ಪ್ರತಿಯೊಬ್ಬರೂ ಕೂಡ ಪ್ರತಿದಿನ ವಾಕ್ ಮಾಡುವುದು ತುಂಬಾನೇ ಇಂಪಾರ್ಟೆಂಟ್. ಕೆಲವರು ಬೆಳೆಯ ಸಮಯದಲ್ಲಿ ವಾಕ್ ಮಾಡಿದರೆ ಇನ್ನು ಕೆಲವು ಸಂಜೆಯ ವೇಳೆಯಲ್ಲಿ ವಾಕ್ ಮಾಡ್ತಾರೆ.

ಇನ್ನು ಬೆಳಗ್ಗೆಯ ಸಮಯದಲ್ಲಿ ವಾಕ್ ಮಾಡುವವರು, ಬೆಳಗ್ಗೆ 6 ಗಂಟೆಯಿಂದ ಎಂಟು ಗಂಟೆಯ ಒಳಗೆ ವಾಕ್ ಮುಗಿಸಬೇಕು ಇದರಿಂದ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ಸುಸ್ತಾಗುವುದಿಲ್ಲ ಕಾರಣ ಬಿಸಿಲಿನ ತಾಪ ಕಡಿಮೆ ಇರುತ್ತದೆ.

ಇನ್ನು ಬೆಳಿಗ್ಗೆ ನಾವು ಬ್ಯುಸಿ ಇರ್ತೀವಿ ಸಂಜೆ ಸಮಯದಲ್ಲಿ ವಾಕ್ ಮಾಡ್ತಿವಿ ಅನ್ನೋರು 5:00ಯಿಂದ 7:00 ಒಳಗೆ ತಮ್ಮ ವಾಕ್ ನ ಮುಗಿಸೋದು ಉತ್ತಮ. ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ವಾಕ್ ಮಾಡುವುದರಿಂದ ವ್ಯತ್ಯಾಸವೇನು ಇದೆ ಹಾಗೂ ಉಪಯೋಗಗಳಿವೆ ಏನಿಲ್ಲ ಎಂಬುದರ ಮಾಹಿತಿ ಇಲ್ಲಿದೆ.
ಬೆಳಗ್ಗಿನ ವಾಕ್
- ಬೆಳಗಿನ ವಾಕ್ ನಿಂದ ನಮ್ಮ ಮೆಂಟಲ್ ಹೆಲ್ತ್ ಹೆಚ್ಚಾಗುತ್ತದೆ, ಆರೋಗ್ಯಕರವಾಗಿರಲು ತುಂಬಾನೇ ಸಹಾಯಕಾರಿ, ವಿಚಾರಗಳ ಬಗ್ಗೆ ಫೋಕಸ್ ಮಾಡುವುದಕ್ಕೆ ಹೆಲ್ಪ್ ಫುಲ್ ಹಾಗೂ ಇಡೀ ದಿನ ಪೋಸ್ಟಿವ್ ಆಗಿರಬಹುದು.
- ಬೆಳಗ್ಗೆ ವಾಕ್ ಮಾಡುವುದರಿಂದ ನ್ಯಾಚುರಲ್ ಬೆಳಕಿಗೆ ಒಡ್ಡಿಕೊಳ್ಳುವುದರಿಂದ , ನಿಮ್ಮ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಂಜೆ ವಾಕ್
- ಸಂಜೆ ವೇಳೆ ವಾಕ್ ಮಾಡುವುದರಿಂದ ಇಡೀ ದಿನದ ಸ್ಟ್ರೆಸ್ ಅನ್ನ ರಿಲೀಸ್ ಮಾಡುತ್ತದೆ ,ಮೈಂಡ್ ಫ್ರೀ ಆಗುತ್ತದೆ .
- ಸಂಜೆಯ ಸಮಯದಲ್ಲಿ ನಿಯಮಿತವಾದ ವಾಕ್ ಮಾಡುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.






