ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಫೈನಲ್ಗೇರಲು ವಿಫಲರಾಗಿದ್ದಾರೆ. ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ ಭಾರತದ ಪದಕದ ಸಂಖ್ಯೆ ಮೂರಕ್ಕೇರಿದೆ.
ಬುಧವಾರ ನಡೆದ ಅಂತಿಮ-4ರ ಸ್ಪರ್ಧೆಯಲ್ಲಿ ಅಸ್ಸಾಂ ಬಾಕ್ಸರ್ ಲವ್ಲೀನಾ ಅವರು ಟರ್ಕಿಯ ಬುಸೆನಾಝ್ ಸುರ್ಮೆನೆಲಿ ಅವರ ವಿರುದ್ಧದ ಮೊದಲ ಎರಡು ರೌಂಡ್ ಗಳನ್ನು ಸೋತರು. ಅಂತಿಮವಾಗಿ ಒಮ್ಮತದ ತೀರ್ಪಿನಲ್ಲಿ ಟರ್ಕಿಯ ಬಾಕ್ಸರ್ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ.
ಲವ್ಲೀನಾ ಅವರು ಅಂತಿಮ -16ರ ಸುತ್ತಿನಲ್ಲಿ ಜರ್ಮನಿಯ ನದಿನ್ ಅಪೆಟ್ಜ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಕ್ವಾರ್ಟರ್ ಫೈನಲ್ ನಲ್ಲಿ ಚೈನೀಸ್ ತೈಪೆಯ ನೀನ್ ಚಿನ್ ಚೆನ್ ಅವರನ್ನು 4-1ರಿಂದ ಸೋಲಿಸಿ ಸೆಮಿ ಫೈನಲ್ ತಲುಪಿದ್ದರು.
ಮಹಿಳಾ ಬಾಕ್ಸಿಂಗ್ನ 69 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋಲನ್ನು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.