ಸಭೆಯ ವೇದಿಕೆ ಮೇಲೆ ದೇವೇಗೌಡರು,ಯಡಿಯೂರಪ್ಪನವರು, ಕುಮಾರಸ್ವಾಮಿ ಅವರು ಆಸೀನರಾಗಿದ್ದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಭಾಷಣ ಮುಗಿಸುವ ಹೊತ್ತಿಗೆ ಶಾಸಕಿ ಕರೆಮ್ಮ ನಾಯಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ ಅವರಿಬ್ಬರೂ ಸಾರ್ವಜನಿಕ ಸಾಲಿನಲ್ಲಿ ಕೂತಿದ್ದ ರೇವತಿ ಅವರನ್ನು ವೇದಿಕೆಗೆ ಕರೆತಂದರು.
ಸಂಕೋಚದಿಂದಲೇ ವೇದಿಕೆಗೆ ಬಂದ ರೇವತಿ ಅವರು, ದೇವೇಗೌಡರು,ಯಡಿಯೂರಪ್ಪನವರು, ಕುಮಾರಸ್ವಾಮಿ ಅವರ ಪಾದಕ್ಕೆ ನಮಸ್ಕರಿಸಿ, ” ಎರಡು ಬಾರಿ ಸೋತಿದ್ದಾರೆ, ದಯಮಾಡಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡಿ ಗೆಲ್ಲಿಸಿಕೊಡಿ ” ಎಂದಷ್ಟೇ ಮನವಿ ಮಾಡಿ ನಿರ್ಗಮಿಸಿದರು..