ಬೆಂಗಳೂರು : ಬೆಳಂಬೆಳಿಗ್ಗೆ ಪಶ್ಚಿಮ ಬಂಗಾಳ ಮೂಲದ ದಂಪತಿಗಳ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಗರದ ಹೃದಯ ಭಾಗವಾಗಿರುವ ಎಲೆಕ್ಟ್ರಾನಿಕ್ ಸಿಟಿಯ ಸಮೀಪದ ಬೆಟ್ಟದಾಸನಪುರದಲ್ಲಿ ರೋಡ್ ರೇಜ್ ನಡೆಸುತ್ತಿರುವುದನ್ನು ಪ್ರಶ್ನಿಸಿ ಬುದ್ಧಿವಾದ ಹೇಳಿದ ದಂಪತಿಗೆ ಮನಬಂದಂತೆ ಪುಂಡರು ಥಳಿಸಿದ್ದಾರೆ.

ವೀಲಿಂಂಗ್ ಮಾಡಿಕೊಂಡು ಬರುತ್ತಿದ್ದ ಪುಂಡರಿಗೆ ನಿಧಾನವಾಗಿ ತೆರಳುವಂತೆ ದಂಪತಿ ತಿಳಿ ಹೇಳಿದ್ದಾರೆ. ರಸ್ತೆಯಲ್ಲಿ ವೀಲೀಂಗ್ ಮಾಡಿಕೊಂಡು ಬರುತ್ತಿದ್ದ ಪುಂಡರ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಸೌಮ್ಯದೀಪ್ ಸೇನ್, ವೈದ್ರೀಂಲಾ ಪ್ರಧಾನ್ ದಂಪತಿಗ ಟಾಟಾ ಅಲ್ಟ್ರೋಜ್ ಕಾರಿನ ಗಾಜನ್ನು ಪುಂಡರು ಪುಡಿ ಪುಡಿ ಮಾಡಿದ್ದಾರೆ. ಪುಂಡರು ದಂಪತಿ ಮೇಲೆ ಭೀಕರ ಹಲ್ಲೆ ಮಾಡಿರುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಹಲ್ಲೆಗೊಳಗಾದ ದಂಪತಿಗೆ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ: ಇರಾನ್ ಸ್ಪಷ್ಟನೆ
ವ್ಹಿಲೀಂಗ್ ಮಾಡುವ ಪುಂಡರಿಗೆ ಕಾನೂನಿನ ಯಾವುದೇ ಭಯವಿಲ್ಲದ ಕಾರಣಕ್ಕೆ ಈ ರೀತಿಯಾದ ಅಪರಾಧಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಪ್ರಶ್ನಿಸಿದ ಸಾರ್ವಜನಿಕರ ಮೇಲೆಯೇ ಪುಂಡರು ಹಲ್ಲೆ ಮಾಡುತ್ತಾರೆಂದರೆ ಇವರಿಗೆ ಯಾರದೇ ಭಯವೂ ಇಲ್ಲದಂತಾಗಿದೆ ಎನ್ನುವ ಎಲ್ಲರ ಮಾತಾಗಿದೆ. ಇನ್ನಾದರೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತು ಈ ಪುಂಡರಿಗೆ ಕಾನೂನು ಕುಣಿಕೆ ತೊಡಿಸಬೇಕಿದೆ.






