ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹಣಾಹಣಿಯಲ್ಲಿ ಪಾಕಿಸ್ತಾನ ಹತ್ತು ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಸಂಘಟಿತ ಪ್ರದರ್ಶನ ನೀಡಿದ ತಂಡವು ಭಾರತವನ್ನು ಅಂತರದಲ್ಲಿ ಮಣಿಸಿದೆ. ಇದರೊಂದಿಗೆ...
Read moreDetailsಒಂದೆಡೆ ಕೋವಿಡ್ ಭೀತಿ, ಇತ್ತ ಆನ್ ಲೈನ್ ಕ್ಲಾಸ್, ಮನೆಯಲ್ಲಿ ಆಟವಾಡದಂತೆ ನಿರ್ಭಂಧ, ಮತ್ತೊಂದೆಡೆ ಮೂರನೇ ಅಲೆ ಭಯ… ಇದರಿಂದ ಬೇಸತ್ತು ಮೈಜಿಡ್ಡುಗಂಟಿದಾಗಿತ್ತು ವಿದ್ಯಾರ್ಥಿಗಳಲ್ಲಿ. ಶಿಕ್ಷಕರನ್ನು ಕಾಡಿ...
Read moreDetailsನೀರಜ್ ಚೋಪ್ರಾ ಅವರ ಐತಿಹಾಸಿಕ ಚಿನ್ನದ ಪದಕದೊಂದಿಗೆ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿರುವ ಈ ಬಾರಿಯ ಒಲಿಂಪಿಕ್ಸ್ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರುವತ್ತ ಗಮನ ಹರಿಸಲು ದಾರಿ ಮಾಡಿಕೊಟ್ಟಿದೆ. ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಭಾರತ ತನ್ನ ಸರ್ವಶ್ರೇಷ್ಟ ಪ್ರದರ್ಶನವನ್ನು ನೀಡಿದೆ. ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕದೊಂದಿಗೆ ಭಾರತೀಯ ಆಟಗಾರರು ಒಟ್ಟು ಏಳು ಪದಕಗಳನ್ನು ಗೆದ್ದಿದ್ದಾರೆ. ಇದು ಈವರೆಗಿನ ಗರಿಷ್ಠ ಸಾಧನೆ. ಇದಕ್ಕೂ ಮುಂಚಿನ ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತ ಕೇವಲ ಎರಡು ಪದಕಗಳನ್ನು ಜಯಿಸಿತ್ತು. 2012ರ ಲಂಡನ್ ಒಲಿಂಪಿಕ್ಸ್’ನಲ್ಲಿ ಆರು ಪದಕಗಳನ್ನು ಗೆದ್ದಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಟೋಕಿಯೋ ಒಲಿಂಪಿಕ್ಸ್’ನಲ್ಲಿ ಭಾರತ ಈ ದಾಖಲೆಯನ್ನು ಮುರಿದಿದೆ. ಟೋಕಿಯೋ ಒಲಿಂಪಿಕ್ಸ್’ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಏಕೈಕ ಚಿನ್ನದ ಪದಕ ಅಡಗಿತ್ತು. ಭಾರತದ ಚಿನ್ನದ ಆಸೆಯ ಕೊನೆಯ ಭರವಸೆಯಾಗಿದ್ದ ನೀರಜ್ ಚೋಪ್ರಾ ಆ ಭರವಸೆ ಹುಸಿಯಾಗಲು ಬಿಡಲಿಲ್ಲ. ಅಥ್ಲೆಟಿಕ್ಸ್’ನಲ್ಲಿ ಪದಕ ಪಡೆಯುವುದು ಭಾರತೀಯ ಕ್ರೀಡಾಪಟುಗಳ ಕನಸಾಗಿತ್ತು. ಪಿ ಟಿ ಉಷಾ, ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಪ್ರಯತ್ನಿಸಿದರಾದರೂ ಯಶಸ್ವಿಯಾಗಿರಲಿಲ್ಲ. ಇವರೆಲ್ಲರ ಕನಸನ್ನು ನನಸು ಮಾಡಿದ್ದು ನೀರಜ್ ಚೋಪ್ರ. ತಮ್ಮ ಒಲಿಂಪಿಕ್ಸ್ ಜಯವನ್ನು ನೀರಜ್ ಚೋಪ್ರ ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್’ನಲ್ಲಿ ಅಭಿನವ್ ಬಿಂದ್ರಾ ಅವರು ಶೂಟಿಂಗ್ ವಿಭಾಗದಲ್ಲಿ ಪಡೆದ ಚಿನ್ನದ ಪದಕ ಭಾರತದ ಕೊನೆಯ ಚಿನ್ನದ ಪದಕವಾಗಿತ್ತು. ಆ ನಂತರ ಯಾವುದೇ ವಿಭಾಗದಲ್ಲಿ ಚಿನ್ನ ಪಡೆಯಲು ಭಾರತ ವಿಫಲವಾಗಿತ್ತು. ಟೋಕಿಯೋ ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕದ ಬರಗಾಲವನ್ನು ನೀರಜ್ ಅವರು ನೀಗಿಸಿದ್ದಾರೆ. ಭಾರತದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಕ್ರೀಡೆ ಗಾಲ್ಫ್. ಒಲಿಂಪಿಕ್ಸ್ ಕ್ರೀಡಾಕೂಟದ ಗಾಲ್ಫ್ ವಿಭಾಗದಲ್ಲಿ ಭಾರತದ ಪ್ರತಿನಿಧಿತ್ವವನ್ನು ಗಮನಿಸುವವರಿರಲಿಲ್ಲ. ಆದರೆ, ಅದಿತಿ ಅಶೋಕ್ ಅವರು ಸಂಪೂರ್ಣ ವಿಶ್ವವೇ ಭಾರತವನ್ನು ಗುರುತಿಸುವಂತೆ ಮಾಡಿದರು. ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದ ಅದಿತಿ ಅಶೋಕ್ ಅವರು, ಗಾಲ್ಫ್ ವಿಭಾಗದಲ್ಲಿ ಭಾರತದ ಈವರೆಗಿನ ಸರ್ವಶ್ರೇಷ್ಟ ಸಾಧನೆಯನ್ನು ದಾಖಲಿಸಿದ್ದಾರೆ. ಕೊನೆಯ ಹಂತದವರೆಗೂ ಬೆಳ್ಳಿ ಪದಕಕ್ಕೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಅದಿತಿ, ಕೊನೆಯ ಕ್ಷಣದಲ್ಲಿ ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು. 4x400 ರಿಲೇಯಲ್ಲಿ ಭಾರತವು ಏಷ್ಯಾ ಮಟ್ಟದ ದಾಖಲೆಯನ್ನು ಬರೆಯಿತು. ಭಾರತದ ಮುಹಮ್ಮದ್ ಅನಾಸ್ ಯಾಹಿಯಾ, ನೋಹಾ ನಿರ್ಮಲ್ ಟಾಮ್, ಅರೋಕಿಯಾ ರಾಜಿವ್ ಮತ್ತು ಅಮೋಜ್ ಜೇಕಬ್ ಅವರ ತಂಡವು 3:00:25 ನಿಮಿಷದಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಖ ಏಷ್ಯಾ ದಾಖಲೆಯನ್ನು ಬರೆದು ಸಂಚಲನ ಮೂಡಿಸಿತ್ತು. ಆದರೆ, ಒಲಿಂಪಿಕ್ಸ್ ಪೈನಲ್ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ತಂಡ ವಿಫಲವಾಗಿತ್ತು. ದೇಶದಲ್ಲಿ ಸಂಚಲನ ಮೂಡಿಸಿದ ಮತ್ತೊಂದು ಕ್ರೀಡೆಯೆಂದರೆ ಅದು ಹಾಕಿ. ಒಂದು ಕಾಲದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಸಾರ್ವಭೌಮತೆಯನ್ನು ಸಾಧಿಸಿತ್ತು. ತದನಂತರ ಆಟದಲ್ಲಿ ತನ್ನ ಮೊಣಚು ಕಳೆದುಕೊಮಡಿದ್ದ ತಂಡವು ಈ ಬಾರಿಯ ಪಂದ್ಯಾವಳಿಯಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಹಾಖಿಯ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಐತಿಹಾಸಿಕ ಸಾಧನೆಗೆ ಭಾರತ ಸಾಕ್ಷಿಯಾಗಿದೆ. ಹಾಕಿಯಲ್ಲಿ ಭಾರತ ಪದಕವನ್ನು ಪಡೆಯಲು ಬರೋಬ್ಬರಿ 41 ವರ್ಷ ಕಾದಿತ್ತು. ಈ ಬಾರಿ ಕಂಚಿನ ಪದಕ ಗೆಲ್ಲುವ ಮೂಲಕ ಪುರುಷರ ಹಾಕಿ ತಂಡವು ಸಾಧನೆ ಮೆರೆದಿದೆ. ಮಹಿಳೆಯರ ವಿಭಾಗದಲ್ಲಿ ಮೊತ್ತಮೊದಲ ಬಾರಿಗೆ ಸೆಮಿಫೈನಲ್ ಸುತ್ತಿಗೆ ಏರಿದ ಸಾಧನೆಯೂ ಇದೇ ವರ್ಷ ನಡೆದಿದೆ. ಸಂಪೂರ್ಣ ದೇಶವೇ ಭಾರತದ ಎರಡೂ ಹಾಕಿ ತಂಡಗಳ ಸಾಧನೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದೆ. ಇನ್ನು ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಕಂಚಿಗೆ ಮುತ್ತಿಟ್ಟ ಪಿ ವಿ ಸಿಂಧು, ಒಲಿಂಪಿಕ್ಸ್’ನಲ್ಲಿ ಕ್ರೀಡಾಕೂಟದಲ್ಲಿ ಎರಡು ಪದಕ ಪಡೆದ ಏಕೈಕ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪುರುಷ ಮತ್ತು ಮಹಿಳೆಯರ ವಿಭಾಗ ಸೇರಿದರೆ, ಎರಡು ಒಲಿಂಪಿಕ್ಸ್ ಪದಕ ಪಡೆದ ಭಾರತದ ಎರಡನೇ ಕ್ರೀಡಾಪಟು ಸಿಂಧು. ಈ ಹಿಂದೆ ಕುಸ್ತಿಪಟು ಸುಶೀಲ್ ಕುಮಾರ್ ಅವರು ಈ ಸಾಧನೆ ಮಾಡಿದ್ದರು. ಇದರೊಂದಿಗೆ, ಸತತ ಎರಡು ಒಲಿಂಪಿಕ್ಸ್’ನಲ್ಲಿ ಪದಕ ಪಡೆದ ವಿಶ್ವದ ನಾಲ್ಕನೇ ಸಿಂಗಲ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆಯ ಆಟಗಾರರಾದ ಮೇರಿ ಕೋಮ್ ಹಾಗೂ ದೀಪಕ್ ಪೂನಿಯಾ ಅವರು ಬರಿಗೈಯಲ್ಲಿ ಮರಳಿದ್ದು ನಿಜಕ್ಕೂ ದೇಶದ ಕ್ರೀಡಾಭಿಮಾನಿಗಳಲ್ಲಿ ನೋವು ತಂದಿದೆ.
Read moreDetailsಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ತರುವ ದೊಡ್ಡ ಭರವಸೆ ಮೂಡಿಸಿದ್ದ ಭಾರತದ ಯುವ ಕ್ರೀಡಾಪಟು ನೀರಜ್ ಚೋಪ್ರಾ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ...
Read moreDetailsಟೋಕಿಯೊ ಒಲಿಂಪಿಕ್ಸ್: ನೀರಜ್ ಛೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 100 ವರ್ಷಗಳ ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದಿದ್ದು...
Read moreDetailsಆತ್ಮನಿರ್ಭರಭಾರತ ಸೂಕ್ಷ್ಮ ಮನುಜ ಸಂವೇದನೆಗಳನ್ನೂ ಕಳೆದುಕೊಂಡು ಬೆತ್ತಲಾಗುತ್ತಿದೆ. ದೇಶದ ರಾಜಧಾನಿಯಲ್ಲಿ ನಡೆಯುವ ಒಂದು ಅತ್ಯಾಚಾರ ಮತ್ತು ಕೊಲೆಗೆ ಸಂತಾಪವನ್ನೂ ಸೂಚಿಸದ ಒಂದು ಸರ್ಕಾರ ಈ ದೇಶದಲ್ಲಿ ಅಧಿಕಾರದ...
Read moreDetailsಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಈಕ್ವೆಸ್ಟ್ರಿಯನ್ ಪಟು ಫೌಹಾದ್ ಮಿರ್ಜಾ ಟೋಕಿಯೋ ಫೈನಲ್ ಪ್ರವೇಶಿದ್ದಾರೆ. ಇತ್ತೀಚೆಗೆ ಭಾನುವಾರ ನಡೆದ ಕ್ರಾಸ್ಕಂಟ್ರಿ ಸುತ್ತಿನಲ್ಲಿ 11.20 ಪೆನಾಲ್ಟಿ ಅಂಕ ಗಳಿಸುವ ಮೂಲಕ...
Read moreDetailsಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 3 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದ ನಂತರ ಇಡೀ ಭಾರತವು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ,...
Read moreDetailsಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಫೈನಲ್ಗೇರಲು ವಿಫಲರಾಗಿದ್ದಾರೆ. ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0...
Read moreDetailsಭಾರತೀಯ ಮಹಿಳಾ ಹಾಕಿ ತಂಡವು ಮೂರಿ ಬಾರಿ ಒಲಿಂಪಿಕ್ಸ್ ಚಾಂಪಿಯನ್ಸ್ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ...
Read moreDetailsಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಬಾಕ್ಸಿಂಗ್ ತಂಡದಲ್ಲಿ ತಂಡದ ಅಧಿಕೃತ ವೈದ್ಯರೇ ಇಲ್ಲ ಎನ್ನುವ ಆಘಾತಕಾರಿ ಅಂಶ ವರದಿಯಾಗಿದೆ. ಆಕ್ರಮಣಕಾರಿ ಕ್ರೀಡೆಯಾಗಿರುವ ಬಾಕ್ಸಿಂಗ್‌ನಲ್ಲಿ ಕ್ರೀಡಾಪಟುಗಳು ದೈಹಿಕವಾಗಿ ಗಾಯಗೊಳ್ಳುವುದು ಸಾಮಾನ್ಯವೇ...
Read moreDetailsಸಾಧನೆ ಮಾಡುವವರಿಗೆ ಅಡ್ಡಿ ಆತಂಕಗಳಿರಲ್ಲ. ಇದ್ದರೂ ಅವುಗಳನ್ನು ಮೀರಿ ಸಾಧನೆ ಮಾಡುವವರಿದ್ದಾರೆ. ಅಂಥವರಲ್ಲಿ ನಮ್ಮ ಗದುಗಿನ ಸೈಕ್ಲಿಂಗ್ ಕೋಚ್ ಅನಂತ್ ದೇಸಾಯಿ ಕೂಡ ಸೇರುತ್ತಾರೆ. ಕೋವಿಡ್, ಲಾಕ್...
Read moreDetailsನಾವೆಲ್ಲರೂ ‘ಫ್ಲೈಯಿಂಗ್ ಸಿಖ್’ ಮಿಲ್ಖಾ ಸಿಂಗ್ ಬಗ್ಗೆ ಕೇಳಿದ್ದೇವೆ. ತಮ್ಮಮಿಂಚಿನ ಓಟದಿಂದಾಗಿ ಅವರು ದೇಶ ವಿದೇಶಗಳಲ್ಲೂ ಖ್ಯಾತರಾಗಿದ್ದಾರೆ. ಆದರೆ ಮಿಲ್ಖಾಸಿಂಗ್ ಅವರನ್ನು ಸೋಲಿಸಿದ ಕೊಡಗು ಜಿಲ್ಲೆಯ ಕುಂಜಿಯಂಡ...
Read moreDetailsಕ್ರಿಕೆಟ್ ಇತಿಹಾಸದ ಮೊತ್ತಮೊದಲ ಟೆಸ್ಟ್ ಚಾಂಪಿಯನ್’ಶಿಪ್ ನ ಕೊನೆಯ ಹಂತವನ್ನು ನಾವು ತಲುಪಿದ್ದೇವೆ. ಇಂದಿನಿಂದ ಐದು ದಿನಗಳ ನಂತರ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡ ಯಾವುದು ಎಂಬ...
Read moreDetailsಕೋವಿಡ್–19 ಸಾಂಕ್ರಾಮಿಕದ ಪಿಡುಗು ತೀವ್ರಗೊಂಡಿರುವ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸುವುದಾಗಿ...
Read moreDetailsಓವರ್ ಒಂದರಲ್ಲಿ 36 ರನ್! ಬೀದಿಯಲ್ಲಿ ಹುಡುಗರೊಂದಿಗೆ ಬ್ಯಾಟ್ ಬೀಸುತ್ತಾ ಕ್ರಿಕೆಟ್ ಆಡುವ ಯಾವುದಾದರೂ ಬಾಲಕನನ್ನು ಕರೆದು, ನೀನೇದಾರೂ ಒಂದು ಓವರ್ ನಲ್ಲಿ 36 ರನ್...
Read moreDetailsಸೈಕ್ಲಿಂಗ್ ಫಡರೇಶನ್ ಆಫ್ ಇಂಡಿಯಾ, ರಾಜ್ಯ ಸೈಕ್ಲಿಂಗ್ ಸಂಸ್ಥೆ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಹಾಗೂ ಗ್ರಾ.ಪಂ ಅಸುಂಡಿ ಮತ್ತು ಬಿಂಕದಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ 17ನೇ ರಾಷ್ಟ್ರೀಯ...
Read moreDetailsಪುಟ್ಟ ಜಿಲ್ಲೆ ಕೊಡಗು ಎರಡು ರಂಗಗಳಲ್ಲಿ ದೇಶದಲ್ಲೆ ಪ್ರಖ್ಯಾತವಾಗಿದೆ. ಮೊದಲನೇಯದು ರಕ್ಷಣಾ ಕ್ಷೇತ್ರವಾಗಿದ್ದರೆ ಎರಡನೇಯದು ಕ್ರೀಡಾ ಕ್ಷೇತ್ರ. ಈ ಎರಡೂ ರಂಗಗಳಲ್ಲೂ ಸಾವಿರಾರು ಕೊಡವರು ಹತ್ತಾರು ದಶಕಗಳಿಂದಲೂ...
Read moreDetailsಬಿಸಿಸಿಐ ತಂಡದ ಮಾಜಿ ಹಾಗೂ ಹಾಲಿ ಆಟಗಾರರು #IndiaTogether, #IndiaAgainstPropaganda ಹ್ಯಾಷ್‌ಟ್ಯಾಗ್ ಬಳಸಿ ಕೇಂದ್ರದ ಪರ ಬ್ಯಾಟಿಂಗ್ ನಡೆಸುತ್ತಿರುವಂತೆಯೇ, ಬೌಲರ್ ಸಂದೀಪ್ ಶರ್ಮ ಇದಕ್ಕೆ ವಿರುದ್ಧವಾಗಿ ಹೋಗಿದ್ದಾರೆ....
Read moreDetailsಆಸ್ಟ್ರೇಲಿಯಾದ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಜಯದ ಮೂಲಕ ಟೆಸ್ಟ್ ಸರಣಿಯನ್ನು ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂಗಳ ನಗದು ಬಹುಮಾನ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada