ಶನಿವಾರ ಮುಂಜಾನೆ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ಪ್ರದೇಶದಿಂದ ತಾಲಿಬಾನ್ 150 ಕ್ಕೂ ಹೆಚ್ಚು ಜನರನ್ನು, ಬಹುತೇಕ ಭಾರತೀಯರನ್ನು ಒಳಗೊಂಡ ತಂಡವನ್ನ ತಾಲಿಬಾನ್ ಅಪಹರಿಸಿದೆ. ತನ್ನ ಪತ್ನಿ ಮತ್ತು ಇತರ ಕೆಲವರೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ವ್ಯಕ್ತಿಯೊಬ್ಬರು ಅಪಹರಣಕ್ಕೊಳಗಾದವರಲ್ಲಿ ಕೆಲವು ಅಫ್ಗಾನ್ ನಾಗರಿಕರು ಮತ್ತು ಅಫ್ಘಾನ್ ಸಿಖ್ಖರೂ ಸೇರಿದ್ದಾರೆ ಆದರೆ ಅವರಲ್ಲಿ ಹೆಚ್ಚಿನವರು ಭಾರತೀಯ ನಾಗರಿಕರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವರದಿಯ ಸತ್ಯಾಸತ್ಯತೆಯನ್ನು ಅರಿಯಲು ಹೊಸದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯು ಪ್ರಯತ್ನಿಸುತ್ತಿದೆ. ತಾಲಿಬಾನ್ ಅಧಿಕಾರಿಗಳು ಕಾಬೂಲ್ ವಿಮಾನ ನಿಲ್ದಾಣಕ್ಕೆ ಮಧ್ಯರಾತ್ರಿ 1 ಗಂಟೆಗೆ ಮಿನಿವ್ಯಾನ್‌ಗಳಲ್ಲಿ ತೆರಳುತ್ತಿದ್ದಾಗ ಜನರನ್ನು ಅಪಹರಿಸಿರಬಹುದು ಎಂದು ಮೂಲಗಳು ತಿಳಿಸಿವೆ. ಸಹಕಾರದ ಕೊರತೆಯಿಂದಾಗಿ ಅವರು ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಸಾಧ್ಯವಾಗದಿದ್ದಾಗ, ತಾಲಿಬಾನ್ ಅವರೆಲ್ಲರನ್ನು ರಾಜಧಾನಿ ಕಾಬೂಲ್‌ನ ಪೂರ್ವ ಪ್ರದೇಶವಾದ ತಾರಖಿಲ್‌ಗೆ ದೈಹಿಕವಾಗಿ ಹಲ್ಲೆ ನಡೆಸಿದ ನಂತರ ಕರೆದೊಯ್ಯಿತುಎಂದು ತಿಳಿದು ಬಂದಿದೆ. ತಾಲಿಬಾನ್ ಪ್ರಯಾಣಿಕರನ್ನು ಬೇರೆ ಗೇಟ್ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವುದಾಗಿ ಪ್ರಯಾಣಿಕರಿಗೆ ತಿಳಿಸಿತ್ತು ಆದರೆ ಅವರ ಇರುವಿಕೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
,