂತರ ವರದಿ ಕೊಟ್ಟಿದ್ದಾರೆ, ಈಗ ಉಪಚುನಾವಣೆ ನಡೆಯುತ್ತಿದೆ. ಅದಕ್ಕೂ ಚುನಾವಣೆಗೂ ಏನ್ ಸಂಬಂಧ..? ಎಂದು ಪ್ರಶ್ನಿಸಿದ್ದಾರೆ.

ನ್ಯಾ. ಕುನ್ನಾ ನಿಂದನೆ, ಗೌರವಕ್ಕೆ ಚ್ಯುತಿ ಬರುವ ಹೇಳಿಕೆ ನೀಡುವುದು ಒತ್ತಡ ಹೇರುವ ಕೆಲಸ‌.ಆಯೋಗಕ್ಕೆ ಭಯ ಹುಟ್ಟಿಸುವ ಕೆಲಸ ಇದು.ತನಿಖಾ ಹಂತದಲ್ಲಿ ಯಾರೂ ಈ ರೀತಿ ಮಾತನಾಡಬಾರದು. ರಾಜ್ಯಪಾಲರಿಗೆ ಇವೆಲ್ಲ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದ್ದೇವೆ.ನ್ಯಾಯಾಧೀಶರ ಮಾನಹರಣ ಮಾಡಿದ ಜೋಷಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಮೂಲಕ ಒಂದು ಸಂದೇಶ ಕೊಡಬೇಕು.

ಹೀಗೆ ಆದರೆ ಯಾವ ಸ್ವಾಯತ್ತ ಸಂಸ್ಥೆಗಳು ಉಳಿಯಲ್ಲ. ಉನ್ನತ ಸ್ಥಾನದಲ್ಲಿರುವ ನಾವು, ಇಂತಹ ಸಂಸ್ಥೆಗಳ, ಆಯೋಗಗಳ ಗೌರವ ಕಾಪಾಡಬೇಕು. ರಾಷ್ಟಪತಿಗಳ ಗಮನಕ್ಕೂ ಇದನ್ನ ತರಬೇಕು. ಕೇಂದ್ರ ಸರ್ಕಾರ ನಮ್ಮದೇ ಇದೆ ಅಂತ ಏನ್ ಬೇಕಾದ್ರು ಮಾಡಬಹುದು ಅಂದುಕೊಂಡಿದ್ದಾರೆ.ಕೂಡಲೇ ಕ್ಷಮೆಯಾಚಿಸಿ ಮುಂದೆ ಆ ರೀತಿ ಹೇಳಲ್ಲ ಅಂತ ಕ್ಷಮೆ ಯಾಚಿಸಬೇಕು ಅಂತಾ ಒತ್ತಾಯಿಸಿದ್ದಾರೆ.

Tags: against BJP leaders..!BJPCongress complained to GovernorCongress leaders allegedCongress PartyGovernor
Previous Post

ಪತಿಯ ಪರ ಮತ ಕೇಳಿದ ರೇವತಿ ನಿಖಿಲ್ ಕುಮಾರಸ್ವಾಮಿ!!

Next Post

ಚನ್ನಪಟ್ಟಣದಲ್ಲಿ ನನ್ನ ಅಣ್ಣನ ಮಗ ನಿಖಿಲ್ ಅವರನ್ನು ಗೆಲ್ಲಿಸಿ ಎಂದು ನಟಿ ತಾರಾ ಮನವಿ

Related Posts

ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!
Top Story

ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

by ಪ್ರತಿಧ್ವನಿ
May 17, 2026
0

ಬೆಳಗಾವಿ : ಬೇಸಿಗೆಯ ಹೊಡೆತಕ್ಕೆ ಉತ್ತರ ಕರ್ನಾಟಕದ ಹಲವು ನಲುಗಿ ಹೋಗಿವೆ. ಕಂಡದಂತ ಬಿಸಿಲಿಗೆ ಜನ - ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅಲ್ಲದೆ ನೀರಿನ ಅಭಾವವು ಹೆಚ್ಚಾಗಿದ್ದು,...

Read moreDetails
ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

May 17, 2026
“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

May 16, 2026
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
Next Post

ಚನ್ನಪಟ್ಟಣದಲ್ಲಿ ನನ್ನ ಅಣ್ಣನ ಮಗ ನಿಖಿಲ್ ಅವರನ್ನು ಗೆಲ್ಲಿಸಿ ಎಂದು ನಟಿ ತಾರಾ ಮನವಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada