• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್‌ ಜೊತೆ ಯಡಿಯೂರಪ್ಪ ಹೊಂದಾಣಿಕೆ.. ಸಂಘದ ಸಭೆ.. ಶಿಸ್ತುಕ್ರಮ ಸಾಧ್ಯತೆ..

ಪ್ರತಿಧ್ವನಿ by ಪ್ರತಿಧ್ವನಿ
September 11, 2024
in ಕರ್ನಾಟಕ, ರಾಜಕೀಯ, ವಿಶೇಷ
0
ಕಾಂಗ್ರೆಸ್‌ ಜೊತೆ ಯಡಿಯೂರಪ್ಪ ಹೊಂದಾಣಿಕೆ.. ಸಂಘದ ಸಭೆ.. ಶಿಸ್ತುಕ್ರಮ ಸಾಧ್ಯತೆ..
Share on WhatsAppShare on FacebookShare on Telegram

ADVERTISEMENT

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಗೆಲುವು ಕಂಡಿದ್ದೇ ಕಾಂಗ್ರೆಸ್‌ ಜೊತೆಗಿನ ಒಳ ಒಪ್ಪಂದದಿಂದ ಎನ್ನುವ ವಿಚಾರ ಬಹಿರಂಗ ಆಗಿತ್ತು. ಸ್ವತಃ ಯಡಿಯೂರಪ್ಪ ಸಿದ್ದರಾಮಯ್ಯ ಜೊತೆಗೆ ಮಾತನಾಡಿ ಶಿಕಾರಿಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್‌‌ ಭಿಕ್ಷೆಯಿಂದಲೇ ವಿಜಯೇಂದ್ರ ಗೆಲುವು ಕಂಡಿದ್ದು ಅನ್ನೋ ಬಗ್ಗೆಯೂ ಹಲವು ನಾಯಕರು ಮಾತನಾಡಿದ್ದರು. ಇದೀಗ ಬಿಜೆಪಿ ಹಾಗು ಕಾಂಗ್ರೆಸ್‌ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ ಸಭೆ ಕರೆದಿದೆ. ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ನೇರ ಎದುರಾಳಿಯಾಗಿದ್ದು, ರಾಜ್ಯದಲ್ಲಿ ಮಾತ್ರ ಒಳ ಒಪ್ಪಂದ ನಡೆಯುತ್ತಿದೆ ಎನ್ನುವ ಆರೋಪ ಎದುರಾಗಿದೆ. ಇದರ ಬೆನ್ನಲ್ಲೇ RSS ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಬಿ. ಪಿ ಹರೀಶ್ ಮಾತನಾಡಿ, ಗುರುವಾರ ಸಂಘದ ನೇತೃತ್ವದಲ್ಲಿ ಸಭೆ ನಡೆಯಲಿದೆ. ನನಗೂ ಸಹ ಮಾಧ್ಯಮದ ಮೂಲಕ ಮಾಹಿತಿ ಬಂದಿದೆ. ನಮ್ಮ ಪರಿವಾರದ ಮುಖಂಡರು, ನಮ್ಮ ಪಕ್ಷದ 40 ಮುಖಂಡರ ಜೊತೆಗೆ ಸಭೆ ನಡೆಯಲಿದೆ. ಲೋಕಸಭಾ ಚುನಾವಣೆ ನಂತರ ರಾಜ್ಯದ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ನಮ್ಮ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಅವರು ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದರಿಂದ ನಮ್ಮ ಪಕ್ಷಕ್ಕೆ ಸೋಲು ಉಂಟಾಗಿದೆ. ನಾವು ಪದೇ ಪದೇ ಪ್ರಸ್ತಾಪ ಮಾಡಿದ್ರು, ಯಾರು ಸಹ ನಮ್ಮನ್ನು ಕೇಳಲಿಲ್ಲ. ನನಗೆ ಈಗ ಸಂತೋಷ ಆಗಿದೆ ಎಂದಿದ್ದಾರೆ.

ಸಂಘ ಪರವಾರದ ಸಭೆಯಲ್ಲಿ ನಮಗೆ ನ್ಯಾಯ ಸಿಗಲಿದೆ. ಶಿಸ್ತಿನ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ. ಪರಿವಾರದ ಮೂಲಕ ನಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದಿರುವ ಬಿ.ಪ ಹರೀಶ್‌, ಕಾಂಗ್ರೆಸ್ ಜೊತೆಗೆ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡ ವಿಚಾರವಾಗಿ ನಾಳೆಯ ಸಭೆಗೆ ನಾನು ಹೊಗ್ತಿಲ್ಲ, ನನಗೆ ಗೊತ್ತಿಲ್ಲ. ನಿಜವಾಗಿಯೂ ನಮಗೆ ನಾಚಿಕೆ ಆಗಲಿದೆ. ರಾಜ್ಯಾಧ್ಯಕ್ಷರಿಗೆ ಭಿಕ್ಷೆ ನೀಡಿದ್ದೇನೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ರು ಸಹ, ಇವತ್ತಿನವರೆಗೂ ನಮ್ಮ ರಾಜ್ಯಾಧ್ಯಕ್ಷರು ಖಂಡಿಸಿಲ್ಲ. ರಾಜ್ಯಾಧ್ಯಕ್ಷ ಅನೇಕ ಪೋರ್ಜರಿ ಸಹಿ ಮಾಡಿದ್ಧಾರೆ ಅಂತ ಡಿಸಿಎಂ ಆರೋಪ ಮಾಡಿದ್ದಾರೆ. ಇದನ್ನೂ ವಿಜಯೇಂದ್ರ ಅವರು ಖಂಡಿಸಿಲ್ಲ. ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಅಂತ ಈ ಮೂಲಕ ಗೊತ್ತಾಗ್ತಿದೆ ಎಂದಿದ್ದಾರೆ ಬಿ. ಪಿ ಹರೀಶ್.

ನಾಳೆಯ ಸಭೆಯಲ್ಲಿ ನ್ಯಾಯ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರೀಶ್‌, ನಮ್ಮ ಪಕ್ಷದ ನಾಯಕರು ಹೊಂದಾಣಿಕೆ ರಾಜಕೀಯದ ಬಗ್ಗೆ ಇದುವರೆಗೆ ಕರೆದು ಕೇಳಿಲ್ಲ. ಪರಿವಾರದ ಮೂಲಕ ನಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ ಎಂಬ ವಿಶ್ವಾಸ ಇದೆ. ಮುಂದಿನ ದಿನಗಳಲ್ಲಿ ಹೊಂದಾಣಿಕೆ ರಾಜಕೀಯ ನಿಲ್ಲಬೇಕು. ಪಕ್ಷದ ಕಾರ್ಯಕರ್ತರಿಗೆ ದ್ರೋಹ ಮಾಡಬಾರದು. ಯಾವೊಬ್ಬ ಅಭ್ಯರ್ಥಿಗೆ ಆ ಪಕ್ಷ ನಾಯಕರಿಂದ ಸೋಲು ಉಂಟಾಗಬಾರದು ಎಂದಿದ್ದಾರೆ. ಇನ್ನು ಪ್ರತ್ಯೇಕ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಹಗಣರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪಾದಯಾತ್ರೆ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ರಾಷ್ಟ್ರೀಯ ನಾಯಕರು ಅನುಮತಿ ಕೊಟ್ಟರೆ ಪಾದಯಾತ್ರೆ ಮಾಡುತ್ತೇವೆ ಅಂತಾನು ತಿಳಿಸಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ವೃದ್ಧಾಶ್ರಮದಲ್ಲಿ ಆರೈಕೆ.. ಮುಂಗೂಸಿ ಮಧ್ಯಪ್ರವೇಶ.. ನಟನಿಗೆ ಅಪಘಾತ

Next Post

ಬೃಂದಾವನ ಸೀರಿಯಲ್‌ ನಟನ ವಿರುದ್ಧ ಯುವತಿ ದೂರು.. ಕಾರಣ ಗೊತ್ತಾ..?

Related Posts

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ
Top Story

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

by ನಾ ದಿವಾಕರ
August 29, 2026
0

ಭಾರತೀಯ ಪ್ರಜಾತಂತ್ರ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ? ವಸಾಹತು ಆಳ್ವಿಕೆಯಲ್ಲಿ , 1947ರ ಹೊಸ್ತಿಲಲ್ಲೂ ಸಹ ಶೇಕಡಾ 13ರಷ್ಟು ಭಾರತೀಯರು ಮಾತ್ರ ಮತದಾನದ ಹಕ್ಕು ಹೊಂದಿದ್ದರು....

Read moreDetails
‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

August 28, 2026
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
Next Post

ಬೃಂದಾವನ ಸೀರಿಯಲ್‌ ನಟನ ವಿರುದ್ಧ ಯುವತಿ ದೂರು.. ಕಾರಣ ಗೊತ್ತಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada