
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಪಾನಮತ್ತ ಚಾಲನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರಿ ಜಂಟಿ ಆಯುಕ್ತ ಅನುಚೇತ್ (Bangalore City Traffic Joint Commissioner) ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕುಡಿದು ಚಾಲನೆ ಮಾಡಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.ಇದನ್ನು ತಪ್ಪಿಸಲು ಡ್ರಂಕ್ ಅಂಡ್ ಡ್ರೈವ್ ತಪಾಸಣೆ (Drunk and Drive Test) ಮಾಡಲಾಗುತ್ತಿದೆ. ಪ್ರತಿ ಗುರುವಾರದಿಂದ ಭಾನುವಾರ ಡಿಡಿ ಚೆಕಿಂಗ್ ಮಾಡುತ್ತೇವೆ ಎಂದು ಹೇಳಿದ್ದರೆ.

ಸಿಸಿಟಿವಿ ಇರುವ ಕಡೆ ಮಾತ್ರ ಡಿಡಿ ತಪಾಸಣೆ
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅನುಚೇತ್ ಅವರು, ಡ್ರಂಕ್ ಅಂಡ್ ಡ್ರೈವ್ ಇನ್ಸ್ ಪೆಕ್ಟರ್ ಮಟ್ಟದ ಅಧಿಕಾರಿ ಚೆಕ್ ಮಾಡಬೇಕು ಅಂತ ಇತ್ತು, ಈಗ ಪಿಎಸ್ ಐ ಮಟ್ಟದ ಅಧಿಕಾರಿಗಳು ಈಗ ಡ್ರಂಕ್ ಅಂಡ್ ಡ್ರೈವ್ ಚೆಕ್ ಮಾಡುತ್ತಾರೆ.ಸಿಸಿಟಿವಿ ಇರುವ ಕಡೆಯೇ ಡಿಡಿ ಕೇಸ್ ಚೇಕಿಂಗ್ ಮಾಡಬೇಕು. ಕರ್ತವ್ಯದಲ್ಲಿ ಪಾರದರ್ಶಕತೆ ತರುವ ದೃಷ್ಠಿಯಿಂದ ಸಿಸಿಟಿವಿ ಇರುವ ಕಡೆಯೇ ಚೇಕಿಂಗ್ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಇಳಿದಂತೆ ನಾವು ಟ್ರಾಫಿಕ್ ಸೆಂಟರ್ ನಲ್ಲಿ ಕುಳಿತು ವಾಚ್ ಮಾಡ್ತಾ ಇರುತ್ತೇವೆ.ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಕೂಡ ಇರುತ್ತೆ. ಪೊಲೀಸರ ಮೇಲಿನ ಆರೋಪ ಕೇಳಿ ಬಂದಾಗ ಈ ಸಿಸಿಟಿವಿಗಳು ಸಹಾಯವಾಗುತ್ತೆ ಎಂದು ಸಂಚಾರಿ ಜಂಟಿ ಆಯುಕ್ತ ವಿವರಿಸಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು, ಸಂಚಾರಿ ಠಾಣೆಗಳಲ್ಲಿ ರಾತ್ರಿ ವೇಳೆ ಮಹಿಳಾ ಸಿಬ್ಬಂದಿ ನೇಮಕ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ಮಾಹಿತಿ ನೀಡಿದ್ದಾರೆ.