• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು : ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ | GS Patil

ಪ್ರತಿಧ್ವನಿ by ಪ್ರತಿಧ್ವನಿ
September 28, 2026
in Top Story, ಕರ್ನಾಟಕ
0
Women Farmers Play a Pivotal Role in the Countrys Agriculture
Share on WhatsAppShare on FacebookShare on Telegram

ಧಾರವಾಡ : ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು 2026 ವರ್ಷವನ್ನು ಅಂತರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಆಚರಣೆ ಮಾಡಲಾಗುತ್ತಿದೆ. ಸಶಕ್ತ ಮಹಿಳೆ ಸುಸ್ಥಿರ ಕೃಷಿ ಈ ವರ್ಷದ ಕೃಷಿ ಮೇಳದ (Agriculture Fair) ಧ್ಯೇಯವಾಗಿದೆ. ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಜಿ.ಎಸ್.ಪಾಟೀಲ (GS Patil) ಹೇಳಿದರು.

ADVERTISEMENT
HD Kumaraswamy On DK Shivakumar : ದೇವೇಗೌಡರು ರಾಜಕೀಯಕ್ಕೆ ಬಂದಾಗ ಇವರಿನ್ನು ಹುಟ್ಟೇ ಇರಲಿಲ್ಲ..!

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  ಮಹಿಳೆಯರು ದಿನನಿತ್ಯ ದುಡಿಯುತ್ತಿದ್ದಾರೆ. ಪಹಣಿಯಲ್ಲಿ ಮಹಿಳೆಯರ ಹೆಸರು ಇರುವುದಿಲ್ಲ. ಬ್ಯಾಂಕ್ ನಲ್ಲಿ ಸಹ ಮಹಿಳೆಯರು ಕಾಣಸಿಗುವುದಿಲ್ಲ. ಕೃಷಿಯಲ್ಲಿ  ಮಹಿಳೆಯರ ಅಂತರ ಕಡಿಮೆ ಮಾಡಲು ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ವರ್ಷ ಎಂದು ಘೋಷಣೆ ಮಾಡಿದೆ. ಜಗತ್ತಿನಲ್ಲಿ 100 ಕ್ಕೆ 40 ಜನ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ 100 ಜನ ಮಹಿಳೆಯರಲ್ಲಿ 77 ಜನ ಮಹಿಳೆಯರು ದುಡಿಯುತ್ತಿದ್ದಾರೆ. 100 ಎಕರೆಯಲ್ಲಿ 12 ಎಕರೆ ಮಹಿಳೆಯರ ಹೆಸರಿನಲ್ಲಿ ಮಾತ್ರ ಇವೆ. ಪ್ರತಿ ನಿತ್ಯ ಸುಮಾರು 14 ಗಂಟೆಗಳ ಕಾಲ‌ ಮಹಿಳೆಯರು ದುಡಿಯುವರು. ಅಲ್ಲದೇ‌ ಮಹಿಳೆಯರು 16 ಗಂಟೆಗಳ ಕಾಲ ಸುಗ್ಗಿ ಕಾಲದಲ್ಲಿ ಕೆಲಸ ಮಾಡುತ್ತಾರೆ. 1000 ಮಹಿಳೆಯರಲ್ಲಿ ಕೇವಲ 2 ಮಹಿಳೆಯರು ಕೃಷಿಯಲ್ಲಿ ತರಬೇತಿ ಪಡೆದಿದ್ದಾರೆ. ಹೆಣ್ಣನ್ನು ಬಲಪಡಿಸಿದರೆ ಇಡೀ ಊರು ಚನ್ನಾಗಿರುತ್ತದೆ ಎಂದು ಅವರು ತಿಳಿಸಿದರು.

ಮಣ್ಣಿನ ಆರೋಗ್ಯವನ್ನು ಕಾಪಾಡಬೇಕು. ಕೃಷಿ ಜೊತೆಗೆ ಹಸು, ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಮುಂದಾಗಬೇಕು. ಕೃಷಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಬೇಕು. ಯುವ ರೈತರು ಮೊಬೈಲ್ ಗಳನ್ನು ಹವಾಮಾನ, ಡ್ರೋಣ ಸಿಂಪಡಣೆ, ಮಾರುಕಟ್ಟೆ ಮಾಹಿತಿ ಸೇರಿದಂತೆ ವಿವಿಧ ಕೆಲಸಗಳಿಗೆ ಉಪಯೋಗಿಸಬೇಕು. ಉದ್ಯೋಗ ಕೊಡುವ ರೈತರಾಗಿ ಬೆಳೆಯಬೇಕು ಎಂದು ಅವರು ಆಶಿಸಿದರು.

ಸುಮಾರು 15 ಲಕ್ಷ ರೈತರು ಕೃಷಿ ಮೇಳದಲ್ಲಿ ಭಾಗಿಯಾಗುತ್ತಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವನ್ನು ರೈತರು ಅಳವಡಿಸಿಕೊಳ್ಳಬೇಕು. 400 ಎಕರೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಾನು ತೊಡಗಿಕೊಂಡಿದ್ದೆ. ರೈತರ ಸಂಕಷ್ಟವನ್ನು ನಾನು ತಿಳಿದುಕೊಂಡಿದ್ದೇನೆ. ರೈತರು ಕೃಷಿಯಲ್ಲಿ ಲಾಭದಾಯಕವನ್ನು ಕಂಡಿರುವುದಿಲ್ಲ. ಮೊದಲು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಆಹಾರ ಧಾನ್ಯಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ರೈತರ ಶ್ರಮ ಸಾಕಷ್ಟಿದೆ. ರೈತರು ಹೊಸ ಅನ್ವೇಷಣೆ, ವಿಚಾರಗಳನ್ನು ಮಾಡಬೇಕು. ಕೃಷಿ ಮೇಳದಿಂದ ರೈತರಿಗೆ ಅನುಕೂಲವಾಗಬೇಕು ಎಂದರು.

Yatindra Siddaramaiah :  ಯಾವ VIPಗಳಿಗೂ ಪಾಸ್ ಕೊಡಲ್ಲ #pratidhvani

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ದಳವಾಯಿ ಮಾತನಾಡಿ, ನಾನು ಕೂಡ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆರು ವರ್ಷ ಅಧ್ಯಯನ ಮಾಡಿದ್ದೇನೆ. ಕೃಷಿ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಮಾನ್ಯತೆಯಿದೆ. ಕೃಷಿ ಮೇಳಕ್ಕೆ ಬರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಕೃಷಿ ಎಂದರೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಿವೆ. ಕಳೆದ 78 ವರ್ಷಗಳಲ್ಲಿ ಕೃಷಿಯಲ್ಲಿ ದೇಶ ದಾಪುಗಾಲು ಇಟ್ಟಿದೆ. ಎಲ್ಲ ರೀತಿಯ ಹವಾಮಾನ, ಮಣ್ಣುಗಳು ದೇಶದಲ್ಲಿದೆ. ಪ್ರಪಂಚದ ವಿವಿಧ ದೇಶಗಳಲ್ಲಿ ಬೆಳೆಯುವ ಬೆಳೆಗಳನ್ನು ಭಾರತದಲ್ಲಿ ಬೆಳೆಯಬಹುದು. ಸ್ವಾತಂತ್ರ್ಯದ ನಂತರ ಆಹಾರ ಕೊರತೆಯಿಂದ ಸಾಕಷ್ಟು ಜನರು ಸಾವಿಗೀಡಾಗಿದ್ದಾರೆ. ಹಸಿರು ಕ್ರಾಂತಿಯಿಂದ ಆಹಾರ ಬೆಳೆಗಳಲ್ಲಿ ಕ್ರಾಂತಿಯನ್ನು ಉಟ್ಟು ಮಾಡಿತು. ಭಾರತ ದೇಶ ಶೇ.13 ರಷ್ಟು ಉತ್ಪಾದನೆ ಮಾಡಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ.

ರೈತರು ಆರ್ಥಿಕವಾಗಿ ಹಿಂದೆ ಉಳಿದಿದ್ದಾರೆ. ಪೌಷ್ಟಿಕಾಂಶ ಆಹಾರ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ದ್ವಿದಳ ಧಾನ್ಯಗಳನ್ನು ಬೆಳೆಯಬೇಕಿದೆ. ಮಳೆ ಇಲ್ಲದಿದ್ದಾಗ ಕೂಡ ರೈತರಿಗೆ ಉದ್ಯೋಗ ದೊರೆಯುವಂತಾಗಬೇಕು. ರೈತರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು. 21 ನೇ ಶತಮಾನದಲ್ಲಿ ಕೃಷಿಗೆ ಪ್ರಾಮುಖ್ಯತೆ ಇನ್ನೂ ಹೆಚ್ಚಾಗಲಿದೆ. ದೇಶದ 100 ಜನರಲ್ಲಿ 46 ಜನರು ಕೃಷಿ ಅಳವಡಿಸಿಕೊಂಡಿದ್ದಾರೆ. ದೇಶದ 60-70 ಕೋಟಿ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿಗೆ ಹೆಚ್ಚಿನ ಒತ್ತು ಕೊಡುವ ಸಮಯ ಬಂದಿದೆ. ಉಳಿಮೆ ಮಾಡುವ ಫಲವತ್ತಾದ ಭೂಮಿ ರಾಜ್ಯದಲ್ಲಿದೆ. ರಾಜ್ಯದ ಶೇ.66 ರಷ್ಟು ಭೂಮಿಯು ಕೃಷಿಗೆ ಯೋಗ್ಯವಾದ ಭೂಮಿಯಾಗಿದೆ. 1995 ರಲ್ಲಿ ರಾಜ್ಯದಲ್ಲಿ ಕೃಷಿ ನೀತಿ ಜಾರಿಗೆ ತರಲಾಯಿತು. ಕೃಷಿಯಲ್ಲಿ ರೈತರು ಮುಂದೆ ಹೋಗಬೇಕು. ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರೂ ಕೃಷಿಗೆ ಪ್ರಾಮುಖ್ಯತೆ ನೀಡಬೇಕು. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನೆಡೆಸೋಣ ಎಂದರು.

HD Kumaraswamy : DK Shivakumar  ದಾಖಲೆ ಬಿಚ್ಚಿಡ್ತೀನಿ ದೇಶದ ಜನರು ನೋಡಲಿ..! | #pratidhvani

ಕೃಷಿ ವಿಶ್ವವಿದ್ಯಾಲಯದ ಡಾ.ಎನ್.ಬಿ.ಪ್ರಕಾಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೇಷ್ಠ ಕೃಷಿಕರಾದ ಲಕ್ಷ್ಮಣ ಕುಂಬಾರ, ನಾಗರಾಜ ಹುಲಗೂರ, ವಿರೇಶ ನೇಗಲಿ, ಮಲ್ಲಪ್ಪ, ಗುಡ್ಲ, ತಿಪ್ಪಣ್ಣ ಗೌಡರ, ಮಂಜುನಾಥ ಕರಲೇಕರ, ಮಂಜಯ್ಯ ಅಣ್ಣಿಗೇರಿ, ಶ್ರೇಷ್ಠ ಕೃಷಿ ಮಹಿಳೆಯರಾದ ಕೆಂಪವ್ವ ಮಾಯನ್ನವರ, ಕಾವ್ಯಾ ಕುಂಟನಹೊಸಳ್ಳಿ, ನಿರ್ಮಲಾ ಕವಲೂರ, ಶಿಲ್ಪಾ ನಾಯಿಕ, ಕೀರ್ತಿ ಜನವಾಡ, ಪುಷ್ಪಾ ಗುಲ್ಯಾನವರ, ಕಲಾವತಿ ಚವನಗೌಡ್ರ ಹಾಗೂ ಶ್ರೇಷ್ಠ ಯುವ ಕೃಷಿಕರಾದ ನಾಗರಾಜ ತಲ್ಲೂರ, ಈರಪ್ಪ ಬಾರಕೇರ, ಪ್ರವೀಣ ನಾಯಕ, ನೂರಂದಪ್ಪ ಮಂಗಾನವರ, ಚೇತನ ಪಾಟೀಲ, ವಿನಯಕುಮಾರ ನಾಯ್ಕ ಮತ್ತು ಸಂಜು ಮೊರಬದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೊಸ 16 ತಳಿಗಳನ್ನು ಅನಾವರಣಗೊಳಿಸಲಾಯಿತು. ಕೃಷಿಗೆ ಸಂಬಂಧಿಸಿದ ಪುಸ್ತಕ ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ವಿ.ಸುರೇಶ, ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿಷ್ಣುವರ್ಧನ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ,

ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ವೀರನಗೌಡ ಪೊಲೀಸಗೌಡರ, ಪಾರ್ವತಿ ಕುರ್ಲೆ, ರವಿಕುಮಾರ ಮಾಳಿಗೇರ, ಬಸವರಾಜ ಕುಂದಗೋಳಮಠ, ಮಾಲತೇಶ ಶ್ಯಾಗೋಟಿ, ಜಯಶ್ರೀ ಶಿಂತ್ರಿ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ಇತರರು‌ ಉಪಸ್ಥಿತರಿದ್ದರು.

ಸೌಜನ್ಯ ಹಿರೇಮಠ ಪ್ರಾರ್ಥಿಸಿದರು. ವಿಸ್ತರಣಾ ನಿರ್ದೇಶಕಿ ಡಾ.ಮಂಜುಳಾ ಎನ್. ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸುರೇಖಾ ಸಂಕನಗೌಡರ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಎಂ.ಡಿ.ಪಾಟೀಲ ಅವರು ನಿರೂಪಿಸಿದರು. ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎ.ಎಸ್.ಸಜ್ಜನ ವಂದಿಸಿದರು.

ಯುಪಿಐ ಶುಲ್ಕ ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ | Supreme Court

Tags: AgricultureGS PatilWomen Farmers
Previous Post

ಯುಪಿಐ ಶುಲ್ಕ ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ | Supreme Court

Next Post

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗಾಗಿ `ಚಿನ್ನದ ಉಂಗುರು’ : ಹೊಸ ಯೋಜನೆಗೆ ಸಿಎಂ ವಿಜಯ್ ಚಾಲನೆ | CM Vijay

Related Posts

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ
Top Story

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ

by ಪ್ರತಿಧ್ವನಿ
September 28, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಇಂದು ಅವರ ಹೇಳಿಕೆ...

Read moreDetails
HD Kumaraswamy Targets NICE: A Strategy for Political Comeback

ಬಿಡದಿ, ನೈಸ್‌ ಹಿಂದೆ ಬಿದ್ದ ಕುಮಾರಸ್ವಾಮಿ: ರಾಜಕೀಯ ಪುನರಾಗಮನದ ತಂತ್ರವೇ? HD Kumaraswamy

September 28, 2026
ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

September 28, 2026
Breaking :2018ರ ಗಲಾಟೆ ಪ್ರಕರಣ: ಸಚಿವ ಲಕ್ಷ್ಮಣ ಸವದಿಗೆ ಕೋರ್ಟ್ ಸಮನ್ಸ್!

Breaking :2018ರ ಗಲಾಟೆ ಪ್ರಕರಣ: ಸಚಿವ ಲಕ್ಷ್ಮಣ ಸವದಿಗೆ ಕೋರ್ಟ್ ಸಮನ್ಸ್!

September 28, 2026
ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

September 28, 2026
Next Post
Gold ring for newborns in government hospitals CM Vijay launches new scheme

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗಾಗಿ `ಚಿನ್ನದ ಉಂಗುರು’ : ಹೊಸ ಯೋಜನೆಗೆ ಸಿಎಂ ವಿಜಯ್ ಚಾಲನೆ | CM Vijay

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada