• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
September 28, 2026
in Top Story
0
ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ
Share on WhatsAppShare on FacebookShare on Telegram

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಇಂದು ಅವರ ಹೇಳಿಕೆ ದಾಖಲಿಸಲಾಗಿದೆ. ನಾಳೆಯೂ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ.

ADVERTISEMENT

ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ದರ್ಶನ್‌ ಪರ ವಕೀಲರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಸಂಬಂಧ ವಿಶೇಷ ಅನುಮತಿ ಅರ್ಜಿ (SLP) ಸಲ್ಲಿಸಲಾಗಿದ್ದು, ಅರ್ಜಿ ಇನ್ನೂ ವಿಚಾರಣೆಗೆ ಪಟ್ಟಿ ಆಗಿಲ್ಲ ಎಂದು ದರ್ಶನ್‌ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ ತಿಳಿಸಿದ್ದಾರೆ.

HD Kumaraswamy : Congress ಸರ್ಕಾರಕ್ಕೆ ಚಾಟಿ ಬೀಸಿದ ಕುಮಾರಣ್ಣ..! | #pratidhvani

ಪ್ರದೋಷ್‌ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ತಡೆ ನೀಡುವಂತೆ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನ್ಯಾಯಾಲಯಗಳು ಅರ್ಜಿಯನ್ನು ಪುರಸ್ಕರಿಸಿಲ್ಲ. ಹೀಗಾಗಿ ಇಂದು ಪ್ರದೋಷ್‌ ಅವರ ಹೇಳಿಕೆಯ ಒಂದು ಭಾಗ ದಾಖಲಾಗಿದ್ದು, ಉಳಿದ ಹೇಳಿಕೆಯನ್ನು ನಾಳೆ ದಾಖಲಿಸಲಾಗುತ್ತದೆ ಎಂದು ಹಸ್ಮತ್‌ ಪಾಷಾ ಹೇಳಿದ್ದಾರೆ.

ಎಸ್‌ಪಿಪಿ ಅವರು ಪ್ರದೋಷ್‌ ಅವರ ಮುಖ್ಯ ವಿಚಾರಣೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮ ಪರವಾಗಿ ಆದೇಶ ಬಂದರೆ, ಈಗ ದಾಖಲಾಗುತ್ತಿರುವ ಹೇಳಿಕೆಯ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದರ್ಶನ್‌ ಪರ ವಕೀಲರು ತಿಳಿಸಿದ್ದಾರೆ.

HD Kumaraswamy On HDD : ನಾವು ಮನಸ್ಸು ಮಾಡಿದ್ದರೆ, ಅರ್ಧ ಬೆಂಗಳೂರೇ ನಮ್ಮದಾಗ್ತಿತ್ತು..! | #pratidhvani

ಇದೇ ವೇಳೆ, ವಿಚಾರಣೆಯ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ನಟ ದರ್ಶನ್‌ ತಲೆ ಮೇಲೆ ಕೈಹೊತ್ತು ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಪ್ತನಾಗಿದ್ದ ಪ್ರದೋಷ್‌ ಇದೀಗ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ದರ್ಶನ್‌ ಅವರ ಪ್ರತಿಕ್ರಿಯೆ ಚರ್ಚೆಗೆ ಕಾರಣವಾಗಿದೆ.ದರ್ಶನ್‌ ಅವರ ಕ್ರಾಸ್‌ ಎಕ್ಸಾಮಿನೇಷನ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಅವಕಾಶ ನೀಡಿದೆ ಎಂದು ಹಸ್ಮತ್‌ ಪಾಷಾ ತಿಳಿಸಿದ್ದಾರೆ.

 

 

Tags: #PradoshApprover WitnessDarshanDarshan CaseHashmath Pashakannada newsKarnataka Crime NewsPavithra GowdaRenukaswamy CaseSLPsupreme court
Previous Post

ಬಿಡದಿ, ನೈಸ್‌ ಹಿಂದೆ ಬಿದ್ದ ಕುಮಾರಸ್ವಾಮಿ: ರಾಜಕೀಯ ಪುನರಾಗಮನದ ತಂತ್ರವೇ? HD Kumaraswamy

Related Posts

ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು
Top Story

ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

by ಪ್ರತಿಧ್ವನಿ
September 28, 2026
0

ಷೇರು ಮಾರುಕಟ್ಟೆ ಸೋಮವಾರದ ವಹಿವಾಟನ್ನು ಭಾರೀ ಕುಸಿತದೊಂದಿಗೆ ಆರಂಭಿಸಿದೆ. ಭಾರತೀಯ ಷೇರುಪೇಟೆಯ ಬಹುತೇಕ ಪ್ರಮುಖ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ನಿಫ್ಟಿ-50 ಸೂಚ್ಯಂಕ...

Read moreDetails
ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

September 28, 2026
Rohit Sharma slips and falls from team bus steps Video goes viral

ಟೀಮ್ ಬಸ್ ಮೆಟ್ಟಿಲಿನಿಂದ ಜಾರಿ ಬಿದ್ದ ರೋಹಿತ್ ಶರ್ಮಾ: ವಿಡಿಯೋ ವೈರಲ್ | Rohit Sharma

September 28, 2026
Havent received your income tax refund yet

ಆದಾಯ ತೆರಿಗೆ ರಿಫಂಡ್ ಇನ್ನೂ ಬಂದಿಲ್ಲವೇ? ದೂರು ನೀಡುವ ಮುನ್ನ ಈ 3 ವಿಷಯ ಪರಿಶೀಲಿಸಿ | ITR

September 28, 2026
Three Central teams to assess drought in the state DCM Parameshwara

ರಾಜ್ಯದಲ್ಲಿ ಬರ ಅಧ್ಯಯನಕ್ಕೆ ಕೇಂದ್ರದ ಮೂರು ತಂಡಗಳು: ಡಿಸಿಎಂ ಪರಮೇಶ್ವರ್ | DCM Parameshwara

September 28, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada