ತಲೆಗೆ ಮಸಾಜ್ ಮಾಡುವುದರಿಂದ ದೈಹಿಕ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅದರಲ್ಲೂ ವಾರಕ್ಕೊಮ್ಮೆ ಅಥವಾ ಎರಡು ಬಾರಿಯಾದರೂ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ.. ಮಸಾಜ್ ಗೆ ಬಳಸುವಂತಹ ಎಣ್ಣೆ ಇಂ ಕೂದಲ ಬೆಳವಣಿಗೆಗೆ ಹಾಗೂ ಸ್ಕಾಲ್ಪ್ ಗು ಕೂಡ ತುಂಬಾನೇ ಒಳ್ಳೆಯದು.ಇದೆಲ್ಲದರ ಜೊತೆಗೆ ಬೇರೆ ಏನೆಲ್ಲಾ ಬೆನಿಫಿಟ್ಸ್ ಇದೆ ಎಂಬುವುದರ ಮಾಹಿತಿ ಇಲ್ಲಿದೆ..
ಟೆನ್ಶನ್ ಕಡಿಮೆಯಾಗುತ್ತದೆ
ಒತ್ತಡ ಹೆಚ್ಚಾದಾಗ ಅಥವಾ ಅತಿಯಾಗಿ ಟೆನ್ಶನ್ ಆದಾಗ ದೈಹಿಕ ಹಾಗೂ ಮಾನಸಿಕದ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಹೆಡ್ ಮಸಾಜ್ ಮಾಡಿ ಕೊಳ್ಳುವುದರಿಂದ ಟೆನ್ಶನ್ ಹಾಗೂ ಒತ್ತಡದಿಂದ ರಿಲ್ಯಾಕ್ಸ್ ಆಗುತ್ತದೇ.
ಮೈಗ್ರೇನ್ ನಿವಾರಣೆ
ಹೆಚ್ಚು ಜನ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೈಗ್ರೇನ್ ಕಾಣಿಸಿಕೊಂಡಾಗ ಯಾವುದರ ಮೇಲು ಆಸಕ್ತಿ ಇರುವುದಿಲ್ಲ. ಕಣ್ಣು ನೋವು ಸುಸ್ತು ಎಲ್ಲವೂ ಕೂಡ ಕಾಡುತ್ತದೆ. ಹೀಗಿದ್ದಾಗ ಹೆಡ್ ಮಸಾಜ್ ಮಾಡಿಸಿ ಕೊಳ್ಳುವುದರಿಂದ ರಿಲ್ಯಾಕ್ಸೇಶನ್ ಜೊತೆಗೆ ಮೈಗ್ರೇನ್ ಕೂಡ ಕಡಿಮೆಯಾಗುತ್ತದೆ.
ನಿದ್ದೆ
ಕೆಲವೊಬ್ಬರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ, ರಾತ್ರಿ ಮಲಗಿದ ಸಂದರ್ಭದಲ್ಲಿ ಪದೇಪದೇ ಎಚ್ಚರವಾಗುವಂತದ್ದು, ಅರ್ಧಂಬರ್ಧ ನಿದ್ರೆ ಆಗುವಂಥದ್ದು ಜಾಸ್ತಿ ಇರುತ್ತದೆ. ಅಂತವರು ರಾತ್ರಿ ಮಲಗುವ ಮುನ್ನ ತಲೆಗೆ ಮಸಾಜ್ ಮಾಡಿಕೊಂಡು ಮಲಗುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
ಕಾನ್ಸನ್ಟ್ರೇಷನ್
ಹೆಡ್ ಮಸಾಜ್ ಮಾಡಿಸಿಕೊಳ್ಳುವುದರಿಂದ ಬರೀ ರಿಲ್ಯಾಕ್ಸ್ ಆಗುವುದಿಲ್ಲ,ಜೊತೆಗೆ ಆಸಕ್ತಿಯನ್ನು ಹಾಗೂ ಕಾನ್ಸಂಟ್ರೇಶನ್ ಅನ್ನು ಕೂಡ ಹೆಚ್ಚು ಮಾಡುತ್ತದೆ