ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್(Chief Minister Arvind Kejwal ) ಸಿಬಿಐನಿಂದ CBI ತಮ್ಮ ಬಂಧನ ಪ್ರಶ್ನಿಸಿ ಮತ್ತು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ತೀರ್ಪು ಇಂದು ಪ್ರಕಟವಾಗಲಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ Justice Surya Kant and Justice Ujjal Bhuyan)ಅವರನ್ನೊಳಗೊಂಡ ಸುಪ್ರೀಂ ಕೋರ್ಟ್( Supreme Court )ಪೀಠವು ತೀರ್ಪು ಪ್ರಕಟಿಸಲಿದ್ದಾರೆ ಕೇಜ್ರಿವಾಲ್ ಪರ ತೀರ್ಪು ಬಂದರೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕೇಜ್ರಿವಾಲ್ ಅರ್ಜಿ ವಿಚಾರಣೆ ನಡೆಸಿದ್ದ ಪೀಠ ಸೆ. 5 ರಂದು ತೀರ್ಪು ಕಾಯ್ದಿರಿಸಿತ್ತು ಮಾ.21 ರಂದು ಇಡಿ ಬಂಧಿಸಿದ್ದ ಬಳಿಕ ಸುಪ್ರೀಂ ಮಧ್ಯಾಂತರ ಜಾಮೀನು ನೀಡಿತ್ತು ಈ ಬೆನ್ನಲ್ಲೇ ಜೂ. 26ರಂದು ಸಿಬಿಐ ಬಂಧಿಸಿತ್ತು.