• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, June 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಕೃಷಿ ಕಾಯ್ದೆ ವಾಪಸ್: ಮೋದಿ ದಾಳಕ್ಕೆ ಮಣಿಯದ ರೈತ ನಾಯಕರು!

Shivakumar by Shivakumar
November 20, 2021
in ಅಭಿಮತ, ಕರ್ನಾಟಕ, ದೇಶ
0
ಕೃಷಿ ಕಾಯ್ದೆ ವಾಪಸ್: ಮೋದಿ ದಾಳಕ್ಕೆ ಮಣಿಯದ ರೈತ ನಾಯಕರು!
Share on WhatsAppShare on FacebookShare on Telegram

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವರ್ಷ ಪೂರ್ತಿ ಸಮರ್ಥಿಸಿಕೊಂಡು, ಆ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಮಾಡಿದ ರೈತರನ್ನು ಭಯೋತ್ಪಾದಕರು ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಪಕ್ಷ, ಇದೀಗ ದಿಢೀರನೇ ಯೂ ಟರ್ನ್ ಹೊಡೆದು, ರೈತ ಪರ ಕಾಳಜಿಯ ಮಂತ್ರ ಪಠಿಸುತ್ತಿದ್ದಾರೆ.

ADVERTISEMENT

ಹಾಗೇ ರೈತಪರವಾದ ಮತ್ತು ರೈತರ ಬದುಕು ಸುಧಾರಣೆಯ ಗುರಿ ಹೊಂದಿದ್ದ ಮೂರು ಕೃಷಿ ಕಾಯ್ದೆಗಳ ಕುರಿತು ದೇಶದ ಕೆಲವು ರೈತರಿಗೆ ಮನವರಿಕೆ ಮಾಡುವಲ್ಲಿ ತಾವು ಸೋತಿದ್ದಾಗಿ ಹೇಳಿಕೊಂಡಿರುವ ಮೋದಿಯವರು, ಆ ಹಿನ್ನೆಲೆಯಲ್ಲಿ ವಿವಾದಿತ ಕಾಯ್ದೆಗಳನ್ನು ವಾಪಸು ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ದೇಶದ ಬಹುಸಂಖ್ಯಾತ ಸಮುದಾಯವಾದ ಕೃಷಿಕರ ವಿಶ್ವಾಸ ಗಳಿಸುವಲ್ಲಿ ತಾವು ವಿಫಲರಾಗಿರುವುದಾಗಿ ಪರೋಕ್ಷವಾಗಿ ಅವರು ಒಪ್ಪಿಕೊಂಡಂತಾಗಿದೆ.

ಇಂತಹ ವಿಶ್ವಾಸವಿಲ್ಲದ ಅಪನಂಬಿಕೆಯ ಕಾರಣಕ್ಕಾಗಿಯೇ ರೈತ ಹೋರಾಟದ ನೇತೃತ್ವದ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು, ಪ್ರಧಾನಿಯವರು ಏನೇ ಹೇಳಿದರೂ ಅಧಿಕೃತವಾಗಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಸಂಬಂಧ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸುವವರೆಗೆ ತಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೋರಾಟ ಯಥಾ ಪ್ರಕಾರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಆ ಮೂಲಕ ದೇಶದ ಪ್ರಧಾನಮಂತ್ರಿಗಳ ಆಶ್ವಾಸನೆ, ಭರವಸೆಗಳನ್ನೇ ನೆಚ್ಚಿ ತಾವು ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದ್ದು, ರೈತ ನಾಯಕರ ಈ ನಿಲುವು, ಪ್ರಧಾನಿ ಮೋದಿಯವರ ವಿಶ್ವಾಸ ಮತ್ತು ನಂಬಿಕೆಯ ವಿಷಯಕ್ಕೆ ತಾಳೆಯಾಗಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಲ್ಲಿ ಒಬ್ಬೊರಾದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಮೂರು ವಿವಾದಿತ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಧಿಕೃತವಾಗಿ ರದ್ದುಪಡಿಸಿದ ಬಳಿಕವೇ ತಾವು ಹೋರಾಟ ಕೈಬಿಡುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಹೋರಾಟ ಕೇವಲ ಮೂರು ವಿವಾದಿತ ಕಾಯ್ದೆಗಳ ಕುರಿತಾಗಿ ಮಾತ್ರವಲ್ಲ; ಕನಿಷ್ಟ ಬೆಂಬಲ ಬೆಲೆ(ಎಂಎಸ್ ಪಿ) ಕುರಿತ ಕಾಯ್ದೆ ಜಾರಿಯಾಗಬೇಕು ಎಂಬುದು ಕೂಡ ತಮ್ಮ ಪ್ರಮುಖ ಬೇಡಿಕೆ. ಹಾಗಾಗಿ ಮೂರು ಕಾಯ್ದೆಗಳನ್ನು ವಾಪಸ್ ಪಡೆದ ಮಾತ್ರಕ್ಕೆ ರೈತರ ಬೇಡಿಕೆಗಳೆಲ್ಲಾ ಈಡೇರಿಬಿಟ್ಟಿವೆ ಎಂದೇನಲ್ಲ ಎಂದು ಟಿಕಾಯತ್ ಹೇಳಿದ್ದಾರೆ.

ಟಿಕಾಯತ್ ಅವರ ಈ ಮಾತುಗಳ ಬೆನ್ನಲ್ಲೇ, ರೈತ ಹೋರಾಟದ ಒಂದು ವರ್ಷಾಚರಣೆಯ ಹಿನ್ನೆಲೆಯಲ್ಲಿ ನವೆಂಬರ್ 29ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನದಿಂದ ಪ್ರತಿ ದಿನವೂ ಸಂಸತ್ ಭವನಕ್ಕೆ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ತಮ್ಮ ಈ ಮೊದಲಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈತ ನಾಯಕರು ಸ್ಪಷ್ಟಪಡಿಸಿದ್ದಾರೆ. ಹಾಗೇ ಟಿಕ್ರಿ ಮತ್ತು ಇತರೆ ದೆಹಲಿ ಗಡಿ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಿಂದ ಬೀಡುಬಿಟ್ಟಿರುವ ರೈತರು ಎಂದಿನಂತೆ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ಸಂಸತ್ತಿನಲ್ಲಿ ಅಧಿಕೃತವಾಗಿ ಮೂರು ಕಾಯ್ದೆಗಳನ್ನು ರದ್ದುಮಾಡುವವರೆಗೆ ಹೋರಾಟದ ಸ್ವರೂಪದಲ್ಲಾಗಲೀ, ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಯೋಜಿಸಿರುವ ರ್ಯಾಲಿಗಳಾಗಲೀ ಯಾವುದೂ ಬದಲಾಗದು ಎಂದು ಶನಿವಾರ ಹೇಳಿದ್ದಾರೆ.

ಹಾಗೇ ನವೆಂಬರ್ 26ರಂದು ಹೋರಾಟ ಆರಂಭದ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೆಹಲಿ ಗಡಿಯಲ್ಲಿ ಹಮ್ಮಿಕೊಂಡಿರುವ ರೈತ ಶಕ್ತಿ ಪ್ರದರ್ಶನದ ಪ್ರತಿಭಟನೆಯ ನಿರ್ಧಾರದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದೂ ಹೋರಾಟಗಾರರು ಹೇಳಿದ್ದಾರೆ.

ಈ ನಡುವೆ, ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವ ಮೋದಿಯವರ ಹೇಳಿಕೆಯಲ್ಲಿ ತಮಗೆ ನಂಬಿಕೆಯೂ ಇಲ್ಲ. ಈ ಹಿಂದೆ ಅವರು ಯೋಧರ ವೇತನದ ವಿಷಯದಲ್ಲಿ(ಒನ್ ರ್ಯಾಂಕ್ ಒನ್ ಪೆನ್ಷನ್) ಕೂಡ ಇಂತಹದ್ದೇ ಭರವಸೆಗಳನ್ನು ನೀಡಿ ದೇಶ ಕಾಯುವ ಯೋಧರನ್ನೂ, ದೇಶದ ಜನರನ್ನು ಯಾಮಾರಿಸಿದ್ದಾರೆ. ಹಾಗಾಗಿ ಅವರ ಮಾತಿನ ಮೇಲೆ ನಂಬಿಕೆ ಇಲ್ಲ, ಸಂಸತ್ತಿನಲ್ಲಿ ಕಾಯ್ದೆಗಳು ರದ್ದಾಗಿ ಅಧಿಕೃತ ಆದೇಶ ಹೊರಬಿದ್ದ ಬಳಿಕವೂ ತಮ್ಮ ಹೋರಾಟದ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ರೈತ ನಾಯಕ ಸುದೇಶ್ ಗೋಯತ್ ಹೇಳಿದ್ದಾರೆ. ಈ ಮಾತುಗಳಿಗೆ ದನಿಗೂಡಿಸಿರುವ ಮತ್ತೊಬ್ಬ ರೈತ ನಾಯಕ ಯಧುವೀರ್ ಸಿಂಗ್ ಕೂಡ “ಹೋರಾಟದ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಈ ಮೊದಲೇ ಪೂರ್ವನಿರ್ಧಾರಿತವಾದಂತೆ ಭಾನುವಾರ, ಹೋರಾಟದ ವರ್ಷಾಚರಣೆಯ ಕುರಿತ ರೈತ ನಾಯಕರ ಸಮಾಲೋಚನಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು” ಎಂದೂ ಹೇಳಿದ್ದಾರೆ.

ಒಟ್ಟಾರೆ, ರೈತ ಹೋರಾಟದ ಬಿಸಿ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಬಾರೀ ಬಿಸಿಯೇರಿಸಲಿದೆ. ಮತ್ತು  ರಾಜಧಾನಿ ಅಧಿಕಾರದ ಪಡಸಾಲೆಯಲ್ಲಿ ಏಳಬಹುದಾದ ಆ ಬಿಸಿ ಇನ್ನೇನು ಚುನಾವಣೆಗೆ ತಯಾರಾಗುತ್ತಿರುವ ಬಿಜೆಪಿ ಹಿಂದುತ್ವ ಬ್ರಾಂಡ್ ರಾಜಕಾರಣದ ಪ್ರಯೋಗಶಾಲೆ ಉತ್ತರಪ್ರದೇಶ ಮತ್ತು ರೈತರ ಹೋರಾಟದ ಕುದಿನೆಲ ಪಂಜಾಬಿನಲ್ಲಿ ಭರ್ಜರಿ ಕಾಳ್ಗಿಚ್ಚನ್ನೇ ಹೊತ್ತಿಸುವ ಸೂಚನೆ ನೀಡಿದೆ. ಆ ಕಾಳ್ಗಿಚ್ಚಿನ ಭೀತಿಯಲ್ಲೇ ಮೋದಿಯವರು ಬೆಚ್ಚಿಬಿದ್ದಿದ್ದಾರೆ. ಹಾಗೆ ಬೆಚ್ಚಿದ್ದರಿಂದಲೇ ದಿಢೀರನೇ ಕೃಷಿ ಕಾಯ್ದೆ ರದ್ದು ಘೋಷಣೆಯ ಮೂಲಕ ಚುನಾವಣಾ ಕಣದಲ್ಲಿ ಎದ್ದಿರುವ ಬಿರುಗಾಳಿಯನ್ನು ಶಮನ ಮಾಡುವ ಯತ್ನ ಮಾಡಿದ್ದಾರೆ.

ಆದರೆ, ರೈತ ನಾಯಕರು ಮೋದಿಯವರ ನಿರೀಕ್ಷೆಯಂತೆ ಕಾಯ್ದೆ ವಾಪಸ್ಸಿನ ನಿರ್ಧಾರಕ್ಕೆ ಸ್ಪಂದಿಸುವ ಬದಲಾಗಿ ಎಂದಿನಂತೆ ಹೋರಾಟ ಮುಂದುವರಿಸುವ ಮಾತನಾಡಿದ್ದಾರೆ. ಜೊತೆಗೆ, ಚುನಾವಣಾ ಹೊಸ್ತಿಲಲ್ಲಿರುವ ಉತ್ತರಪ್ರದೇಶದಲ್ಲಿ ತಮ್ಮ ರೈತ ಮಹಾ ಪಂಚಾಯತ್ ಮತ್ತೆ ಪುರಾರಂಭಿಸುವ ಮಾತುಗಳನ್ನೂ ಆಡಿದ್ದಾರೆ. ಸಹಜವಾಗೇ ರೈತ ನಾಯಕರ ಈ ನಿಲುವು ಪ್ರಧಾನಿ ಮೋದಿ ಮತ್ತು ಆಡಳಿತ ಪಕ್ಷ ಬಿಜೆಪಿಯಲ್ಲಿ ಸೃಷ್ಟಿಸಲಿರುವ ತಳಮಳ ಕುತೂಹಲ ಹುಟ್ಟಿಸಿದೆ.

Tags: ಉತ್ತರಪ್ರದೇಶಕೃಷಿ ಕಾಯ್ದೆಪಂಜಾಬ್ಪ್ರಧಾನಿ ಮೋದಿಯಧುವೀರ್ ಸಿಂಗ್ರಾಕೇಶ್ ಟಿಕಾಯತ್ರೈತ ಹೋರಾಟಸಂಯುಕ್ತ ಕಿಸಾನ್ ಮೋರ್ಚಾ
Previous Post

ಇಡೀ ವರ್ಷ ಬೀಳುವ ಮಳೆ ಅಕ್ಟೋಬರ್ ಒಂದೇ ತಿಂಗಳಲ್ಲಿ ಬಿದ್ದು ಅನೇಕ ಬೆಳೆಗಳು ನಾಶವಾಗಿದೆ – ಆರ್. ಆಂಜನೇಯ ರೆಡ್ಡಿ

Next Post

ಮೀನುಗಾರಿಕೆ ವೇಳೆ ಕಾಣಿಸಕೊಂಡ ಬೃಹತ್‌ ತಿಮಿಂಗಿಲ!

Related Posts

ಯಾರ ಒತ್ತಡಕ್ಕೂ ಮಣಿಯಬೇಡಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ : ಸಿಎಂ ಡಿಕೆಶಿ ಖಡಕ್‌ ಸೂಚನೆ
Top Story

ಯಾರ ಒತ್ತಡಕ್ಕೂ ಮಣಿಯಬೇಡಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ : ಸಿಎಂ ಡಿಕೆಶಿ ಖಡಕ್‌ ಸೂಚನೆ

by ಪ್ರತಿಧ್ವನಿ
June 4, 2026
0

ಬೆಂಗಳೂರು : ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು...

Read moreDetails
ಖಾತೆಗಾಗಿ ಪಟ್ಟು ಹಿಡಿದ “ಕೈ” ಹಿರಿಯ ಸಚಿವ : ಆರಂಭದಲ್ಲೇ ಸಿಎಂ ಡಿಕೆಶಿಗೆ ಹೊಸಟೆನ್ಷನ್..!

ಖಾತೆಗಾಗಿ ಪಟ್ಟು ಹಿಡಿದ “ಕೈ” ಹಿರಿಯ ಸಚಿವ : ಆರಂಭದಲ್ಲೇ ಸಿಎಂ ಡಿಕೆಶಿಗೆ ಹೊಸಟೆನ್ಷನ್..!

June 4, 2026
ಸಚಿವ ಎಂ ಬಿ ಪಾಟೀಲ್ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ : ಕೈ ಹಿರಿಯ ನಾಯಕನಿಗೆ ಆಶೀರ್ವಾದ..!

ಸಚಿವ ಎಂ ಬಿ ಪಾಟೀಲ್ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ : ಕೈ ಹಿರಿಯ ನಾಯಕನಿಗೆ ಆಶೀರ್ವಾದ..!

June 4, 2026
ಬತ್ತಿ ಹೋಯ್ತು ಡಾಕ್ಟರ್‌ ಆಗುವ ಕನಸು : NEET ವಿದ್ಯಾರ್ಥಿನಿ ಆಕಾಂಕ್ಷಾ ಆತ್ಮಹತ್ಯೆಗೆ ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

ಬತ್ತಿ ಹೋಯ್ತು ಡಾಕ್ಟರ್‌ ಆಗುವ ಕನಸು : NEET ವಿದ್ಯಾರ್ಥಿನಿ ಆಕಾಂಕ್ಷಾ ಆತ್ಮಹತ್ಯೆಗೆ ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

June 4, 2026
ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ : KPCC ಪಟ್ಟ ಕರುಣಿಸಿದ ಹೈಕಮಾಂಡ್‌ಗೆ ಹರಿಪ್ರಸಾದ್‌ ಥ್ಯಾಂಕ್ಸ್‌…!

ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ : KPCC ಪಟ್ಟ ಕರುಣಿಸಿದ ಹೈಕಮಾಂಡ್‌ಗೆ ಹರಿಪ್ರಸಾದ್‌ ಥ್ಯಾಂಕ್ಸ್‌…!

June 4, 2026
Next Post
ಮೀನುಗಾರಿಕೆ ವೇಳೆ ಕಾಣಿಸಕೊಂಡ ಬೃಹತ್‌ ತಿಮಿಂಗಿಲ!

ಮೀನುಗಾರಿಕೆ ವೇಳೆ ಕಾಣಿಸಕೊಂಡ ಬೃಹತ್‌ ತಿಮಿಂಗಿಲ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada