ವಿಜಯಪುರ ಜಿಲ್ಲೆ ಹೇಳಿಕೇಳಿ ಬರದನಾಡು.ಬೇಸಿಗೆ ಕಾಲದಲ್ಲಿ ಕುಡಿಯೋ ನೀರಿನ ಬವಣೆ ಹೇಳತೀರದು.ಇಂತಹ ಬರದ ದಾಹ ತೀರಿಸಲು ಆಂಧ್ರ ಮೂಲದ ರೈತನೋರ್ವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಲದಿನ್ನಿ ಗ್ರಾಮದಲ್ಲಿ ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಂಧ್ರದ ರೈತ.ಜಿ.ವೆಂಕಟೇಶರಾವ್ ಅವರು ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲು ಸುಮಾರು 80 ಸಾವಿರ ರೂಪಾಯಿ ಖರ್ಚು ಮಾಡಿ 250ಅಡಿ ಆಳದ ಬೋರವೆಲ್ ಕೊರೆಸಿ ನೀರಿನ ದಾಹವನ್ನು ತೀರಿಸುತ್ತಿದ್ದಾರೆ.ಬಲದಿನ್ನಿ ದೇವಸ್ಥಾನದ ಬಳಿ ಕೊರೆದ ಬೋರವೆಲ್ ನಲ್ಲಿ 3 ಇಂಚು ಸಿಹಿ ನೀರು ಸಿಕ್ಕಿದೆ.ಈ ಭಾಗದ ಸಾರ್ವಜನಿಕರಿಗೆ, ರೈತರಿಗೆ, ಜಾನುವಾರುಗಳಿಗೆ ಅನುಕೂಲ ಆಗ್ತಿದ್ದು.ಬೇಸಿಗೆ ಬೇಗೆ ತಣಿಯಲು ಬೋರವೆಲ್ ಕೊರೆದು ದಾಹ ತೀರಿಸಿದ್ದಾರೆ. ಜನಪ್ರತಿನಿಧಿಗಳು, ಸರ್ಕಾರ ಮಾಡಬೇಕಿದ್ದ ಕೆಲಸವನ್ನು ರೈತ ಮಾಡಿರೋದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.ಆಂಧ್ರದಿಂದ ಜೀವನೋಪಾಯಕ್ಕಾಗಿ ನಾಲತವಾಡಕ್ಕೆ ಆಗಮಿಸಿರುವ ಇವರು ಬಲದಿನ್ನಿಯ ಹನುಮಾನ ದೇವರ ಆಶೀರ್ವಾದದಿಂದ ಅನುಕೂಲ ಆಗಿದೆ, ಹಾಗಾಗಿ ದೇವರಿಗೆ ಭಕ್ತಿಯ ಕಾಣಿಕೆ ಕೊಟ್ಟಿದ್ದೇನೆ ಎಂದ ರೈತ ಜಿ ವೆಂಕಟೇಶರಾವ್ ಹೇಳಿದ್ದಾರೆ.