ಹೆಚ್ಚು ಜನ ತಮ್ಮ ದಿನವನ್ನು ಪ್ರಾರಂಭಿಸುವುದು ಕಾಫಿ ಅಥವಾ ಟೀಯನ್ನ ಸೇವಿಸುವುದರ ಮುಖಾಂತರ. ಕೆಲವೊಬ್ಬರಿಗೆ ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಆಗಲೇಬೇಕು, ಇಲ್ಲವಾದಲ್ಲಿ ಇನ್ನು ಕೆಲವರಿಗೆ ಮುಖ ತೊಳೆದ ನಂತರ ಕಾಫಿ ಹಾಗೂ ಟೀಯನ್ನು ಕುಡಿಯುವಂತಹ ಅಭ್ಯಾಸವಿರುತ್ತದೆ.
ಇನ್ನು ಕೆಲವರು ಕಾಫಿ/ಟೀ ಒಳ್ಳೆಯದಲ್ಲವೆಂದು ಹಾಲನ್ನು ಕುಡಿಯುತ್ತಾರೆ..ಆದ್ರೆ ಬೆಳಗ್ಗೆ ಕಾಲಿ ಹೊಟ್ಟೆಗೆ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ..ಸಾಕಷ್ಟೂ ಸಮಸ್ಯೆಗಳು ಎದುರಾಗುತ್ತವೆ..ಏನೆಲ್ಲ ಸಮಸ್ಯೆ ಎಂಬುವುದರ ಡೀಟೇಲ್ಸ್ ಇಲ್ಲಿದೆ..
ಬ್ಲಡ್ ಶುಗರ್ ಲೆವೆಲ್
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಹಾಲನ್ನು ಕುಡಿಯುವುದರಿಂದ ಬ್ಲಡ್ ಶುಗರ್ ಲೆವೆಲ್ ಏರುಪೇರು ಆಗುತ್ತದೆ. ಅದರಲ್ಲೂ ಡಯಾಬಿಟಸ್ ಇದ್ದವರು ತಿಂಡಿ ತಿಂದ ನಂತರ ಹಾಲನ್ನು ಕುಡಿಯುವಂಥದ್ದು ಉತ್ತಮ. ಇಲ್ಲವಾದಲ್ಲಿ ಕೆಲವು ಬಾರಿ ಸಕ್ಕರೆ ಮಟ್ಟ ಜಾಸ್ತಿ ಆಗುತ್ತದೆ ಅಥವಾ ತೀರಾ ಕಡಿಮೆಯಾಗುತ್ತದೆ.
ಡೈಜೆಶನ್ ಸಮಸ್ಯೆ
ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರನ್ನ ಕುಡಿದರೆ ಡೈಜೆಶನ್ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ. ಆದರೆ ಖಾಲಿ ಹೊಟ್ಟೆಗೆ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ, ಕೆಲವೊಬ್ಬರಿಗೆ ಕಾನ್ಸ್ಟಿಪೇಶನ್ ಸಮಸ್ಯೆಯೂ ಎದುರಾಗುತ್ತದೆ. ಇದರಿಂದಾಗಿ ವಾಕರಿಕೆ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳುತ್ತದೆ.
ಪೌಷ್ಟಿಕಾಂಶದ ಕೊರತೆ
ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶ ಹೆಚ್ಚಿರುತ್ತದೆ.ಆದರೆ ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಹಾಲನ್ನು ಕುಡಿಯುವುದರಿಂದ ನಿಧಾನವಾಗಿ ಕಬ್ಬಿನಾಂಶ ,ಝಿಂಕ್ ಹಾಗೂ ಇತರೆ ಮಿನರಲ್ಸ್ ವಿಟಮಿನ್ಸ್ನ ಹೀರಿಕೊಳ್ಳುತ್ತದೆ.ಇದರಿಂದ ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಎದುರಾಗುತ್ತದೆ.