ಕಾಶ್ಮೀರದ ಪೆಹಲ್ಗಾಮ್ ನಲ್ಲಿ ದಾಳಿ (Pahalgam terror attack) ನಡೆಸಿದ ಉಗ್ರರಿಗೆ ಮೊದಲೇ ತರಬೇತಿ ನೀಡಲಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ.ಈ ಉಗ್ರರ ಬಳಿ ಪೆಹಲ್ಗಾಮ್ ಬೈಸರನ್ ಕಣಿವೆಯ ನಕಾಶೆ ಕೂಡ ಇತ್ತು ಎನ್ನಲಾಗಿದೆ. ಹೀಗಾಗಿ ಈ ದಾಳಿಗೆ ಸಾಕಷ್ಟು ತಯಾರಿ ಮತ್ತು ತರಬೇತಿ ಇತ್ತು ಎಂಬುದು ಸ್ಪಷ್ಟವಾಗಿದೆ.

ಇನ್ನು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು ಬಾಡಿ ಕ್ಯಾಮ್ ಧರಿಸಿ ಬಂದಿದ್ರು ಎನ್ನಲಾಗಿದೆ. ಇದರಿಂದಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI), ಉಗ್ರರಿಗೆ ಡಿಜಿಟಲ್ ತರಬೇತಿ ನೀಡಿ ಕಳಿಸಿರುವುದು ಕೂಡ ಬಹಳ ಸ್ಪಷ್ಚವಾಗಿ ಗೋಚರವಾಗಿದೆ.

ಇನ್ನು ಪ್ಯಾಲೆಸ್ಟೈನ್ನ ಹಮಾಸ್ ಉಗ್ರಗಾಮಿ ಸಂಘಟನೆ (Hamas terrorist) ಮಾದರಿಯಲ್ಲಿಯೇ ಈ ಪೆಹಲ್ಗಾಮ್ ನಲ್ಲಿ ದಾಳಿ ನಡೆಸಲಾಗಿದೆ. ಹಮಾಸ್ ಉಗ್ರರು ಕೂಡ ಜನರ ಐ.ಡಿ. ಕಾರ್ಡ್ ನೋಡಿ ಆ ನಂತರ ದಾಳಿ ನಡೆಸ್ತಾರೆ.ಅದೇ ಮಾದರಿಯಲ್ಲಿ ಪೆಹಲ್ಗಾಮ್ ನಲ್ಲಿ ಜನರ ಐ.ಡಿ. ಕಾರ್ಡ್ ನೋಡಿ ಗುಂಡಿನ ದಾಳಿ ನಡೆಸಲಾಗಿದೆ.

ಇದರ ಜೊತೆಗೆ ಜನರ ಧರ್ಮವನ್ನು ಮೊದಲಿಗೆ ವಿಚಾರಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.ಇದೆ ರೀತಿ ಈಗ ಹಮಾಸ್ ಉಗ್ರಗಾಮಿ ಸಂಘಟನೆ ದಾಳಿಯ ಮಾದರಿಯಲ್ಲಿಯೇ ಈಗ ಕಾಶ್ಮೀರದಲ್ಲಿ ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದಾರೆ.