ನಟ ಚೇತನ್ ಸರಣಿ ಪ್ರಶ್ನೆಗಳ ಮೂಲಕ ಮತ್ತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿನ ಕುಸ್ತಿ ಪಟುಗಳ ಪ್ರತಿಭಟನೆ ಬಗ್ಗೆ ಸರ್ಕಾರಗಳು ಯಾಕೆ ಮೌನವಾಗಿವೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಕುಸ್ತಿಯು ನಮ್ಮ ದೇಶದ ಅತ್ಯಂತ ಯಶಸ್ವಿ ಒಲಿಂಪಿಕ್ ಕ್ರೀಡೆಯಾಗಿದೆ. ತಮ್ಮ ನ್ಯಾಯಕ್ಕಾಗಿ ನಮ್ಮ ಕುಸ್ತಿಪಟುಗಳ ಅಹಿಂಸಾತ್ಮಕ ಹೋರಾಟ ಮತ್ತು ಹೊಸ ಸಂಸತ್ತಿನ ಇತ್ತೀಚಿನ ಪ್ರತಿಭಟನೆಯ ಕಾರಣ, ರಾಷ್ಟ್ರ- ಪ್ರಾಯೋಜಿತ ಆಕ್ರಮಣ ಮತ್ತು ಎಫ್‌ಐಆರ್‌ಗಳನ್ನು ಅವರು ಎದುರಿಸಬೇಕಾಯಿತು ಎಂಬುದು ದುಃಖಕರವಾಗಿದೆ.

ಶಕ್ತಿಶಾಲಿಗಳನ್ನು ರಕ್ಷಿಸಲು ಮತ್ತು ದುರ್ಬಲರನ್ನು ಬಲಿಪಶು ಮಾಡಲು ನಮ್ಮ ವ್ಯವಸ್ಥೆಯು ಯಾವುದೇ ಹಂತಕ್ಕೆ ಹೋಗುತ್ತದೆ/ಹೋಗಬಹುದು ಎಂಬುದಕ್ಕೆ ಇದೇ ಉದಾಹರಣೆ ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.