ನವದೆಹಲಿ : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಪಟುಗಳ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಬೆಂಬಲ ವ್ಯಕ್ತಪಡಿಸಿದ್ದಾರೆ.



ಮೇ.28ರಂದು ನಮ್ಮ ಕುಸ್ತಿಪಟುಗಳ ಮೇಲೆ ನಡೆದಿರುವ ಹಲ್ಲೆಯ ವಿಚಾರ ಕೇಳಿ ಬೇಸರವಾಯಿತು. ಸರಿಯಾದ ಮಾತುಕತೆಯ ಮೂಲಕ ಇದನ್ನ ಬಗೆಹರಿಸುವ ವಿಶ್ವಾಸ ಇದೆ. ಇದು ಆದಷ್ಟು ಬೇಗನೇ ಪರಿಹಾರವಾಗಬೇಕೆಂಬ ನಿರೀಕ್ಷೆಯಲ್ಲಿರುವೆ ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.ಮಹಿಳಾ ಕುಸ್ತಿಪಟುಗಳು ತಾವು ಗಳಿಸಿರುವ ಎಲ್ಲಾ ಪದಕಗಳನ್ನ ಗಂಗಾನದಿಗೆ ಎಸೆಯುವುದಾಗಿ ಇದೇ ವೇಳೆ ಘೋಷಿಸಿದ್ದರು.