ರಾಜ್ಯದಲ್ಲಿ ಕರೋನಾ ಮಹಾಮಾರಿಯ ಹಟ್ಟಹಾಸ ಹೆಚ್ಚುತ್ತಿದ್ದು, ಮತ್ತೆ ಲಾಕ್‌ಡೌನ್ ಅವಧಿಯನ್ನು ರಾಜ್ಯ ಸರ್ಕಾರ ಮುಂದುವರೆಸಿದೆ. ಮೇ 10 ರಿಂದ 14 ದಿನಗಳ ಕಾಲ ಲಾಕ್‌ಡೌನ್ ಮುಂದುವರೆದಿದ್ದು, ರಸ್ತೆ, ಅಂಗಡಿ ಮುಂಗಟ್ಟುಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಈ ನಿಟ್ಟಿನಲ್ಲಿ ನವರಸ ನಾಯಕ ಜಗ್ಗೇಶ್ ಟ್ವಿಟರ್ ಮೂಲಕ ಪೋಲಿಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಆರಕ್ಷಕಇಲಾಖೆಯ ಮುಖ್ಯಸ್ತರಿಗೆ ವಿನಂತಿ. ಸರ್ಕಾರ ಹಾಗು ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿಮಾಡಿ ತೊಂದರೆ ಇಲ್ಲಾ, ಆದರೆ ನಿರ್ದಯವಾಗಿ ಲಾಟಿಯಲ್ಲಿ ಹೊಡೆಯಬೇಡಿ ಎಂದಿದ್ದಾರೆ.

ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ, ಆದರೆ ವಯಸ್ಸಾದವರು ಪಾಪ ಯಾವ ಖಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆಯೇ, ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣಹೋಗುವಂತೆ ಭಾರಿಸುತ್ತಾರೆ,, ಈ ಹಾಳಾದ ಕೊರೋನ ಮನುಕುಲದ ಅನ್ನ ದುಡಿಮೆ ನೆಮ್ಮದಿಯ ಕಸಿದಿದೆ ಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸೋಣ, ಜನತೆಯಲ್ಲು ಮನವಿ ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ, ದರೆಯೇ ಹತ್ತಿ ಉರಿಯುತ್ತಿದೆ ದಯಮಾಡಿ ಸ್ವಲ್ಪದಿನ ವೈಧ್ಯಲೋಕದ ಮಾತಿನಂತೆ ಕೆಲತಿಂಗಳು ಎಚ್ಚರವಾಗಿ ಇದ್ದುಬಿಡಿ ಎಂದು ವಿನಂತಿಸಿಕೊಂಡಿದ್ದಾರೆ.