ಸ್ವಚ್ಚತೆಗೆ ಸಂಬಂಧಿಸಿದಂತೆ ಮತ್ತು ನಗರಕ್ಕೆ ಯಾವ ಸೌಲಭ್ಯ ಬೇಕು-ಬೇಡಾ ಎಂಬುವುದರ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಭಿಯಾನ #ಮೈ ಸಿಟಿ ಮೈ ಬಜೆಟ್ ಎಂಬ ಅಭಿಯಾನವನ್ನು ಈಗಾಗಲೇ ಪ್ರಾರಂಭಗೊಂಡಿದೆ.
ಬಿಬಿಎಂಪಿ ಸಹಯೋಗದೊಂದಿಗೆ ಅಭಿಯಾನ ನಡೆಸುವ ಜನಾಗ್ರಹ ಸಮಿತಿಯು ʼನನ್ನ ನಗರ ನನ್ನ ಬಜೆಟ್ ಬಿಬಿಎಂಪಿ ಸಹಯೋಗದೊಂದಿಗೆ ಜನಾಗ್ರಹ ನಡೆಸುವ ವಾರ್ಷಿಕ ಬಜೆಟ್ ನಲ್ಲಿ ನಾಗರಿಕರು ಭಾಗವಹಿಸುವಿಕೆಯ ಅಭಿಯಾನವಾಗಿದೆ. ಈ ವರ್ಷ ಅಭಿಯಾನವು ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತೊಡೆದುಹಾಕಲು ಮತ್ತು ಪಾದಚಾರಿ ಸುರಕ್ಷತೆಯನ್ನು ಸುಧಾರಿಸಲು ಕೇಂದ್ರೀಕರಿಸಿದೆ!ʼ ಎಂದು ಹೇಳಿತ್ತು.
2021/2022 ರ ಬಜೆಟ್ ಮಂಡನೆಗೆ ಬಿಬಿಎಂಪಿ ತಯಾರಿ ನಡೆಸುತ್ತಿದ್ದು, ಇದೀಗ ಈ ಅಭಿಯಾನದ ಮೂಲಕ ನಗರಕ್ಕೆ ಏನು ಬೇಕು ಏನು ಬೇಡಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಕಲೆಹಾಕುತ್ತಿದೆ. ಅಂದರೆ ಬಜೆಟ್ ಸಿದ್ಧತೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಈ ಅಭಿಯಾನದಲ್ಲಿ ನಾಗರೀಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬಹುದು. ಈಗಾಗಲೆ ನಾಗರಿಕರಿಂದ ಪ್ರತಿಕ್ರಿಯೆಗಳು ಬಂದಿದ್ದು, ಉತ್ತಮ ಫುಟ್ಬಾತ್, ಶೌಚಾಲಯ, ರಸ್ತೆಗಳ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷದ ಬಜೆಟ್ನಲ್ಲಿ ಶೌಚಾಲಯ ಮತ್ತು ಫುಟ್ಬಾತ್ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮುರಿದ ಪಾದಾಚಾರಿ ಮಾರ್ಗ ಸರಿಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ನಿರ್ಭಂಧಿಸುವುದು, ಸ್ವಚ್ಚ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಒಂದು ತಿಂಗಳ ಕಾಲ ಅಭಿಯಾನ ನಡೆಯುತ್ತಿದ್ದು, ವಾಹನಕ್ಕೆ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕನಕಪುರ ರಸ್ತೆಯ ಹಲವು ವಾರ್ಡ್ಗಳಲ್ಲಿ ಅಭಿಯಾನ ನಡೆಸಲಾಗುತ್ತಿದ್ದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಚಾಲನೆ ನೀಡಿದ್ದಾರೆ.
ಪಾಲಿಕೆಯೊಂದಿಗೆ ಜೊತೆಯಾದ ಜನಾಗ್ರಹ ಸಂಘವು ಹಲವು ಅಂಶಗಳನ್ನು ಮುಂದಿಟ್ಟುಕೊಂಡಿದೆ. ನಗರದ ಸ್ವಚ್ಚತೆ, ಪರಿಸರ ಸಂರಕ್ಷಣೆ ಮತ್ತು ಕೆಲವೊಂದು ಸಮಸ್ಯೆಯನ್ನು ಪರಿಹರಿಸಲು ಸಾರ್ವಜನಿಕರ ಸಲಹೆ ಸಹಕಾರ ಅತೀ ಮುಖ್ಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಇದನ್ನು ಸಂಪೂರ್ಣ ತೊಲಗಿಸುವಂತಹ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಶೌಚಾಲಯಗಳ ದುರಸ್ಥಿ ಮತ್ತು ನಿರ್ಮಾಣದ ಕುರಿತು ಹೆಚ್ಚು ಗಮನಹರಿಸುವುದು. ದುರಸ್ಥಿಕೊಂಡ ಫುಟ್ಬಾತ್ ರಸ್ತೆಗಳ ಮರುನಿರ್ಮಾಣಕ್ಕೆ ಗಮನಹರಿಸುವುದು. ಇಂತಹ ಸಮಸ್ಯೆಗಳಿದ್ದಲ್ಲಿ ಪಾಲಿಕೆಯೊಂದಿಗೆ ನೇರವಾಗಿ ಮಾಹಿತಿ ಹಂಚಿಕೊಂಡು ಅಭಿಯಾನಕ್ಕೆ ಭಾಗಿಯಾಗ ಬಹುದೆಂದು ಜನಾಗ್ರಹಾ ಸಿವಿಕ್ ಮುಖ್ಯಸ್ಥೆ ಸಪ್ನಾ ಕರೀಮ್ ಹೇಳಿದ್ದಾರೆ.