ಪೈಪ್ ಮೂಲಕ ಪೂರೈಸಲಾಗುವ ಅಡುಗೆ ಅನಿಲ ಹಾಗೂ ಸಿಎನ್ ಜಿ ದರವನ್ನು ಕೇಂದ್ರ ಸರಕಾರ 3 ರೂ. ಏರಿಸಿದೆ.
ಪ್ರಾಕೃತಿಕ ಇಂಧನಗಳ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೈಪ್ ಮೂಲಕ ಪೂರೈಕೆಯಾಗುವ ಅಡುಗೆ ಅನಿಲ ಹಾಗೂ ಸಿಎನ್ ಜಿ ದರ ಕೆಜಿಗೆ 3 ರೂ. ಏರಿಸಲಾಗಿದೆ.
ಸಿಎನ್ ಜಿ ದರ ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿ ಏರಿಕೆ ಮಾಡಲಾಗಿದ್ದರೆ, ಅಡುಗೆ ಅನಿಲ ದರ 2021 ಆಗಸ್ಟ್ ನಂತರ 10ನೇ ಬಾರಿ ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಸಿಎನ್ ಜಿ ದರ ಕೆಜಿಗೆ 75.61ರೂ.ನಿಂದ 78.61 ರೂ.ಗೆ ಏರಿಕೆಯಾದರೆ, ಪೈಪ್ ಮೂಲಕ ಪೂರೈಕೆಯಾಗುವ ಅಡುಗೆ ಅನಿಲ ದರ ಕೆಜಿಗೆ 50.59ರೂ.ನಿಂದ 53.59ರೂ.ಗೆ ಏರಿಕೆಯಾಗಿದೆ.






