ರಾಜ್ಯವು ಕರೋನಾ ಸೋಂಕಿನಲ್ಲಿ ಸಿಲುಕಿ ನಲುಗುತ್ತಿದ್ದರೆ ಮೈಸೂರಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸ್ವಿಮ್ಮಿಂಗ್‌ಪೂಲ್ ನಿರ್ಮಾಣ..!

ಇಂದು ಇಡೀ ದೇಶವೇ ಕರೋನಾ ಎರಡನೇ ಅಲೆಯ ಸೋಂಕಿಗೆ ಸಿಲುಕಿ ತತ್ತರಿಸಿ ಹೋಗಿದೆ. ನಿತ್ಯವೂ ದೇಶದಲ್ಲಿ ಸಾವಿರಾರು ಜನರು ಮಾರಕ ರೋಗಕ್ಕೆ ಬಲಿಯಾಗುತಿದ್ದಾರೆ. ರುದ್ರ ಭೂಮಿಗಳ ಮುಂದೆ ಉದ್ದನೆ ಕ್ಯೂ ಕರಗುತ್ತಿಲ್ಲ. ಇಂತಹ ಗಂಭಿರ ಪರಿಸ್ಥಿತಿಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ  ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್‌ಫೂಲ್‌ ನಿರ್ಮಾಣಕ್ಕೆ ಮುಂದಾಗಿರುವುದು ಜನತೆಯ ಆಕ್ರೋಶಕ್ಕೂ ಕಾರಣವಾಗಿದೆ. ಡಿಸಿ ಸಿಂಧೂರಿ ಅವರು  ಕಳೆದ ಸೋಮವಾರವಷ್ಟೆ  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ  ಆಕ್ಸಿಜನ್‌ಕೊರತೆಯಿಂದಾಗಿ  ಮೃತಪಟ್ಟ 24 ಸೋಂಕಿತರ ಸಾವಿಗೆ ಪರೋಕ್ಷ ಕಾರಣ ಎಂಬ ಆರೋಪಗಳು ಬಂದಿದ್ದವು.  ಇವರು  ಚಾಮರಾಜನಗರಕ್ಕೆ ಸರಬರಾಜು ಆಗುವ ಆಕ್ಸಿಜನ್‌ನ ಮರುಭರ್ತಿ ಕೇಂದ್ರಕ್ಕೆ ಮೌಖಿಕ ಸೂಚನೆ ಕೊಟ್ಟು ತಾವು ತಿಳಿಸಿದರಷ್ಟೆ  ಆಕ್ಸಿಜನ್‌ಸರಬರಾಜು ಮಾಡಬೇಕು ಎಂದು ಹೇಳಿದ್ದಕ್ಕಾಗಿಯೇ  ಅಕ್ಸಿಜನ್‌ಸರಬರಾಜು ವಿಳಂಬವಾಯಿತು ಎಂಬ ಆರೋಪಗಳು ಕೇಳಿ ಬಂದಿದ್ದವು. ಆಗ  ಗದ್ಗದಿತರಾಗಿ ಮಾತನಾಡಿದ್ದ ಡಿ.ಸಿ ಸಿಂಧೂರಿ ಅವರು ತಾವು ಸರಬರಾಜು ಮಾಡಿದ ಆಕ್ಸಿಜನ್‌ಸಮಯ ಹಾಗೂ ಸಿಲಿಂಡರ್‌ಸಂಖ್ಯೆಗಳ ರಸೀತಿಯನ್ನೇ ಮಾಧ್ಯಮದವರ ಮುಂದಿಟ್ಟು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದರು.

ಇದೀಗ ಜಿಲ್ಲಾಧಿಕಾರಿಗಳ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿ ಬಂದಿರುವುದು ಇವರ ಕಾರ್ಯ ವೈಖರಿಯ ಬಗ್ಗೆಯೇ ಅನುಮಾನ ಮೂಡುವಂತೆ ಆಗಿದೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ  ಮಾಜಿ ನಗರಪಾಲಿಕೆ ಸದಸ್ಯ ಮತ್ತು ಜೆಡಿಎಸ್‌ಮುಖಂಡ ಕೆ ವಿ ಮಲ್ಲೇಶ್  ಜಿಲ್ಲಾಧಿಕಾರಿಗಳ  ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಫುಲ್, ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು  ಪ್ರಶ್ನಿಸಿದ್ದಾರೆ.

ಸ್ಮಿಮ್ಮಿಂಗ್ ಫುಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಲಾಗಿದೆ..? ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದ್ರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಕರೋನಾ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡ್ತೇನೆ ಅಂತಾ ಹೇಳ್ತೀರಾ. ಹಾಗಾದ್ರೆ ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತೆ. ಜನಪರವಾಗಿ ಚಿಂತಿಸುವ ಯಾರಾದ್ರು ಡಿಸಿಗಳು ಇಂತಹ ಕೆಲಸ ಮಾಡ್ತೀರಾ? ನಿಮಗೆ ನಿಜವಾಗಿಯೂ ಜನಪರ ಕಾಳಜಿ ಇಲ್ಲ. ಆರ್.ಟಿ.ಐ ಮೂಲಕ ಮಾಹಿತಿ ಬಯಸುವೆ ಎಂದು  ಹೇಳಿದ್ದಾರೆ.

 ಜನರಿಗೆ ಒಳ್ಳೆಯದು ಮಾಡಲು ಆಗಲ್ಲ ಅಂದ್ರೆ ಮೈಸೂರಿನಿಂದ ನಿರ್ಗಮಿಸಿ. ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡ್ರೂ ನಿಮ್ಮತ್ರ ಸೂಕ್ತ ಸ್ಪಂದನೆ ಸಿಗ್ತಾ ಇಲ್ಲ. ಸ್ಮಿಮ್ಮಿಂಗ್ ಫುಲ್ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದ್ದಾರೆ. ಇದಕ್ಕಾಗಿ 50 ಲಕ್ಷ ವೆಚ್ಚ ಮಾಡಿದ್ದಾರೆ ಅಂತ ಆರೋಪ ಬಂದಿದೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಆರೋಪಗಳಿಗೆ ಸೋಮವಾರ ಡಿಸಿ ಉತ್ತರ ಕೊಡುವ ನಿರೀಕ್ಷೆ ಇದೆ.

ಈ ನಡುವೆ ಸಾಂಸ್ಕೃತಿಕ ನಗರಿ ಮತ್ತು  ಜಿಲ್ಲೆಯಾದ್ಯಂತ ಹದಿನೈದು ದಿನದಿಂದಲೂ ಬೆರಳೆಣಿಕೆಯ ಕೆಲವೊಂದು ಚಟುವಟಿಕೆ ಹೊರತುಪಡಿಸಿ, ಉಳಿದ ಎಲ್ಲದಕ್ಕೂ ನಿರ್ಬಂಧವಿದ್ದರೂ (ಲಾಕ್ಡೌನ್) ಕರೋನಾ ವೈರಸ್ನ ಎರಡನೇ ಅಲೆಯ ತೀವ್ರತೆ ತಗ್ಗಿಲ್ಲ. ಸೋಂಕಿನ ಸರಪಳಿ ತುಂಡಾಗಿಲ್ಲ. ಇಂದಿಗೂ  ನಿತ್ಯ ಕೋವಿಡ್–19 ಪ್ರಕರಣಗಳು ಎರಡು ಸಾವಿರದಿಂದ ಮೂರು ಸಾವಿರದ ಆಸುಪಾಸಿನಲ್ಲೇ ದಾಖಲಾಗುತ್ತಿವೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವುದು ಮೈಸೂರು ನಗರ, ಜಿಲ್ಲೆಯಲ್ಲೇ. ಎರಡನೇ ಅಲೆಯ ಸೋಂಕು ನಗರಕ್ಕಷ್ಟೇ ಸೀಮಿತವಾಗದೆ, ಹಳ್ಳಿಯೂ ಹೆಚ್ಚಿದೆ. ಇದರ ಬೆನ್ನಿಗೆ ಸಾವಿನ ಸರಣಿಯೂ ಎಗ್ಗಿಲ್ಲದೇ ಮುಂದುವರಿದಿದೆ, ನಿತ್ಯವೂ ಎರಡಂಕಿ ತಲುಪುತ್ತಿದೆ.

ಸೋಂಕು ಹರಡುವಿಕೆಯ ವೇಗವನ್ನು ತಗ್ಗಿಸಲು ಹಾಗೂ ಸರಪಣಿಯನ್ನು ತುಂಡರಿಸಲು ಈ ಹದಿನೈದು ದಿನದ ಅವಧಿಯಲ್ಲಿ ಜಿಲ್ಲಾಡಳಿತ ಸರಣಿ ಸಭೆ ನಡೆಸಿದೆ. ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳು ಸತತವಾಗಿ ಸಭೆಗೆ ಹಾಜರಾಗಿ ಚರ್ಚಿಸಿದ್ದಾರೆ. ಹಲವು ಕ್ರಮ ಕೈಗೊಂಡಿರುವುದಾಗಿ ಹೇಳುತ್ತಿದ್ದಾರೆ. ಆದರೂ ವೈರಸ್ನ ತೀವ್ರತೆ ತಗ್ಗಿಲ್ಲ. ದಿನದಿಂದ ದಿನಕ್ಕೆ ಪಸರಿಸುವುದು ನಿಯಂತ್ರಣಕ್ಕೆ ಬಾರದಾಗಿದೆ ಎಂಬುದನ್ನು ಜಿಲ್ಲಾ ಕೋವಿಡ್ ವಾರ್ ರೂಂನ ಅಂಕಿ–ಅಂಶಗಳೇ ದೃಢಪಡಿಸುತ್ತಿವೆ. ‘ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆ ಸಕಾಲಕ್ಕೆ ಸಿಗುತ್ತಿಲ್ಲವಾಗಿದೆ. ಜಿಲ್ಲೆಯ ಪ್ರಮುಖ ಆಸ್ಪತ್ರೆಯಾದ ಕೆ.ಆರ್.ಆಸ್ಪತ್ರೆಯ ದ್ವಾರದಲ್ಲೇ ಈಗಾಗಲೇ ಹಲವು ಬಾರಿ ಹಾಸಿಗೆ ಭರ್ತಿಯ ನಾಮಫಲಕ ತೂಗು ಹಾಕಲಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿಗೆ ವೆಂಟಿಲೇಟರ್ ಸೌಲಭ್ಯ ಸಿಗಲಿಲ್ಲ.  ‘ವಯೋಸಹಜ ಅನಾರೋಗ್ಯದಿಂದ ನಮ್ಮ ತಾಯಿಯ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸವಾಯಿತು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದೆವು. ಮೂರು ದಿನ ಮೈಸೂರಿನ  ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಎಲ್ಲಿಯೂ ಹಾಸಿಗೆ ಸಿಗಲಿಲ್ಲ ಎಂದು ಕೋವಿಡ್ನಿಂದ ಮೃತಪಟ್ಟ ಸುಂದರವಲ್ಲಿ (72) ಎಂಬುವರ ಪುತ್ರ ಅನಿಲ್ ನೋವು ತೋಡಿಕೊಂಡರು. ‘ಆರಂಭದ ದಿನ ಕೋವಿಡ್ ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿತ್ತು. ಆದರೂ ಕೆ.ಆರ್.ಆಸ್ಪತ್ರೆಯ ವೈದ್ಯರು ಪರೀಕ್ಷಿಸಲೇ ಇಲ್ಲ. ನಮ್ಮಮ್ಮನನ್ನು ಕಾರಿನಿಂದ ಕೆಳಗಿಳಿಸಲಾಗಲಿಲ್ಲ. ಎಲ್ಲೆಡೆ ಅಲೆದರೂ ಪ್ರಯೋಜನವಾಗಲಿಲ್ಲ.’ಮೂರನೇ ದಿನ ಮತ್ತೊಮ್ಮೆ ಕೋವಿಡ್ ತಪಾಸಣೆ ಮಾಡಿಸಿದಾಗ ಪಾಸಿಟಿವ್ ಬಂತು. ಆಗಲೂ ಯಾವ ಆಸ್ಪತ್ರೆಯೂ ದಾಖಲಿಸಿಕೊಳ್ಳಲಿಲ್ಲ. ಕಾರಿನಲ್ಲೇ ನಮ್ಮಮ್ಮ ಪ್ರಾಣ ಬಿಟ್ಟರು. ಹಾಸಿಗೆ ಸಿಕ್ಕಿದ್ದರೆ ಬದುಕುತ್ತಿದ್ದರು. ಆದರೆ ಇಂದು ಆಸ್ಪತ್ರೆ, ಚಿಕಿತ್ಸೆ ಎನ್ನುವುದು ದುಡ್ಡಿದ್ದವರಿಗಷ್ಟೇ, ಪ್ರಭಾವಿಗಳಿಗಷ್ಟೇ ಎನ್ನುವಂತಾಗಿದೆ’ ಎಂದು ಅವರು ಕಣ್ಣೀರಿಟ್ಟರು.

ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಮೇ 8 ರ ಶನಿವಾರ ರಾತ್ರಿ 8 ಗಂಟೆಗಯ ಹೊತ್ತಿಗೆ 1,314ಕ್ಕೆ ತಲುಪಿದೆ. ಮೈಸೂರು ನಗರದಲ್ಲೇ ಸತ್ತವರ ಸಂಖ್ಯೆ ಹೆಚ್ಚಿಸಿದೆ. ಮೈಸೂರಿನಲ್ಲಿ 1028 ಜನರು ಕೋವಿಡ್ಗೆ ಬಲಿಯಾಗಿದ್ದರೆ, ಮೈಸೂರು ತಾಲ್ಲೂಕಿನಲ್ಲಿ 55 ಜನ ಮೃತಪಟ್ಟರೆ ನಂಜನಗೂಡು ತಾಲ್ಲೂಕಿನಲ್ಲಿ 58 ಜನರು ಮೃತಪಟ್ಟಿದ್ದಾರೆ. ಟಿ .ನರಸೀಪುರ ತಾಲ್ಲೂಕಿನಲ್ಲಿ 48 ಜನರು, ಹುಣಸೂರು, ಕೆ.ಆರ್.ನಗರದಲ್ಲಿ ತಲಾ 41, ಹೆಚ್.ಡಿ.ಕೋಟೆಯಲ್ಲಿ 25, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 18 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಅಂಕಿ–ಅಂಶಗಳು ತಿಳಿಸಿವೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...