
ಚೆನ್ನೈ: ಸೂಟ್‌ಕೇಸ್‌ನಲ್ಲಿ (suitcase)ಮಹಿಳೆಯ ಶವ ಪತ್ತೆಯಾದ A woman’s dead body in suitcase)ಘಟನೆ ಚೆನ್ನೈನಲ್ಲಿ ನಡೆದಿದೆ.ಮೃತರನ್ನು ಮಾಧವರಂ ಮೂಲದ ದೀಪಾ ಅಲಿಯಾಸ್ ವೆಳ್ಳೈಯಮ್ಮಳ್ (32) ಎಂದು ಗುರುತಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಶಿವಗಂಗಾ ಜಿಲ್ಲೆಯ ಮಣಿಕಂದನ್ ಎಂಬ ಶಂಕಿತನನ್ನು ಬಂಧಿಸಲಾಗಿದೆ.

ಸೂಟ್‌ಕೇಸ್‌ನಲ್ಲಿ ದೀಪಾಳನ್ನು ಕತ್ತರಿಸಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ, ಮಣಿಕಂನ್ ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ. ಅದನ್ನು ತೊರೈಪಾಕ್ಕಂನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಿರುವ ವಸತಿ ಪ್ರದೇಶದಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ (CCTV)ದೃಶ್ಯಾವಳಿಗಳನ್ನು ಆಧರಿಸಿ ಮಣಿಕಂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಣದ ವಿಚಾರವಾಗಿ ನಡೆದ ಜಗಳದಲ್ಲಿ ದೀಪಾ ಅವರನ್ನು ಕೊಲೆ ಮಾಡಿರುವುದಾಗಿ ಮಣಿಕಂದನ್ ಒಪ್ಪಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಅವನು ಅವಳ ಮೇಲೆ ಸುತ್ತಿಗೆಯಿಂದ ದಾಳಿ ಮಾಡಿದ್ದನು ಮತ್ತು ನಂತರ ಆಕೆಯ ದೇಹವನ್ನು ತುಂಡರಿಸಿ, ಸ್ಥಳದಿಂದ ಪರಾರಿಯಾಗುವ ಮೊದಲು ಸೂಟ್‌ಕೇಸ್‌ನಲ್ಲಿ ಭಾಗಗಳನ್ನು ವಿಲೇವಾರಿ ಮಾಡಿದ್ದಾನೆ.