• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ಬೊಮ್ಮಾಯಿಗೆ ಸುಲಭವಿಲ್ಲ ಆಡಳಿತದ ಹಾದಿ; ಮುಂದಿವೆ ಸಾಲುಸಾಲು ಸವಾಲು!

ನಚಿಕೇತು by ನಚಿಕೇತು
July 28, 2021
in ಕರ್ನಾಟಕ
0
ಸಿಎಂ ಬೊಮ್ಮಾಯಿಗೆ ಸುಲಭವಿಲ್ಲ ಆಡಳಿತದ ಹಾದಿ; ಮುಂದಿವೆ ಸಾಲುಸಾಲು ಸವಾಲು!
Share on WhatsAppShare on FacebookShare on Telegram

ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಇತ್ತೀಚೆಗೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ (S.R Bommai) ಪುತ್ರ ಬಸವರಾಜ್ ಬೊಮ್ಮಾಯಿ (Basavaraj Bommai) ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಲವು ಮಹತ್ತರ ರಾಜಕೀಯ ಬೆಳವಣಿಗೆಗಳ ನಡುವೆಯೂ ರಾಷ್ಟ್ರೀಯ ನಾಯಕರು ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೃಪಾ ಕಟಾಕ್ಷದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ADVERTISEMENT

Also Read: ಗೃಹಸಚಿವರಾಗಿ ವಿಫಲರಾದ ಬೊಮ್ಮಾಯಿ, ಸಿಎಂ ಆಗಿ ಸಫಲರಾಗಬಲ್ಲರೇ?

ಇನ್ನು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ, ನನ್ನದು ಜನಪರ ಆಡಳಿತ. ಯಾವುದೇ ರಾಷ್ಟ್ರೀಯ ನಾಯಕರ ಹಸ್ತಕ್ಷೇಪ ಇರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಘೋಷಿಸಿದ್ದಾರೆ. ಹೀಗಿರುವಾಗ ಗೃಹ ಮಂತ್ರಿಯಾಗಿ ಇಲಾಖೆಯನ್ನು ಸರಿಯಾಗಿ ನಿಭಾಯಿಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಹೇಗೆ ರಾಜ್ಯದ ಆಡಳಿತ ನಡೆಸಲಿದ್ದಾರೆ ಎಂಬ ಪ್ರಶ್ನೆಗಳು ಹಲವರಲ್ಲಿ ಹುಟ್ಟಿಕೊಂಡಿವೆ.

ಹೌದು, ಬಿ.ಎಸ್ ಯಡಿಯೂರಪ್ಪ (B S Yediyurappa) ತನ್ನ ಆಡಳಿತದಲ್ಲಿ ರಾಜ್ಯಕ್ಕೇ ಯಾರು ಮಾಡದಷ್ಟು ಡ್ಯಾಮೇಜ್ ಮಾಡಿ ಹೋಗಿ ಆಗಿದೆ. ಈಗ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಬಂದಿದ್ದಾರೆ. ಅದು ಬಿ.ಎಸ್ ಯಡಿಯೂರಪ್ಪ ರಾಷ್ಟ್ರೀಯ ನಾಯಕರ ಮೇಲೆ ಹೇರಿದ ಒತ್ತಡ ಕಾರಣಕ್ಕೆ ಬಸವರಾಜ ಬೊಮ್ಮಾಯಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಯಾರು ಹಸ್ತಕ್ಷೇಪ ಮಾಡೋದಿಲ್ಲ ಎಂಬುದು ಶುದ್ದ ಸುಳ್ಳು. ಈ ಸರ್ಕಾರದಲ್ಲಿ ಯಡಿಯೂರಪ್ಪರದ್ದೇ ಕಾರುಬಾರು ಎಂಬ ಮಾತುಗಳು ಕೇಳಿ ಬಂದಿವೆ.

ವಾಸ್ತವದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಡಳಿತದ ಹಾದಿ ಅಷ್ಟೇನು ಸುಲಭವಾಗಿಲ್ಲ. ಒಂದೆಡೆ ಕರೋನಾ ಮೂರನೇ ಅಲೆ ಎದುರಾಗುವ ಆತಂಕ, ಇನ್ನೊಂದೆಡೆ ಮುಂದಿನ ಚುನಾವಣೆಗಾಗಿ ಬಿಜೆಪಿ ಬಲಪಡಿಸುವ ಸವಾಲು. ಅಲ್ಲದೆ, ಸಂಪೂರ್ಣ ತಣ್ಣಗಾಗದ ಬಿಜೆಪಿ ಆಂತರಿಕ ಭಿನ್ನಮತವನ್ನೂ ತಣಿಸಬೇಕಿದೆ. ಹೀಗೆ ಹಲವು ಸವಾಲುಗಳನ್ನ ಬಸವರಾಜ ಬೊಮ್ಮಾಯಿ ಎದುರಿಸಬೇಕಿದೆ.

Also Read: ʼಆದೇಶದ ಅನುಷ್ಠಾನಕ್ಕೆ ಆದ್ಯತೆʼ ʼಪ್ರಧಾನಿ ಭೇಟಿ ಬಳಿಕ ಸಂಪುಟ…

ಸದ್ಯದಲ್ಲೇ ಬೊಮ್ಮಾಯಿ ಸಚಿವ ಸಂಪುಟ ರಚನೆ ಮಾಡಬೇಕಿದೆ. ಈ ವೇಳೆ ಪಕ್ಷದ ಹಿರಿಯ ನಾಯಕರು, ವಲಸಿಗ ನಾಯಕರು ಹಾಗೂ ಮೂಲ ಬಿಜೆಪಿಗರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರನ್ನು ಅಳೆದು ತೂಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಸವಾಲು ಬೊಮ್ಮಾಯಿ ಮುಂದಿದೆ. ಹಾಗೆಯೇ ಸಂಪುಟ ರಚನೆ ಬಳಿಕ ಸರ್ಕಾರ ನಡೆಸಲು ಅತ್ಯುತ್ತಮ ತಂಡವೊಂದು ಕಟ್ಟಿಕೊಳ್ಳಬೇಕಿದೆ.

ಸಂಪುಟದ ಸಹೋದ್ಯೋಗಿಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಪಕ್ಷದಲ್ಲಿ ಬಿ.ಎಸ್‌ ಯಡಿಯೂರಪ್ಪ ಬಣವೇ ಇವರಿಗೂ ಕಾಡುವ ಸಾಧ್ಯತೆ ಇದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿದೆ. ಸದ್ಯದಲ್ಲೇ ಮೂರನೇ ಅಲೆ ಎದುರಾಗಲಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

Also Read : ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ ‘ರಾಜಾಹುಲಿ’ಯ ಅಸಲೀ ಆಟ ಈಗ ಆರಂಭವಾಗಿದೆ..

ಕರೋನಾದಿಂದ ಮುಂದೂಡಲಾಗಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯಿತಿ ಚುನಾವಣೆ ಸಮರ್ಥವಾಗಿ ನಡೆಸಬೇಕಿದೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಈ ಚುನಾವಣೆ ನಡೆಸೋದು ಸದ್ಯದ ಪರಿಸ್ಥಿತಿಯಲ್ಲಿ ಬೊಮ್ಮಾಯಿ ಸರ್ಕಾರದ ಪಾಲಿಗೆ ಸವಾಲಾಗಲಿದೆ.

ಅವಧಿಗೆ ಮುನ್ನ ಬಿ.ಎಸ್. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಪರಿಣಾಮ ಬಿಜೆಪಿಗೆ ಭಾರೀ ಡ್ಯಾಮೇಜ್ ಆಗಿದೆ. ಇದಕ್ಕೆ ಬೊಮ್ಮಾಯಿ ಉತ್ತಮ ಆಡಳಿತ ನಡೆಸುವ ಮೂಲಕ ಸರ್ಕಾರದ ಇಮೇಜ್ ಹೆಚ್ಚಿಸಬೇಕಾಗಿದೆ. ಇದಾದ ಬಳಿಕ 2023ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕಿದೆ.

Also Read : ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!

ಬಿ.ಎಸ್ ಯಡಿಯೂರಪ್ಪ ಕೃಪಾಕಟಾಕ್ಷದಿಂದಲೇ ಸಿಎಂ ಆದ ಬಸವರಾಜ ಬೊಮ್ಮಾಯಿ ಯಾವುದೇ ಕಾರಣಕ್ಕೂ ಇವರ ಮಾತು ಮೀರಲು ಆಗೋದಿಲ್ಲ. ಹೀಗಾಗಿ ತಾನು ಸಿಎಂ ಆಗಲು ಕಾರಣರಾದ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಎದುರು ಹಾಕಿಕೊಂಡು ಆಡಳಿತ ನಡೆಸೋದು ಮಾತ್ರ ಅಸಾಧ್ಯ. ಇದರ ಬಗ್ಗೆಯೂ ಬೊಮ್ಮಾಯಿ ಗಮನಹರಿಸಬೇಕಿದೆ. ಪಕ್ಷ ಮತ್ತು ಸರ್ಕಾರದಲ್ಲಿ ಐಕ್ಯತೆ ಕಾಪಾಡಬೇಕಾಗುತ್ತದೆ. ಬಿಎಸ್ವೈ ಆಡಳಿತದಲ್ಲಿ ಹಲವು ಬಾರಿ ಖಜಾನೆ ಖಾಲಿಯಾಗಿದೆ. ಸರ್ಕಾರದ ಖಜಾನೆ ಖಾಲಿಯಾದರೂ ಅಭಿವೃದ್ದಿ ಕೆಲಸ ಮಾಡೋದು ಬೊಮ್ಮಾಯಿಗೆ ಸವಾಲು ಕೆಲಸ. ಕ್ಯಾಬಿನೆಟ್ ರಚನೆ ಬಳಿಕ ಹಿರಿಯರಿಂದ ಅಪಸ್ವರ ಕೇಳಿಬರುವುದು ಸಹಜ. ಇದನ್ನು ಸರಿಯಾಗಿ ಸಂಭಾಳಿಸಿಕೊಂಡು ಹೋಗಬೇಕು.

Tags: Basavaraj BommaiBJPCovid 19ಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ: ಕರವೇ

Next Post

ಬಿಜೆಪಿಗೆ ದೊಂಬಿ, ಗೂಂಡಾಗಿರಿಗೆ ಕಾರ್ಯಕರ್ತರು ಬೇಕು, ಆಡಳಿತಕ್ಕೆ ವಲಸಿಗರು ಬೇಕು..!

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಬಿಜೆಪಿಗೆ ದೊಂಬಿ, ಗೂಂಡಾಗಿರಿಗೆ ಕಾರ್ಯಕರ್ತರು ಬೇಕು, ಆಡಳಿತಕ್ಕೆ ವಲಸಿಗರು ಬೇಕು..!

ಬಿಜೆಪಿಗೆ ದೊಂಬಿ, ಗೂಂಡಾಗಿರಿಗೆ ಕಾರ್ಯಕರ್ತರು ಬೇಕು, ಆಡಳಿತಕ್ಕೆ ವಲಸಿಗರು ಬೇಕು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada