ಬೀದರ್:ಮಾ.15: ಬೈಕ್‍ಗಳ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 70 ಕೆ.ಜಿ.ಗಾಂಜಾ ಪೊಲೀಸರು ಔರಾದ್ ತಾಲೂಕಿನ ವಡಗಾಂವ್-ಜಮಗಿ ರಸ್ತೆಯ ಚಿಕ್ಲಿ(ಜೆ) ಕ್ರಾಸ್ ಬಳಿ ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಅಂದಾಜು ರೂ.9.80 ಲಕ್ಷ ಮೌಲ್ಯದ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು, ಪರಾರಿಯಾದ ಮೂವರು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದರು. ಖಚಿತ ಸುಳಿವಿನ ಮೇರೆಗೆ ಔರಾದ್ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‍ಐಗಳಾದ ಸುರೇಶ ಭಾವಿಮನಿ, ಉಪೇಂದ್ರಕುಮಾರ, ಸಿದ್ಧಲಿಂಗ, ಅಸಿಸ್ಟಂಟ್ ಹೆಡ್ ಕಾನ್‍ಸ್ಟೆಬಲ್ ಶಿವಕುಮಾರ, ಕಾನ್‍ಸ್ಟೆಬಲ್‍ಗಳಾದ ಅರುಣಸಿಂಗ್, ವೆಂಕಟ, ಜಾನೇಶ್ವರ, ನರಸಾರೆಡ್ಡಿ ಹಾಗೂ ಅರುಣ ಪಾಲ್ಗೊಂಡಿದ್ದರು. ತಂಡಕ್ಕೆ ಬಹುಮಾನ ಹಾಗೂ ಪ್ರಶಂಸೆ ಪತ್ರ ಕೊಡಲಾಗುವುದು ಎಂದು ಹೇಳಿದರು.
ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಇದ್ದರು.