• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯಡಿಯೂರಪ್ಪ ಅವರನ್ನ ಬಿಜೆಪಿ ಹೈಕಮಾಂಡ್ ಹೆದರಿಸಿ ಪ್ರಚಾರ ಮಾಡಿಸುತ್ತಿದೆ ; ಎಂ.ಬಿ.ಪಾಟೀಲ್

Any Mind by Any Mind
May 1, 2023
in Top Story, ಅಭಿಮತ, ಇತರೆ / Others, ಇದೀಗ, ಕರ್ನಾಟಕ
0
ಯಡಿಯೂರಪ್ಪ ಅವರನ್ನ ಬಿಜೆಪಿ ಹೈಕಮಾಂಡ್ ಹೆದರಿಸಿ ಪ್ರಚಾರ ಮಾಡಿಸುತ್ತಿದೆ ; ಎಂ.ಬಿ.ಪಾಟೀಲ್
Share on WhatsAppShare on FacebookShare on Telegram

ದೇಶದ ಸ್ವಾತಂತ್ರ್ಯಹೋರಾಟದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ ಅವರು ಪಾಲ್ಗೊಂಡಿಲ್ಲ. ಇಂದು ಅವರು ಬಂದು ನಮಗೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪಾಠ ಮಾಡುತ್ತ ಇದ್ದಾರೆ. ದೇಶದಲ್ಲಿ ನೂರಾರು ಆಣೆಕಟ್ಟುಗಳಾಗಿದ್ದು, ಐಐಟಿ, ಮತ್ತು ಐಐಎಂ ಸೇರಿದಂತೆ ದೇಶದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಹಸಿರು ಕ್ರಾಂತ್ರಿ, ಶ್ವೇತ ಕ್ರಾಂತಿ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಪ್ರತಿ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಎಂದು‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ  ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ADVERTISEMENT

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಣಾಳಿಕೆ ಎಂಬುದು ಭಗವದ್ಗೀತೆ ಎಂದು ಪ್ರಧಾನಿ ಮೋದಿ ಹೇಳ್ತಾರೆ, ಆದರೆ ಎಲ್ಲಿ ಹೋಯಿತು ಮೋದಿಯ ಕಪ್ಪುಹಣದ ಭರವಸೆ ಮತ್ತು ವರ್ಷಕ್ಕೆ 2 ಕೋಟಿಯ ಉದ್ಯೋಗದ ಭರವಸೆ. ನೋಟು ಅಮಾನ್ಯಕೀರಣ ಮಾಡಿ ಆರ್ಥಿಕತೆ ವ್ಯವಸ್ಥೆ ಬುಡಬೇಲು ಮಾಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದ ಬೆಜೆಪಿ ಅವರು ರೈತರ ಖರ್ಚು ಹೆಚ್ಚಳವಾಗಿಲ್ಲ. ಬೆಲೆಯೇರಿಕೆ ಗಗನಕ್ಕೇರಿದೆ. ಇಂದು ಅಗತ್ಯ ವಸ್ತುಗಳ ಬೆಲೆಯ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳವಾಗಿದೆ, ಇದು ಪ್ರಧಾನಿ ನರೇಂದ್ರ ಮೋದಿಯ ಅಚ್ಚೇದಿನದ ಕೊಡುಗೆ ಎಂದು ಟೀಕಿಸಿದರು.

ಇಂದು ಕೇಂದ್ರ ಬಿಜೆಪಿ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಬಿಜೆಪಿ 2018 ರಲ್ಲಿ 600 ಭರವಸೆಗಳ ಪೈಕಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದು. 40% ಕಮಿಷನ್‌ ಮೂಲಕ ಭ್ರಷ್ಠಾಚರದ ಮಾಡಿದ್ದೇ ಈ ಬಿಜೆಪಿ ಸರ್ಕಾರದ ಕೊಡುಗೆ. ಡಂಬಲ್‌ ಇಂಜಿನ್‌ ಸರ್ಕಾರ ಎಂದು ಹೇಳೆಕೊಳ್ತಾರೆ. ಇಂದು ಎರಡು ಎಂಜಿನ್‌ ಕೆಟ್ಟು ನಿಂತಿವೆ. ಹಣ, ಆಮಿಷದ ಮೂಲಕ ನಮ್ಮ 17 ಮಂದಿ ಶಾಸಕರನ್ನು ಖರೀದಿಸಿ ವಾಮಮಾರ್ಗದ ಮೂಲಕ, ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿ ಅನೈತಿಕ ಮಾರ್ಗದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಯಡಿಯೂರಪ್ಪ ಮತ್ತೇ ತೆಗೆದ್ರು. ವೀರೇಂದ್ರ ಪಾಟೀಲರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನು ಬದಲಿಸಿ ಬಂಗಾರಪ್ಪಗೆ ಅವಕಾಶ ಕೊಡಲಾಯಿತು. ಈ ಅಪಪ್ರಚಾರಕ್ಕೆ ನಮ್ಮ ಪಕ್ಷ ಬಲಿಯಾಯಿತು. ಯಡಿಯೂರಪ್ಪನವರನ್ನು ತೆಗೆಯುವಾಗ ಅನಾರೋಗ್ಯ ಇತ್ತಾ? ಇರಲಿಲ್ಲವಲ್ಲ. ಇವತ್ತೂ ದಷ್ಟಪುಷ್ಟವಾಗಿದ್ದಾರೆ.

ಲಿಂಗಾಯತರ ವಿಷಯದಲ್ಲಿ ಬಿಜೆಪಿ ಅವರು ಗಾಬಾರಿಗೊಂಡಿದ್ದಾರೆ. ರಾಜ್ಯದ ಬಿಜೆಪಿಯ ಯಾವುದೇ ನಾಯಕನ ಮುಖವನ್ನು ಇಟ್ಟು ಜನರ ಬಳಿಗೆ ಹೋಗಲಿಕ್ಕೆ ಆಗುತ್ತಿಲ್ಲ ಇವರಿಗೆ, ಮೋದಿ ಶಾ ಅವರನ್ನು ಕರ್ನಾಟಕದ ಶಾಶ್ವಾತ ನಿವಾಸಿಗಳಾಗಿ ಬಿಟ್ಟಿದ್ದಾರೆ. ಮೋದಿ ಮತ್ತು ಶಾ ಕೂಡ ತಮ್ಮ ಅನೇಕ ಭಾಷಣಗಳಲ್ಲಿ ಸುಳ್ಳು ಹೇಳ್ತಾರೆ. ಶೆಟ್ಟರ್, ಸವದಿ ಸೋಲಿಸಲು ಯಡಿಯೂರಪ್ಪರನ್ನು ಬಿಟ್ಟಿದ್ದಾರೆ. ಸವದಿ, ಶೆಟ್ಟರ್ ಮುಗಿಸಲು ಸಂತೋಷ್, ಜೋಶಿ ಮುಗಿಸಲಿ. ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬಳಸಲಾಗುತ್ತಿದೆ. ಯಡಿಯೂರಪ್ಪರನ್ನು ಹೆದರಿಸಿದ್ದಾರೆ. ಯಡಿಯೂರಪ್ಪನವರು ಇಂದು ಸವದಿ, ಶೆಟ್ಟರ್ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಹೇಳ್ತಾ ಇದ್ದಾರೆ. ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ‌ ಮಾಡಿದಾಗ ಅವರು ನೇರ ಬಿಜೆಪಿ ಎದೆಗೆ ಚೂರಿ ಹಾಕಿದ್ದರು. ಯಡಿಯೂರಪ್ಪನವರಿಂದ ಕೆಟ್ಟ ಕೆಲಸ‌ ಮಾಡಿಸಿದರು. ಕಣ್ಣೀರು ಹಾಕಿಸಿದರು. ಬಳಿಕ ಕಸದ ಬುಟ್ಟಿಗೆ ಎಸೆದಂತೆ ಎಸೆದರು.

ಬೊಮ್ಮಾಯಿ ಅವರು ಅಕ್ಸಿಡೆಂಟಲ್‌ ಮುಖ್ಯಮಂತ್ರಿ. ಯಡಿಯೂರಪ್ಪ ಆದ ಬಳಿಕ, ಲಕ್ಷ್ಮಣ್ ಸವದಿಯನ್ನು ಉಪಮುಖ್ಯಮಂತ್ರಿಯಾಗಿ ಇಳಿಸಿದರು. ಜಗದೀಶ್‌ ಶೆಟ್ಟರ್‌ ಅವರಿಗೆ 67 ವರ್ಷ, ಅವರ ಮೇಲೆ ಯಾವುದೇ ಆರೋಪವಿಲ್ಲ. ಲಿಂಗಾಯುತ ಸಮುದಾಯವನ್ನು ಬಿಜೆಪಿ ಅವರ ಹಿಡೆನ್‌ ಅಂಜೆಡಾ ಏನಿದೆ ನಮ್ಮನ್ನು ಉಪಯೋಗಿಸಿ ನಮ್ಮನ್ನು ಒಂದು ಹಂತಕ್ಕೆ ತಂದು ನಮ್ಮನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಲಿಂಗಾಯತರು ಮತ್ತೆ ಮರಳಿ ಮನೆಗೆ ಬರುತ್ತಿದ್ದಾರೆ. ಇದೀಗ ಬಿಜೆಪಿ ಗಾಬಾರಿಯಾಗಿದ್ದಾರೆ ಈ ಬಾರಿ ಲಿಂಗಾಯುತ ಸಮುದಾಯ ಖಂಡಿತವಾಗಿಯೂ ಶೇ.50 ರಷ್ಟು ಕಾಂಗ್ರೆಸ್‌ ಪರ ನಿಲ್ಲುತ್ತಾರೆ. ಕಾಂಗ್ರೆಸ್ 130-140 ಸ್ಥಾನ ಬರುವುದು ಖಚಿತ.

ಇವತ್ತಿನ ಸುದ್ದಿಗೋಷ್ಠಿಯ ಪ್ರಮುಖ ವಿಚಾರವೇ ಇದು 2013 ರಲ್ಲಿ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ಭೇಟಿ ಮಾಡಿದ್ದು ಯಾರನ್ನು? ಮೂರ್ನಾಲ್ಕು ದಿನಗಳಲ್ಲಿ ಇದನ್ನು ನಾನು ಬಹಿರಂಗಪಡಿಸಲಿದ್ದೇನೆ. ಎರಡು ಬಾರಿ ಯಾರನ್ನು ಭೇಟಿ ಆಗಿದ್ರಿ? ಏನು ಮಾತುಕತೆ ನಡೆದಿತ್ತು, ಮಾತುಕತೆ ಏನು, ಯಾಕೆ ವಿಫಲವಾಯಿತು? ಎಂಬುದನ್ನು ಮೂರ್ನಾಲ್ಕು ದಿನ‌ಬಿಟ್ಟು ಬಹಿರಂಗ ಮಾಡುತ್ತೇವೆ.‌ ನಾವು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ, ನಮ್ಮದು ನಿಜ ಗುಂಡು. ಯಡಿಯೂರಪ್ಪ, ಶೋಭಾ ಅವರೇ ಎಲ್ಲ ಬಿಟ್ಟುಬಿಡಿ. ಬಿಜೆಪಿಯವರ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ. ನೀವು ಬಿಜೆಪಿ ಅವರ ಉಪಯೋಗಕ್ಕೆ ಒಳಗಗಾಬೇಡಿ. ಈ ಬಾರಿ ಬಹಳ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಬೆಂಬಲಿಸಿದೆ. ಡಬಲ್‌ ಎಂಜಿನ್‌ ಸರ್ಕಾರವನ್ನು ರಾಜ್ಯದ ಜನತೆ ಈ ಸರ್ಕಾರವನ್ನು ಕಿತ್ತೆಸೆಯಲ್ಲಿದ್ದಾರೆ.

ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ಭೇಟಿ ಸಂಬಂಧಪಟ್ಟ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸಿದಾಗ, ‘ನಾನು ಇದನ್ನು ವಿಸ್ತಾರವಾಗಿ ಬಹಿರಂಗಪಡಿಸುತ್ತೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ನಾನು ಮಾಡಲ್ಲ. ಕೂತುಹಲಕ್ಕಾಗಿ ನೀವು ಕಾಯಿರಿ. ಇನ್ನು ಮೇ7 ರೊಳಗಡೆ ನಾನು ಇದನ್ನು ಬಹಿರಂಗಪಡಿಸುತ್ತೇನೆ’ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Tags: BJPbjpkarnatakabjpManifestobsyediyurappaDKShivakumarjpnaddaKPCC presidentMB PatilModiPMModiRahul GandhiShobha Karandlajesiddaramaiah
Previous Post

ಬಿಜೆಪಿ ‘ಪ್ರಜಾ’ ಪ್ರಣಾಳಿಕೆ ಬಿಡುಗಡೆ ; ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ ಗುರಿ ; ಸಿಎಂ ಬೊಮ್ಮಾಯಿ

Next Post

ಪ್ರಣಾಳಿಕೆಗೂ ಮೊದಲು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ : ಬಿಜೆಪಿ ಪ್ರಣಾಳಿಕೆ ಬಗ್ಗೆ ಸಿದ್ದರಾಮಯ್ಯ ಟೀಕೆ

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಪ್ರಣಾಳಿಕೆಗೂ ಮೊದಲು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ : ಬಿಜೆಪಿ ಪ್ರಣಾಳಿಕೆ ಬಗ್ಗೆ ಸಿದ್ದರಾಮಯ್ಯ ಟೀಕೆ

ಪ್ರಣಾಳಿಕೆಗೂ ಮೊದಲು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ : ಬಿಜೆಪಿ ಪ್ರಣಾಳಿಕೆ ಬಗ್ಗೆ ಸಿದ್ದರಾಮಯ್ಯ ಟೀಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada