ಬಳ್ಳಾರಿ : ಸೈನಿಕರ ಪ್ಯಾರಾಚೂಟ್ ತರಬೇತಿ ವೇಳೆ ಅವಘಡ ಸಂಭವಿಸಿದ್ದು, 50 ಅಡಿ ಎತ್ತರದಿಂದ ಬಿದ್ದು ಇಬ್ಬರು ಸೈನಿಕರು ಗಾಯಗೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ನಗರದ ಹೊರವಲಯದ ಪಿ.ಡಿ ಹಳ್ಳಿ ಭಾಗದಲ್ಲಿ ಸೈನಿಕರಿಗೆ ತರಬೇತಿ ನೀಡುತ್ತಿದ್ದ ಈ ವೇಳೆ ಅವಘಡ ಸಂಭವಿಸಿದೆ.

ಈ ಅವಘಡದಲ್ಲಿ ತರಬೇತಿ ನಿರತ ಸೇನಾ ಸಿಬ್ಬಂದಿ ಚಿನ್ನರಾಜ್ (25) ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಇಬ್ಬರಿಗೂ ಕಾಲಿನ ಮೂಳೆ ಮುರಿದು ಗಂಭೀರ ಗಾಯಗಳಾಗಿವೆ.
ಇಂದು ಬೆಳಿಗ್ಗೆ 417 ಸೈನಿಕರು ಪ್ಯಾರಾಚೂಟ್ ಧರಿಸಿ ಆಕಾಶದಿಂದ ಜಿಗಿದಿದ್ದರು. ಹೀಗೆ ತರಬೇತಿ ನಡೆಯುತ್ತಿತ್ತು. ಈ ವೇಳೆ ಪ್ಯಾರಾಚೂಟ್ ನಿಂದ ಇಬ್ಬರು ತರಬೇತಿ ನಿರತ ಸೈನಿಕರು ಕೆಳಕ್ಕೆ ಬಿದ್ದಿದ್ದಾರೆ. ಈ ಅವಘಢ ಸಂಭವಿಸುತ್ತಿದ್ದಂತೆಯೇ ತಕ್ಷಣ ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಗಂಭೀರ ಗಾಯದ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಗಾಯಾಳು ಸೈನಿಕರನ್ನು ನಗರದ ಐಟಿಐ ಕಾಲೇಜು ಮೈದಾನದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಘಟನೆಯ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.






