ಬಿಗ್ ಬಾಸ್ ನ ಈ ವಾರದ ಟಾಸ್ಕ್ ತುಂಬಾನೇ ವಿಭಿನ್ನವಾಗಿದ್ದು ಎರಡು ತಂಡಗಳಾಗಿ ವಿಂಗಡಣೆಯಾಗಿದೆ.ಹಾಗೂ ಒಂದು ತಂಡದ ಕ್ಯಾಪ್ಟನ್ ತ್ರಿವಿಕ್ರಮ್ ಹಾಗೂ ಮತ್ತೊಂದು ತಂಡದ ನಾಯಕ ರಜತ್.ಬಿಗ್ ಬಾಸ್ ಈ ಎರಡು ತಂಡಗಳಿಗೂ ಟಾಸ್ಕ್ ನೀಡುತ್ತಾರೆ, ಬಾಸ್ಕೆಟ್ ಒಳಗಡೆ ಬಾಲ್ ಅನ್ನು ಹಾಕಬೇಕು. ಕರುನಾಡ ಕಿಲಾಡಿಗಳು ತಂಡ ಈ ಟಾಸ್ಕ್ ಗೆದ್ದಿದೆ ಹಾಗೂ ಕರ್ನಾಟಕ ಕದರ್ ತಂಡ ಸೋತಿದೆ.
ಇನ್ನು ಗೆದ್ದ ತಂಡ ಸೋತ ತಂಡದವರನ್ನು ನಾಮಿನೇಟ್ ಮಾಡಬೇಕೆಂಬ ರೂಲ್ಸ್ ಇರುತ್ತದೆ..ಹಾಗೂ ತ್ರಿವಿಕ್ರಮ್ ತಂಡ ರಜತ್ ತಂಡದವರನ್ನು ನಾಮಿನೇಟ್ ಮಾಡುತ್ತಾರೆ.ಹಾಗೂ ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರಬಿದ್ದಿದ್ದು ಕರುನಾಡ ಕಿಲಾಡಿಗಳು ತಂಡ ಈ ಟಾಸ್ಕ್ ಗೆದ್ದಿದೆ , ಹಾಗೂ ರಜತ್ ತಂಡದಿಂದ ನಾಯಕ ರಜತ್ ಅವರನ್ನೆ ನಾಮಿನೇಟ್ ಮಾಡುತ್ತಾರೆ.
ನಾಮಿನೇಟ್ ಮಾಡುವಾಗ ತ್ರಿವಿಕ್ರಮ ಅವರು ರಜತ್ಗೆ ನೀವು ಇಂಡಿವಿಜುಯಲ್ ಆಗಿ ಎಂದು ಬೇರೆಯವರನ್ನ ಪ್ರವೋಕ್ ಮಾಡುತ್ತೀರಾ, ಹಾಗೂ ಸುಪೀರಿಯರ್ ಎಂದು ನೀವು ಅಂದುಕೊಂಡಿದ್ದೀರಾ. ಹಾಗಾಗಿ ನಿಮ್ಮನ್ನ ನಾಮಿನೇಟ್ ಮಾಡ್ತೀನಿ ಎಂಬ ಕಾರಣಗಳನ್ನು ನೀಡುತ್ತಾರೆ. ಈ ಕಾರಣ ಕೇಳಿದಂತ ರಜತ್ ಕೋಪಗೊಂಡು ತ್ರಿ ವಿಕ್ರಮ್ ಮೇಲೆ ರೇಗಾಡುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಚಾರಕ್ಕಾಗಿ ಜಗಳಗಳು ಆಗೋದು ಕಾಮನ್, ಹಾಗಾದ್ರೆ ಇವತ್ತು ಯಾರೆಲ್ಲಾ ನಾಮಿನೇಟ್ ಆಗ್ತಾರೆ ಎಂಬುವುದನ್ನು ಕಾದು ನೋಡ್ಬೇಕು.