• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಕಣ್ಮುಚ್ಚಿ ಕುಳಿತಿರುವ ಸರ್ಕಾರ ಕೂಡಲೇ ಸಹಾಯಧನ ಬಿಡುಗಡೆ ಮಾಡಿ – ಎಎಪಿ ಅಗ್ರಹ..

ಪ್ರತಿಧ್ವನಿ by ಪ್ರತಿಧ್ವನಿ
April 18, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಬಡ ಆಟೋ ಚಾಲಕರ ಕುಟುಂಬಗಳಿಗೆ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷವು ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.

ADVERTISEMENT
Tamil Nadu Polls :ಎಲ್ಲಾ ಫ್ರೀ ಕೊಟ್ರೆ ತಮಿಳುನಾಡೇ ನಾಶವಾಗುತ್ತೆ.. #pratidhvani

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಕೊಲ್ಲಿ ಯುದ್ಧದ ಪರಿಣಾಮದಿಂದ ಎಲ್ ಪಿ ಜಿ ಬಂಕ್ ಗಳಲ್ಲಿ ಸಾಕಷ್ಟು ಅನಿಲ ಕೊರತೆ ಉಂಟಾಗಿದೆ. ಆಟೋ ಚಾಲಕರುಗಳು ಪ್ರತಿ ದಿವಸದ ತಮ್ಮ ದುಡಿಮೆಗೆ ಕೊಡಲಿ ಏಟು ಬಿದ್ದಿದೆ. ಚಾಲಕರುಗಳು ದೈನಂದಿನ ತಮ್ಮ ಸಂಸಾರಗಳನ್ನು ನಡೆಸಲಾಗದೆ ಬೀದಿಗೆ ಬೀಳುತ್ತಿದ್ದಾರೆ. ಈ ದುಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಉಪಚುನಾವಣೆ ಹಾಗೂ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯದಲ್ಲಿ ಆಟೋ ಚಾಲಕರುಗಳ ಸಂಕಷ್ಟಗಳನ್ನು ಅರಿಯದೆ ಕಣ್ಮುಚ್ಚಿ ಕುಳಿತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಅನೇಕ ಸಮಾಜ ಸೇವಕರುಗಳು, ಚಿತ್ರನಟರುಗಳು ಮುಂದೆ ಬಂದು ತಮ್ಮ ಕೈಲಾದಷ್ಟು ಚಾಲಕರುಗಳಿಗೆ ನೆರವನ್ನು ನೀಡುತ್ತಿದ್ದಾರೆ. ಆದರೆ ಸರ್ಕಾರವು ಈ ಕಡೆ ಗಮನವನ್ನೇ ಹರಿಸುತ್ತಿಲ್ಲ. ಅನೇಕ ಆಟೋ ಸಂಘಟನೆಗಳು ಮನವಿಗಳನ್ನು ನೀಡಿದ್ದಾರೆ ಹಾಗೂ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೂ ಸಹ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಕಣ್ಣು, ಕಿವಿ ಕೇಳಿಸದಂತಾಗಿದೆ. ಕೂಡಲೇ ಸಂಕಷ್ಟದಲ್ಲಿರುವ ಈ ಆಟೋ ಚಾಲಕ ವರ್ಗಕ್ಕೆ ಕೂಡಲೇ 15000 ರೂ. ಗಳ ಸಹಾಯಧನವನ್ನು ಬಿಡುಗಡೆ ಮಾಡಬೇಕು . ಈ ಮೂಲಕ ಲಕ್ಷಾಂತರ ಚಾಲಕ ಕುಟುಂಬಗಳಿಗೆ ಕೂಡಲೇ ನೆರವಾಗಬೇಕು  ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಲುಪಿಸಿದ್ದೇವೆ. ಈ ಬಗ್ಗೆ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ. ಸರ್ಕಾರವು ಕಾಳಸಂತೆ ಕೋರರಿಗೆ ಕೋಟ್ಯಾಂತರ ಹಣವನ್ನು ಲೂಟಿ ಮಾಡುವುದಕ್ಕೆ ಬಿಟ್ಟು ಕಣ್ಮುಚ್ಚಿ ಕುಳಿತಿದೆ. ಯಾರ ಮೇಲೂ ಸಹ ಇದುವರೆಗೂ ಕಠಿಣ ಕ್ರಮವನ್ನು ತೆಗೆದುಕೊಂಡಿಲ್ಲ. ಸರ್ಕಾರದ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿರುವುದು ಸರ್ಕಾರದ ದಿವಾಳಿ ತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

Kota Srinivas Poojary : ಮೋದಿ ಕ್ರೆಡಿಟ್‌ ನೀವೇ ತಗೊಳ್ಳಿ ಅಂತ ಹೇಳಿದ್ರು..! #rahulgandhi #pmmodi

ಸರ್ಕಾರದ ಈ ರೀತಿಯ ಬೇಜವಾಬ್ದಾರಿ ಹಾಗೂ ನಿರ್ಲಜ್ಜ ಧೋರಣೆಯಿಂದ ಚಾಲಕರುಗಳು ಬೀದಿಗಿಳಿದು ಹೋರಾಟ ಮಾಡುವಂತಹ ಸಂದರ್ಭ ಬಂದಿದೆ. ಲಕ್ಷಾಂತರ ಆಟೋ ಚಾಲಕ ವರ್ಗಗಳ ಕೋಪಕ್ಕೆ ಗುರಿಯಾಗಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ. ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರ ಸಹಾಯಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿವಿಧ ಆಟೋ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಪಕ್ಷದ ಮುಖಂಡರುಗಳಾದ ಜಗದೀಶ್ ಚಂದ್ರ, ಲಕ್ಷ್ಮಿಕಾಂತ್ ರಾವ್, ಜಗದೀಶ್ ವಿ ಸದಂ, ಸಂಚಿತ್ ಸೆಹ್ವಾನಿ, ಉಷಾ ಮೋಹನ್, ಪುಟ್ಟಣ್ಣ ಗೌಡ, ಇರ್ತಾದ್, ಶಶಿಧರ್ ಆರಾಧ್ಯ, ಮುನೇಶ್ ಕುಮಾರ್, ಚೆನ್ನಪ್ಪ ಗೌಡ ಸೇರಿದಂತೆ ಅನೇಕ ಮುಖಂಡರುಗಳಾಗು ಕಾರ್ಯಕರ್ತರುಗಳು ಭಾಗವಹಿಸಿದ್ದರು.

Tags: Aam Aadmi PartyArvind KejriwalAuto Rikshaw Driversby-electionsCM SiddaramaiahCNGCongresss KarnatakaDCM DK ShivakumarGas ProblemKarnataka GovernmentLngLPGMiddle East TentionsNarendra ModiPratidhvaniSeetaram gundappa
Previous Post

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

Next Post

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

Related Posts

The Controversy Surrounding the NICE Project: A Brief Overview
Top Story

ನೈಸ್ ಯೋಜನೆ ಸುತ್ತಲಿನ ವಿವಾದ: ಒಂದು ಸಂಕ್ಷಿಪ್ತ ಕಿರುನೋಟ | NICE

by ಪ್ರತಿಧ್ವನಿ
September 29, 2026
0

ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್‌ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು...

Read moreDetails
Parents sell their one-month-old infant to buy gold jewelry and a smartphone

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

September 29, 2026
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
How to change the mobile number linked to FASTag

`ಫಾಸ್ಟ್‌ ಟ್ಯಾಗ್’ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | FASTag

September 29, 2026
Next Post
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada